ನ್ಯೂಜ್ ಡೆಸ್ಕ್:ಕೈಗಾರಿಕಾ ಕ್ರಾಂತಿಗೆ ಮುಂದಾಗಿರುವ ಕರ್ನಾಟಕ ಸರ್ಕಾರ, ಕೈಗಾರಿಕ ಬಂಡವಾಳಗಾರನ್ನು ಆಕರ್ಷಿಸಲು ಫಾರ್ಮಾಸುಟಿಕಲ್ ಉದ್ಯಮ ಕ್ಷೇತ್ರಕ್ಕೆ ಒತ್ತು ನೀಡುವ ಉದ್ದೇಶದಿಂದ ಕೋಲಾರ ಜಿಲ್ಲೆಯ Srinivasapura ದಲ್ಲಿ ಅಡ್ವಾನ್ಸ್ಡ್ ಹೈಟೆಕ್ ಫಾರ್ಮಾಸುಟಿಕಲ್ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ ಎಂದು ರಾಜ್ಯ ಕೈಗಾರಿಕ ಸಚಿವ ಎಂ.ಬಿ.ಪಾಟಿಲ್ ತಮ್ಮ ಸಾಮಜಿಕ ಜಾಲತಾಣ ಇನ್ಸಟಾಗ್ರಾಮ್ nimmambp ನಲ್ಲಿ ಹೇಳಿದ್ದಾರೆ.
ಔಷಧ ಕ್ಷೇತ್ರದಲ್ಲಿ ಕರ್ನಾಟಕ ಶೇ.11 ರಷ್ಟು ಆದಾಯದೊಂದಿಗೆ ಹೊಸ ದಾಖಲೆ ಬರೆಯುತ್ತಿದ್ದು, ಬಯೋಟೆಕ್ ಕ್ಷೇತ್ರದಲ್ಲಿ ಶೇ.60 ರಷ್ಟು ಪಾಲು ಪಡೆದು ದೇಶದಾದ್ಯಂತ ಪ್ರಾಬಲ್ಯ ಮೆರೆಯುತ್ತಿದೆ ಈ ಪರಂಪರೆಗೆ ಮತ್ತೊಂದು ಕಿರೀಟವಾಗಿ, ಜಾಗತಿಕ ಹೂಡಿಕೆಗಳನ್ನು ಆಕರ್ಷಿಸಲು ಕೈಗಾರಿಕಾ ಇಲಾಖೆ ಬೃಹತ್ ವೇದಿಕೆಯನ್ನು ಸೃಷ್ಟಿಸಲು ಮುಂದಾಗಿದ್ದು ಹೈಟೆಕ್ ಫಾರ್ಮಾಸುಟಿಕಲ್ ಪಾರ್ಕ್ ನಿರ್ಮಾಣದಿಂದ ರಾಜ್ಯದ ಕೈಗಾರಿಕಾ ಮತ್ತು ಆರ್ಥಿಕ ಪ್ರಗತಿಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡಲಿದೆ ಎಂದಿರುತ್ತಾರೆ.
ಕರ್ನಾಟಕವು ಇನ್ವೆಸ್ಟ್ ಕರ್ನಾಟಕ ಎಂದು ಗುರುತಿಸಲ್ಪಟ್ಟಿರುವ ತನ್ನ ಪ್ರಮುಖ GIM (ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್) 2025 ರಿಂದ ಔಷಧ ಮತ್ತು ಆರೋಗ್ಯ ರಕ್ಷಣೆಯಲ್ಲಿ ಹೆಚ್ಚು ಅಗತ್ಯವಿರುವ ಹೂಡಿಕೆಗಳನ್ನು ಆಕರ್ಷಿಸಲು ಕೆಲಸ ಮಾಡುತ್ತಿದೆ.ರಾಜ್ಯಾದ್ಯಂತ ಸಮಗ್ರ ಕೈಗಾರಿಕಾ ಅಭಿವೃದ್ಧಿಯನ್ನು ಹೆಚ್ಚಿಸಲು ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲಾಗುವ ವಲಯ-ನಿರ್ದಿಷ್ಟ ಕೈಗಾರಿಕಾ ಪಾರ್ಕ್ಗಳ ಮೇಲೆ ಕೇಂದ್ರೀಕರಿಸುತ್ತದೆ.
ಸಚಿವ ಪಾಟೀಲ್ ಅವರ ಪ್ರಕಾರ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅಡ್ವಾನ್ಸ್ಡ್ ಫಾರ್ಮಾ ಪಾರ್ಕ್,ವಿಜಯಪುರದಲ್ಲಿ ಸೋಲಾರ್ ಸೆಲ್ ಉತ್ಪಾದನಾ ಘಟಕ, ವಿಜಯಪುರದಲ್ಲಿ ಫುಡ್ ಪಾರ್ಕ್, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಜಂಗಮನಕೋಟೆಯಲ್ಲಿ ಡೀಪ್-ಟೆಕ್ ಪಾರ್ಕ್, ದಾಬಸ್ ಪೇಟೆ ಬಳಿಯ ಹನುಮಂತಪುರದಲ್ಲಿ ಮೆಗಾ ಲಾಜಿಸ್ಟಿಕ್ಸ್ ಪಾರ್ಕ್ ಮತ್ತು ಚಿಕ್ಕಬಳ್ಳಾಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿನ ಇವಿ ಕ್ಲಸ್ಟರ್ಗಳಲ್ಲಿ ಸ್ಥಾಪಿಸಲಾಗುವುದು ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರ ಸಮಾವೇಶGlobalInvestorsMeet ದಲ್ಲಿ ಹೇಳಲಾಗಿದೆ.ಫೆಬ್ರವರಿ 12 ರಿಂದ 14, 2025 ರವರೆಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೂರು ದಿನಗಳ ಬಂಡವಾಳ ಹೂಡಿಕೆದಾರ ಸಮಾವೇಶ ಕಾರ್ಯಕ್ರಮವು ರಾಜ್ಯಾದ್ಯಂತ ಸಮಗ್ರ ಕೈಗಾರಿಕಾ ಅಭಿವೃದ್ಧಿಯನ್ನು ಹೆಚ್ಚಿಸಲು ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲಾಗುವ ವಲಯ-ನಿರ್ದಿಷ್ಟ ಕೈಗಾರಿಕಾ ಪಾರ್ಕ್ಗಳ ಮೇಲೆ ಕೇಂದ್ರೀಕರಿಸುತ್ತದೆ.ಭರವಸೆ ನೀಡಿಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಮೂರು ದಿನಗಳ ಬಂಡವಾಳ ಹೂಡಿಕೆದಾರ ಸಮಾವೇಶದ ಉದ್ಘಾಟನ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ Rajnath Singh, ಮುಖ್ಯಮಂತ್ರಿ ಸಿದ್ದರಾಮಯ್ಯ,Siddaramaiah ಉಪಮುಖ್ಯಮಂತ್ರಿ DK Shivakumar,ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್,ಸಚಿವರಾದ ಕೆ.ಹೆಚ್.ಮುನಿಯಪ್ಪ,ಕೃಷ್ಣಬೈರೇಗೌಡ,ಡಾ.ಸುಧಾಕರ್,ಪ್ರಿಯಾಂಕ ಖರ್ಗೆ,ಡಾ.ಪರಮೇಶ್ವರ್,ಹೆಚ್.ಸಿ.ಮಹದೇವಪ್ಪ,ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ರಾಜ್ಯ ಸರ್ಕಾರದ ಹಲವಾರು ಸಚಿವರು ಅಧಿಕಾರಿಗಳು ಹೆಸರಾಂತ ಉದ್ಯಮಿಗಳು ಹಾಗೂ ದೇಶ ವಿದೇಶಗಳ ಹೂಡಿಕೆದಾರರು ಭಾಗವಹಿಸಿದ್ದರು,
ಇದನ್ನುನೋಡಿ:https://youtu.be/S4psDID3T9Y?si=Eox2RWs0gq_rH11P/ಶ್ರೀನಿವಾಸಪುರದಿಂದ ಉದ್ಯೋಗ ಆರಿಸಿ ಹೋಗುವ ಯುವಕರು ಇಲ್ಲೆ ಬದುಕು ಕಟ್ಟಿಕೊಳ್ಳಲಿ ವೆಂಕಟಶಿವಾರೆಡ್ಡಿ