ಶ್ರೀನಿವಾಸಪುರ:ಜೆಡಿಎಸ್ ಮುಖಂಡರೊಂದಿಗೆ ಕಾಂಗ್ರೆಸ್ ಮುಖಂಡ ಕೂತಿರುವ ಫೋಟೊ ತಾಲೂಕಿನಾದ್ಯಂತ ವೈರಲ್ ಆಗುತ್ತಿದೆ ಚುನಾವಣೆ ಸಮಯದಲ್ಲಿ WhatsAAp ವ್ಯಾಟ್ಸಾಪ್ ನ ವೈಯುಕ್ತಿಕ ಹಾಗು ಗ್ರೂಪಗಳಲ್ಲಿ ಶರವೇಗದಲ್ಲಿ ಹಂಚಿಕೆಯಾಗುತ್ತಿದ್ದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರಕೂತುಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಒಂದು ಕಾಲದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತರಲ್ಲಿ ಆಪ್ತರಾಗಿದ್ದ ಶೇಷಾಪುರ ಗೋಪಾಲ್ ಹಾಗು ಅವರ ಆಪ್ತರು ಎನ್ನಲಾದ ಕೆಲ ಕಾಂಗ್ರೆಸ್ ಯುವ ಮುಖಂಡರು ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ಜೊತೆಗೆ ಕೂಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿ ವಿಶೇಷವಾಗಿ ಯಲ್ದೂರು ಹೋಬಳಿಯ ಜೆಡಿಎಸ್ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದ್ದಲ್ಲದೆ ಚರ್ಚೆಗೆ ಗ್ರಾಸವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಕಳೆದ ವಿಧಾನಸಭೆ ಚುನಾವಣೆ ನಂತರದಲ್ಲಿ ಶೇಷಾಪುರ ಗೋಪಾಲ್ ರವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕ್ಯಾಂಪಿನಿಂದ ದೂರಸರಿದಿದ್ದರು ಆನಂತರ ಇಬ್ಬರ ನಡುವೆ ಸ್ನೇಹ ಸಂಪೂರ್ಣವಾಗಿ ಹಳಸಿದ ಪರಿಣಾಮ ವೇದಿಕೆಗಳು ಸಿಕ್ಕಾಗಲೆಲ್ಲ ಶೇಷಾಪುರ ಗೋಪಾಲ್ ರವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಗುಟುರು ಹಾಕುತ್ತಲೆ ಇದ್ದರು ಸಾಕಷ್ಟು ಬಾರಿ ಮಾಧ್ಯಮಗಳ ಮುಂದೆ ಸಹ ತಮ್ಮ ಅಸಮಧಾನ ಹೊರಹಾಕುತ್ತಿದ್ದರು ನಂತರದಲ್ಲಿ ಲೋಕಸಭೆ ಚುನಾವಣೆ ನಂತರ ಶೇಷಾಪುರ ಗೋಪಾಲ್ ಹೇಳಿಕೆಗಳು ಅತಿರೇಕಕ್ಕೆ ಹೋಯಿತು ಎನ್ನಬಹುದಾಗಿದ್ದು ಇದಕ್ಕೆ ರಮೇಶ್ ಕುಮಾರ್ ಸಾರ್ವಜನಿಕವಾದ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ,ಈಗ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಆಪ್ತರಾಗಿ ಗುರುತಿಸಿಕೊಂಡಿರುವ ಹಿನ್ನಲೆಯಲ್ಲಿ ಶೇಷಾಪುರ ಗೋಪಾಲ್ ಹಾಗು ರಮೇಶ್ ಕುಮಾರ್ ನಡುವೆ ತ್ವೇಷಮಯ ವಾತವರಣ ನಿರ್ಮಾಣವಾಗಿದೆ.
ವೈರಲ್ ಫೋಟೋ ಅಸಲಿಯತ್ತು ಏನು?
ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ಜೊತೆಗೆ ಶೇಷಾಪುರ ಗೋಪಾಲ್ ಕುಳತಿರುವ ಫೋಟೋ ಕಥೆ ಏನು ಹ್ಯಾಗೆ ಯಾಕೆ ಎಂಬ ಬಗ್ಗೆ ಸ್ವಥಃ ಕಾಂಗ್ರೆಸ್ ಮುಖಂಡ ಶೇಷಾಪುರ ಗೋಪಾಲ್ ಕಾರೊಂದರಲ್ಲಿ ಕುಳಿತು ವಿಡಿಯೋ ಮಾಡಿ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.ಇದರಲ್ಲಿ ಮಾತನಾಡಿರುವ ಶೇಷಾಪುರ ಗೋಪಾಲ್ ವೆಂಕಟಶಿವಾರೆಡ್ಡಿ ಜೊತೆಗೆ ಭೇಟಿಯಾಗಿರುವುದು ನಿಜ ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು ಭೇಟಿ ವೇಳೆ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ,ಇದೇನೂ ಪೂರ್ವ ನಿಯೋಜಿತವಾದ ಭೇಟಿಯೂ ಅಲ್ಲ ಇದಕ್ಕೆ ರಾಜಕೀಯ ಬಣ್ಣ ಹಚ್ಚು ಅಗತ್ಯವು ಇಲ್ಲ ಎಂದಿರುವ ಅವರು ನಾನು ಕೆ ಹೆಚ್ ಮುನಿಯಪ್ಪ ಆಪ್ತ ವಲಯ ಅನ್ನೋದು ಸತ್ಯಕ್ಕೆ ದೂರವಾದದ್ದು ನಾನು ರಮೇಶ್ ಕುಮಾರ್ ಆಪ್ತವಲಯಕ್ಕೆ ಸೇರಿದವನು ನಾನು ಯಾಕೆ ರಮೇಶ್ ಕುಮಾರ್ ಅವರಿಂದ ದೂರವಾದೆ ಅನ್ನುವುದಕ್ಕೆ ಕಾರಣ ರಮೇಶ್ ಕುಮಾರ್ ಅವರನ್ನು ಕೇಳಿ ತಿಳಿದುಕೊಳ್ಳಿ ಎಂದಿದ್ದಾರೆ ರಮೇಶ್ ಕುಮಾರ್ ಅವರು ಕಾಂಗ್ರೇಸ್ ಎಂಬ ವೇದಿಕೆಯನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡರು ಹೊರತು ಪಕ್ಷದ ಸಿದ್ಧಾಂತಗಳನ್ನು ಹಾಗೂ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲಿಲ್ಲ ಎಂದು ಅವರನ್ನು ಹತ್ತಿರದಿಂದ ಬಲ್ಲವನಾಗಿ ಹೇಳುತ್ತಿದ್ದೇನೆ,ರಮೇಶ್ ಕುಮಾರ್ ನಿಜವಾದ ಮುಖವಾಡ ಕಾಂಗ್ರೆಸ್ ನಾ ಟೋಪಿ ಆರ್ ಎಸ್ ಎಸ್ ಚೆಡ್ಡಿ ಎಂದು ವ್ಯಂಗ್ಯವಾಡಿದ್ದಾರೆ,ಕಳೆದ ಲೋಕಸಭೆ ಚುನಾವಣೆಯಲ್ಲಿ ಕೆ ಹೆಚ್ ಮುನಿಯಪ್ಪರನ್ನು ಹಾಗೂ ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಇವರ ಪಾತ್ರ ಏನಿತ್ತು ಎಂಬುದು ಜಗತ್ ಜಾಹಿರಾಗಿದೆ,ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ನಾನು ಯಾವುದೇ ಹುದ್ದೆ ಅಥಾವ ಆಮಿಷಗಳಿಗೆ ಒಳಗಾಗುವನಲ್ಲವೆಂದು ಹೇಳಿದ್ದಾರೆ.