ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುಂಜೂರುಶ್ರೀನಿವಾಸರೆಡ್ಡಿ ಆಯೋಜಿಸಿದ್ದ ಲೋಕ ಕಲ್ಯಾಣಾರ್ಥ ಶ್ರೀ ಶ್ರೀನಿವಾಸ ತಿರು ಕಲ್ಯಾಣೋತ್ಸವ ಅಂಗರಂಗ ವೈಭೋಗದಿಂದ ಜರುಗಿತು, ತಿರುಮಲ-ತಿರುಪತಿ ದೇವಾಲದಿಂದ ತಂದಿದ್ದ ಭೂದೇವಿ-ಶ್ರೀ ದೇವಿ ಸಮೇತ ಶ್ರೀನಿವಾಸನ ಉತ್ಸವ ಮೂರ್ತಿಗಳನ್ನು ದೇವಾಲಯಂದಂತೆ ನಿರ್ಮಾಣ ಮಾಡಿದ್ದ ಸೆಟ್ ನಲ್ಲಿ ಪ್ರತಿಷ್ಟಾಪಿಸಿ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಭಾನುವಾರ ಸಂಜೆ 4 ಗಂಟೆಗೆ ಪ್ರಾರಂಭವಾದ ಕಲ್ಯಾಣೋತ್ಸವ ಇಳಿಸಂಜೆ ಗೋಧೂಳಿ ಲಗ್ನದಲ್ಲಿ ಅದ್ದೂರಿಯಾಗಿ ನಡೆಯಿತು ತಿರುಮಲ-ತಿರುಪತಿ ದೇವಾಲದ ಅರ್ಚಕಸ್ವಾಮಿಗಳಾದ ಶೇಷಾದ್ರಿ ಮತ್ತು ವೃಂದದ ಆಗಮಿಕರ ವೇದ-ಮಂತ್ರ ಘೋಷಗಳೊಂದಿಗೆ, ಮಂಗಳ ವಾದ್ಯಗಳ ನಡುವೆ ಅಚ್ಚುಕಟ್ಟಾಗಿ ನೇರವೇರಿಸಿದರು.
ಕಲ್ಯಾಣೋತ್ಸವಕ್ಕೆ ಆಗಮಿಸಿದ್ದ ಎಲ್ಲರಿಗೂ ತಿರುಪತಿ ಲಾಡು ನೀಡಲಾಯಿತು, ಹಳ್ಳಿಗಳಿಂದ ರುವ ಜನರಿಗೆ ಬಂದು ಹೋಗಲು ಉಚಿತ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ಗುಂಜೂರುಶ್ರೀನಿವಾಸರೆಡ್ಡಿ ದಂಪತಿ ಹಾಗು ಕುಟುಂಬದ ಸದಸ್ಯರು,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್ ದಂಪತಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರೆಡ್ಡಿ,ಒಬೇಪಲ್ಲಿ ಮಂಜುನಾಥರೆಡ್ಡಿ,ಮಾವು ಮಂಡಳಿ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ,ಕೋಟಬಲ್ಲಪಲ್ಲಿ ಸತ್ಯನಾರಯಣಶೆಟ್ಟಿ,ಯುವ ಮುಖಂಡ ಶ್ರೀರಾಮ್,ಶಿವಾಚಾರ್ಯ ನಗರ್ತ ಸಂಘದ ಮುಖಂಡ ಕಪಾಲಿಶಿವಕುಮಾರ್ ಹಾಗು ಮಹಿಳಾ ಮಂಡಳಿ ಸದಸ್ಯರು, ಯಲ್ದೂರಿನ ಸತ್ಸಂಗ ಬಳಗದ ಸದಸ್ಯರು,ವಿವಿಧ ಪಕ್ಷಗಳ ಮುಖಂಡರು ಅಪಾರ ಜನರು ಸೇರಿದಂತೆ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

