ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನ ಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಗುಂಜೂರುಶ್ರೀನಿವಾಸರೆಡ್ಡಿ ಸಿಕ್ಕಿದೆ, ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಗುಂಜೂರುಶ್ರೀನಿವಾಸರೆಡ್ಡಿ ಪಕ್ಷೇತರನಾಗಿ ಚುನಾವಣೆ ಎದರಿಸುವೆ ಎಂದು ಕ್ಷೇತ್ರಾದ್ಯಂತ ಪರ್ಯಟನೆ ನಡೆಸಿ ನಿರಂತರವಾಗಿ ತಾಲೂಕಿನ ಜನರೊಂದಿಗೆ ಒಡನಾಟದಲ್ಲಿ ಇದ್ದ ಅವರು ಚುನಾವಣಾ ರಣಕಹಳೆ ಮೊಳಗಿಸಿದ್ದರು.
ಇತ್ತಿಚಿಗೆ ಅವರ ಕಾರ್ಯಕರ್ತರು ಬಿಜೆಪಿ ಸೇರುವಂತೆ ಒತ್ತಡ ಹೇರುತ್ತಿದ್ದು ಬಿಜೆಪಿ ಸೇರುವ ಬಗ್ಗೆ ಶ್ರೀನಿವಾಸರೆಡ್ಡಿ ಮೀನಾ ಮೇಷ ಎಣಿಸುತ್ತಿದ್ದರು ಎನ್ನುತ್ತಾರೆ ಅವರ ಕಾರ್ಯಕರ್ತರು ಬದಲಾದ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕರ ಸಲಹೆ ಕಾರ್ಯಕರ್ತರ ಬಲವಂತದ ಮೇರೆಗೆ ವಿಧಾನಪರಿಷತ್ ಮುಖ್ಯಸಚೇತಕ ವೈ.ಎ.ನಾರಯಣಸ್ವಾಮಿ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಕಳೆದವಾರ ಬಿಜೆಪಿ ಸೇರ್ಪಡೆಯಾಗಿದ್ದರು.
ಗುಂಜೂರುಶ್ರೀನಿವಾಸರೆಡ್ಡಿ ಬಿಜೆಪಿ ಸೇರುವ ಸುದ್ದಿ ಹರಡುತ್ತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತ ತಾರಕ್ಕೇರಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಅವರು ಶ್ರೀನಿವಾಸರೆಡ್ಡಿ ಬಿಜೆಪಿ ಸೇರುವ ಕುರಿತಾಗಿ ತೀವ್ರ ವಿರೋಧ ವ್ಯಕ್ತಪಡಿಸಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಶ್ರೀನಿವಾಸರೆಡ್ಡಿ ಬಿಜೆಪಿ ಸೇರುವ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ತಮ್ಮ ಅಸಮಧಾನ ಹೊರಹಾಕಿದ್ದರು. ಈ ಮಧ್ಯೆ ರಾಜ್ಯ ಬಿಜೆಪಿ ವರಿಷ್ಠರು ದೆಹಲಿಗೆ ಕಳಿಸಿದ್ದ ಶ್ರೀನಿವಾಸಪುರ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಡಾ.ವೇಣುಗೋಪಾಲ್,ಲಕ್ಷ್ಮಣಗೌಡ ಮತ್ತು ಗುಂಜೂರುಶ್ರೀನಿವಾಸರೆಡ್ಡಿ ಮೂರು ಹೆಸರುಗಳನ್ನು ಪರಶೀಲನೆಗಾಗಿ ಕಳಿಸಿದ್ದರು ಬಿಜೆಪಿ ದೆಹಲಿ ವರಿಷ್ಠರು ಆಯ್ಕೆ ಪಟ್ಟಿಯಲ್ಲಿ ಗುಂಜೂರುಶ್ರೀನಿವಾಸರೆಡ್ಡಿ ಹೆಸರು ಅಂತಿಮವಾಗಿ ಪಟ್ಟಿ ಬಿಡುಗಡೆಯಾಗಿದಿಯಂತೆ.
ಕೋಲಾರ ಲೋಕಸಭೆ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳಾಗಿ ಶ್ರೀನಿವಾಸಪುರ-ಗುಂಜೂರುಶ್ರೀನಿವಾಸರೆಡ್ದಿ, ಕೋಲಾರ-ವರ್ತೂರುಪ್ರಕಾಶ್, ಮಾಲೂರು-ಮಂಜುನಾಥಗೌಡ, ಮುಳಬಾಗಿಲು(sc)-ಶೀಗೇಹಳ್ಳಿಸುಂದರ್,ಬಂಗಾರಪೇಟೆ(sc) ಎಂ.ನಾರಯಣಸ್ವಾಮಿ,ಚಿಂತಾಮಣಿ-ವೇಣುಗೋಪಾಲ್ ಅಂತಿಮ ಗೋಳಿಸಿದ್ದು ಇನ್ನುಳಿದಂತೆ ಕೆ.ಜಿ.ಎಫ್ ಹಾಗು ಶಿಡ್ಲಘಟ್ಟ ಕ್ಷೇತ್ರದ ಟಿಕೆಟ್ ಇನ್ನೂ ಆಖೈರು ಮಾಡಿಲ್ಲ ಎನ್ನಲಾಗುತ್ತಿದೆ.