ಶ್ರೀನಿವಾಸಪುರ:ಪಟ್ಟಣದ ಹೊರವಲಯದಲ್ಲಿನ ಕಾಲೇಜು ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುತ್ತದೆ, ಮೃತ ವಿದ್ಯಾರ್ಥಿನಿಯನ್ನು ದ್ವಿತೀಯ ಪಿಯುಸಿ ಒದುತ್ತಿದ್ದ ಬಿಂದುಶ್ರೀ(17)ಎಂದು ಗುರುತಿಸಲಾಗಿದೆ.
ಮೃತ ವಿದ್ಯಾರ್ಥಿನಿ ಶ್ರೀನಿವಾಸಪುರ ಪಟ್ಟಣದ ಹೊರವಲಯದಲ್ಲಿರುವ ಭೈರವೇಶ್ವರ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಬಿಂದುಶ್ರೀ ಚಿಕ್ಕಬಳ್ಳಾಪುರದ ಗಂಗರಕಾಲುವೆ ಗ್ರಾಮದ ಶಂಕರಪ್ಪ ಅವರ ಮಗಳಾಗಿದ್ದು ಕಾಲೇಜು ಹಾಸ್ಟೆಲ್ನಲ್ಲೆ ವಾಸವಾಗಿದ್ದು ಬೆಳಿಗ್ಗೆ ಕಾಲೇಜಿಗೆ ಹೋಗಿದ್ದು ಎಲ್ಲರಿಗೂ ಮುಂಚಿತವಾಗಿ ವಾಪಸ್ಸು ಬಂದಿರುವ ಅಕೆ ಹಾಸ್ಟೆಲ್ ನಲ್ಲಿನ ಕಬ್ಬಿಣದ ಮಂಚದ ಚೌಕಟ್ಟಿಗೆ ವೇಲ್ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ.ಪ್ರಕರಣ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕು ಗಂಗರೆಕಾಲುವೆ ಗ್ರಾಮದ ನಿವಾಸಿ ಶಂಕರಪ್ಪ ದಂಪತಿಗೆ ಮೃತ ವಿದ್ಯಾರ್ಥಿನಿ ಬಿಂದುಶ್ರೀ ಸೇರಿದಂತೆ ಮೂರು ಜನ ಮಕ್ಕಳು ಇಬ್ಬರು ಗಂಡು ಮಕ್ಕಳು ಒಬ್ಬ ಮಗಳು ಸಭ್ಯ ಕುಟುಂಬದವರು ಎಂದು ಹೆಸರು ಪಡೆದಿರುವ ಬಗ್ಗೆ ಸ್ಥಳಿಯರು ಹೇಳುತ್ತಾರೆ.