ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಇತ್ತಿಚಿಗೆ ಬೈಕ್ ವೀಲಿಂಗ್ ಪುಂಡರ ಹಾವಳಿ ದಿನೆ ದಿನೆ ಹೆಚ್ಚುತ್ತಿದ್ದು ಇದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಶ್ರೀನಿವಾಸಪುರ ಪೋಲಿಸರು ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡನೊರ್ವನನ್ನು ಬಂಧಿಸಿ ವೀಲಿಂಗ್ ಮಾಡುತ್ತಿದ್ದ ಬೈಕ್ ಅನ್ನು ವಶಕ್ಕೆ ಪಡೆದಿರುತ್ತಾರೆ.
ಶ್ರೀನಿವಾಸಪುರ ಪಟ್ಟಣದ ಪುಂಗನೂರು ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬೈಕ್ ವೀಲಿಂಗ್ ಮಾಡುತಿದ್ದ ಶ್ರೀನಿವಾಸಪುರ ಪಟ್ಟಣದ ಅಜಾದ್ ರಸ್ತೆ ನಿವಾಸಿ ಎಜಾಜ್ ಖಾನ್ ಅವರ ಮಗ ಜಾಕಿರ್ ಖಾನ್ ಎಂಬ ಪುಂಡನನ್ನು ವಾಹನ ಸಮೇತ ಕರೆತಂದು ಪ್ರಕರಣ ದಾಖಲಿಸಿ ಪುಂಡನನ್ನು ಪೊಲೀಸ್ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಿ ವಾಹನವನ್ನು ನ್ಯಾಯಾಲಯದ ವಶಕ್ಕೆ ನೀಡಿರುತ್ತಾರೆ.
ಪಟ್ಟಣದಲ್ಲಿ ಇತ್ತಿಚಿಗೆ ಪುಂಡರ ಬೈಕ್ ವೀಲಿಂಗ್ ಮಾಡುವರು ಕರ್ಕಶವಾವಗಿ ಸದ್ದುಮಾಡುತ್ತ ಅತಿಯಾದ ವೇಗದಿಂದ ರಸ್ತೆಯಲ್ಲಿ ಅಡ್ಡಾದಿಡ್ದಿ ಬೈಕ್ ಒಡಿಸುವುದು ಹೆಚ್ಚುತ್ತಿದೆ ಇದರಿಂದ ಸಂಜೆ ಸಮಯದಲ್ಲಿ ಊರುಗಳಿಗೆ ದ್ವಿಚಕ್ರವಾಹನ ಅಥಾವ ಬೈಕ್ ನಲ್ಲಿ ಹೋಗುವಂತ ಹಳ್ಳಿಜನಕ್ಕೆ ತೊಂದರೆಯಾಗುತ್ತಿದ್ದು ಗ್ರಾಮೀಣ ಭಾಗದ ಜನತೆ ಭಯದಿಂದ ತಮ್ಮ ಜೀವಭಯದಿಂದ ದ್ವಿಚಕ್ರವಾಹನ ಒಡಿಸುತ್ತಿದ್ದರು ಎನ್ನಲಾಗಿದೆ.
ಅಪ್ರಾಪ್ತರ ಬೈಕ್ ಸವಾರಿಗೆ ಬ್ರೇಕ್ ಯಾವಾಗ?
ಕೊರೋನಾ ಕಾಲದ ನಂತರ ಬಸ್ ಹಾಗು ಸಾರ್ವಜನಿಕ ಸಾರಿಗೆ ಸಮಸ್ಯೆ ನೆಪದಲ್ಲಿ ಶೈಕ್ಷಣಿಕ ಹೆಸರಿನಲ್ಲಿ ಶಾಲಾ-ಕಾಲೇಜುಗಳಿಗೆ ಹೋಗಬೇಕು ಎಂದು ಅಪ್ರಾಪ್ತರು ದ್ವಿಚಕ್ರ ವಾಹನ ಒಡಿಸುವುದು ಸಾಮಾನ್ಯವಾಗಿದೆ.ಈ ಬಗ್ಗೆ ಕ್ರಮ ಜರುಗಿಸಲು ಪೋಲಿಸರು ಅಸಯಾಕರಾಗಿದ್ದಾರೆ ಬಹುತೇಕ ಅಪ್ರಪ್ತಾ ಬೈಕ್ ಸವಾರರು ಸ್ಥಳಿಯ ರಾಜಕೀಯ ಅಥಾವ ಇನ್ಯಾವುದೆ ಕ್ಷೇತ್ರಗಳಲ್ಲಿ ಪ್ರತಿಷ್ಠಿತರಾಗಿ ಖ್ಯಾತಿ ಹೊಂದಿರುವ ಮಕ್ಕಳೆ ಅಗಿರುವ ಕಾರಣ ಅಪ್ರಪ್ತಾ ಬೈಕ್ ಸವಾರರನ್ನು ಪೋಲಿಸರು ಹಾಗೆ ಬಿಟ್ಟು ಕಳಿಸುತ್ತಿದ್ದಾರೆ ಎನ್ನಲಾಗಿದೆ.