ಶ್ರೀನಿವಾಸಪುರ:ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಮಹಾನ್ ಗ್ರಂಥ ಭಾರತದ ಸಂವಿಧಾನದ ಶಕ್ತಿಯ ಫಲ ದೇಶವನ್ನು ಬಲಿಷ್ಠವಾಗಿ ಮುನ್ನಡೆಸಲು ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಹೇಳಿದರು ಅವರು ತಾಲೂಕಿನ ಆಂಧ್ರದ ಗಡಿಯಂಚಿನ ಕೊನೆಯ ಗ್ರಾಮ ಪುಲಗೂರಕೋಟೆ ಗ್ರಾಮದಲ್ಲಿ ದಲಿತ ಸೇನೆ ಮತ್ತು ವಿವಿಧ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪುತ್ತ್ತಳಿ ಅನಾವರಣ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತದಲ್ಲಿ ಎಲ್ಲಾ ಸಮಾಜಗಳು ಸಮಾನತೆಯ ಬಾಳ್ವೆ ನಡೆಸಲು ಸಂವಿಧಾನ ಮುಖ್ಯ ಕಾರಣವಾಗಿದೆ ಅಂತಹ ಮಹನೀಯನ ಪುತ್ತಳಿಯ ಅನಾವರಣ ಕಾರ್ಯಕ್ಕೆ ನೆರವು ನೀಡಿರುವ ಈ ಭಾಗದ ಬುಲೆಟ್ ಗಂಗುಲಪ್ಪ ಕುಟುಂಬದ ಸದಸ್ಯರು,ಬೆಂಗಳೂರು ಆದಿತ್ಯಬಾಬು ಇತರೆ ಮುಖಂಡರ ಕಾರ್ಯ ಶ್ಲಾಘನೀಯ ಎಂದ ಅವರು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹೋಬಳಿಗೊಂದು ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿ ಸ್ಥಾಪಿಸಲು ಯುವ ಸಮುದಾಯ ಮುಂದಾಗುವಂತೆ ಹೇಳಿದರು.
ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರುಚಿನ್ನಪ್ಪರೆಡ್ಡಿ ಮಾತನಾಡಿ, ಬಿ.ಆರ್. ಅಂಬೇಡ್ಕರ್ ಅವರು ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ ದೇಶದ ಎಲ್ಲ ಸಮಾಜಗಳ ಹಿತಕ್ಕಾಗಿ ಶ್ರಮಿಸಿ ಮೂಲ ಭೂತ ಹಕ್ಕುಗಳ, ಕರ್ತವ್ಯಗಳು, ಸಂವಿಧಾನದ ಅಡಿಯಲ್ಲಿ ನಮಗೆ ನೀಡಿದ್ದಾರೆ, ನಾವೆಲ್ಲರೂ ಸಂವಿಧಾನದ ಫಲಾನುಭವಿಗಳಾಗಿದ್ದೇವೆ, ಇವರ ಆಶಯಗಳನ್ನು ಈಡೇರಿಸಲು ನೀವು ನಾವೆಲ್ಲರೂ ಒಂದಾಗಿ ಮುಂದೆ ಹೆಜ್ಜೆ ಇಡೋಣ ಎಂದರು.
ದಲಿತ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬೀಡ ಶ್ರೀನಿವಾಸ್ ಮಾತನಾಡಿ, 80ರ ದಶಕದಲ್ಲಿ ದಲಿತರ ಸಂಘರ್ಷ ಸಂಘಟನೆಗಳು ಬಲಿಷ್ಟವಾಗಿದ್ದವು, ಇತ್ತೀಚೆಗೆ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ ಮುಂದಿನ ದಿನಗಳಲ್ಲಿ ಎಲ್ಲಾ ಸಂಘಟನೆಗಳ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ ರಾಂ ವಿಲಾಸ್ ಪಾಸ್ವಾನ್ ದಲಿತ ಸೇನೆಯನ್ನು ಹುಟ್ಟು ಹಾಕಿ ರಾಷ್ಟ್ರೀಯ ಸಂಘಟನೆಯನ್ನಾಗಿ ಬೆಳೆಸಿದರು, ಸಂಘಟನೆಗೆ ಒತ್ತು ನೀಡಿ ವಿಶೇಷವಾಗಿ ಕೋಲಾರ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲ ಪಡಿಸುವುದಾಗಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಲ್ಲೂರುಮಂಜು ಮಾತನಾಡಿ ಅಂಬೇಡ್ಕರ್ ಸಮಾನತೆಯ ಹರಿಕಾರರು ಎಂದರು ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ನರಸಿಂಹಯ್ಯ,ಬೆಂಗಳೂರು ಅಮೃತಹಳ್ಳಿ ಎ.ಎಸ್.ಐ ಆದಿತ್ಯಬಾಬು, ಉದ್ಯಮಿ ಮಹೇಶ್, ಡಿ.ಎಸ್.ಎಸ್. ತಾಲ್ಲೂಕು ಸಂಚಾಲಕ ದೊಡ್ಡ ಬಂಡಾರ್ಲಹಳ್ಳಿ ಮುನಿಯಪ್ಪ, ಕೂಸಂದ್ರರೆಡ್ಡೆಪ್ಪ, ಆವಲಕುಪ್ಪ ಹನುಮಂತಪ್ಪ, ಮಲ್ಲಗಾನಹಳ್ಳಿ ಪಾಪಣ್ಣ, ಶಿವಪ್ಪ ಪಿ.ಜಿ. ಜಿಲ್ಲಾ ಗೌ. ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಗಣೇಶ್ ಬಾಬು, ಶಾಮ್, ತಾಲ್ಲೂಕು ಅಧ್ಯಕ್ಷ ನವೀನ್ಕುಮಾರ್, ಪುಲಗೂರಕೋಟೆಗ್ರಾಮ ಪಂಚಾಯಿತಿ ದಲಿತ ಸೇನೆಯ ಅಧ್ಯಕ್ಷ ವಿಶ್ವನಾಥ್, ರಾಮಲಿಂಗಾರೆಡ್ಡಿ,ಶಿಕ್ಷಕ ರೆಡ್ಡೆಪ್ಪ, ಪಿ.ಡಿ.ಒ. ಕೃಷ್ಣ, ದಲಿತ ಸೇನೆಯ ವಿವಿಧ ವಿಭಾಗದ ಪದಾಧಿಕಾರಿಗಳು ಕಾರ್ಯಕರ್ತರು ಇನ್ನಿತರರು ಭಾಗವಹಿಸಿದ್ದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Saturday, November 23