ಶ್ರೀನಿವಾಸಪುರ:ಇದ್ದಕಿದ್ದಂತೆ ತಾಲೂಕು ಆಡಳಿತ ನಿದ್ದೆಯಿಂದ ಎಚ್ಚೆತ್ತುಕೊಂಡ ಹಿನ್ನಲೆಯಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿ ಎಂ.ಜಿ.ರಸ್ತೆಯಲ್ಲಿ ಫುಟ್ ಬಾತ್ ಮೇಲೆ ಅಕ್ರಮವಾಗಿ ನಡೆಸುತ್ತಿದ್ದ ಅವರೆಕಾಯಿ ಮಂಡಿಗಳನ್ನು ತೆರವುಗೊಳಿಸಿದ್ದೆ ಅಲ್ಲದೆ ಬಾಲಕೀಯರ ಕಾಲೇಜು ಆವರಣದಲ್ಲಿ ಅಕ್ರಮವಾಗಿ ನಿಲ್ಲಿಸಿದ್ದ ಖಾಸಗಿ ವಾಹನಗಳಿಗೆ ದಂಡ ವಿಧಿಸಿದ ಘಟನೆ ನಡೆಯಿತು.
ಗುರುವಾರ ರೈತ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆ ನಂತರ ಎಚ್ಛೆತ್ತ ತಾಲೂಕು ಆಡಳಿತ ಪುರಸಭೆ ಅಧಿಕಾರಿಗಳಿಗೆ ಎಂ ಜಿ ರಸ್ತೆಯಲ್ಲಿ ನಡೆಯುತ್ತಿರುವ ಅವರೇಕಾಯಿ ವ್ಯಾಪಾರ ತೆರವುಗೊಳಿಸುವಂತೆ ಸೂಚಿಸಿದ ಪರಿಣಾಮ ಪೋಲಿಸರ ಸಹಕಾರದೊಂದಿಂಗೆ ಫೀಲ್ಡಿಗಿಳಿದ ಪುರಸಭೆ ಸಿಬ್ಬಂದಿ ಅವರೇಕಾಯಿ ಮಂಡಿ ವ್ಯಾಪಾರಸ್ಥರಿಗೆ ತೆರವು ಗೋಳಿಸುವಂತೆ ಬಿಸಿ ಮುಟ್ಟಿಸಿದರು.
ಶ್ರೀನಿವಾಸಪುರದಲ್ಲಿ ವಿಶಾಲವಾದ APMC ಮಾರುಕಟ್ಟೆ ಇದ್ದರೂ ಅವರೇಕಾಯಿ ಮಂಡಿ ವ್ಯಾಪಾರಸ್ಥರು ಧಿಮಾಕಿನಿಂದ ಎಂ.ಜಿ.ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತ ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದಾರೆ ಎಂದು ರೈತ ಸಂಘದ ಬಂಗವಾದಿನಾಗರಾಜಗೌಡ ಆರೋಪಿಸಿ ಪ್ರತಿಭಟನೆ ನಡೆಸಿದ್ದರಿಂದ, ಇಂದು ಪೋಲಿಸರು ಮತ್ತು ಪುರಸಭೆ ಸಿಬ್ಬಂದಿ ಅವರೇಕಾಯಿ ವ್ಯಾಪಾರ ತೆರವುಗೊಳಿಸಲು ಅವರೆಕಾಯಿ ಮೂಟೆಗಳನ್ನು ಪುರಸಭೆ ಟ್ರಾಕ್ಟರ್ ಗೆ ತುಂಬಿಸಲು ಮುಂದಾದಾಗ ವಿಚಲಿತ ಗೊಂಡ ಅವರೇಕಾಯಿ ಮಂಡಿಗಳ ಕೆಲ ಮಾಲಿಕರು ಈಗಾಗಲೆ ವ್ಯಾಪಾರ ಶುರುಮಾಡಿ ಒಂದು ತಿಂಗಳಾಗುತ್ತಿದೆ ಈಗ ವ್ಯಾಪಾರ ವಹಿವಾಟು ನಿಲ್ಲಿಸಿದರೆ ಹೊರ ರಾಜ್ಯಗಳಿಗೆ ನಾವು ಕೊಟ್ಟಿರುವಂತ ಅವರೆಕಾಯಿ ಸಾಲದ ವ್ಯವಹಾರ ಏಕಾ ಏಕಿ ನಿಂತುಹೋಗುತ್ತದೆ ಲಕ್ಷಾಂತರ ರೂಪಾಯಿ ಸಾಲ ಮರುಪಾವತಿ ಆಗದೆ ನಾವು ನಷ್ಟಕ್ಕೆ ಒಳಗಾಗುತ್ತಿವಿ ಅವರೆಕಾಯಿ ಸುಗ್ಗಿ ಇನ್ನೂ ಹದಿನೈದು ಇಪ್ಪತ್ತು ದಿನ ನಡೆಯುತ್ತದೆ ಇಲ್ಲೆ ವಹಿವಾಟು ನಡೆಸಲು ಅವಕಾಶ ನೀಡುವಂತೆ ಗೊಗೆರೆದರಾದರು ಇದಕ್ಕೆ ಪೋಲಿಸರು ಒಪ್ಪಲಿಲ್ಲ.
ಶಾಸಕರ ಮಾತಿಗು ಜಗ್ಗದ ಅಧಿಕಾರಿಗಳು
ಅವರೆಕಾಯಿ ಮಂಡಿ ವ್ಯಾಪಾರಸ್ಥರ ಪರವಾಗಿ ಶಾಸಕ ವೆಂಕಟಶಿವಾರೆಡ್ಡಿ ವ್ಯಾಪರ ಮಾಡಿಕೊಳ್ಳಲು ಇನ್ನು ಹದಿನೈದು ದಿನಗಳ ಕಾಲವಕಾಶ ನೀಡುವಂತೆ ತಾಲೂಕು ಅಧಿಕಾರಿಗಳಿಗೆ ಸೂಚಿಸಿದರಾದರೂ,ಅಧಿಕಾರಿಗಳು ಶಾಸಕರ ಮಾತಿಗೆ ಕ್ಯಾರೆ ಎನ್ನಲಿಲ್ಲ ಅವರ ಮಾತನ್ನು ಗಣನೆಗೆ ತಗೆದುಕೊಳ್ಳಲಿಲ್ಲ,ಇದಕ್ಕೆ ಆಕ್ರೋಶಗೊಂಡ ಕೆಲ ಅವರೆಕಾಯಿ ವ್ಯಾಪರಸ್ಥರು ಶಾಸಕರ ವಿರುದ್ದ ತಮ್ಮ ಅಸಹನೆ ಹೊರಹಾಕಿದರು.
ಅಕ್ರಮ ಪಾರ್ಕಿಂಗ್ ಗೆ ಫೈನ್
ಸರ್ಜಾರಿ ಬಾಲಕೀಯರ ಕಾಲೇಜು ಆವರಣದಲ್ಲಿ ಅಕ್ರಮವಾಗಿ ನಿಲ್ಲಿಸಿದ್ದ ಖಾಸಗಿ ವಾಹನಗಳಿಗೆ ದಂಡ ಪೋಲಿಸರು ದಂಡ ವಿಧಿಸಿ ಎಚ್ಚರಿಗೆ ನೀಡಿದರು.ಹೆಣ್ಣುಮಕ್ಕಳ ಕಾಲೇಜು ಆವರಣದಲ್ಲಿ ಅಡ್ದಾದಿಡ್ಡಿ ಕಾರು ಮತ್ತು ಇತರೆ ವಾಹನಗಳನ್ನು ನಿಲ್ಲಿಸಿ ಊರು ಸುತ್ತಲು ಹೋಗುವಂತ ಜನರ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ವಿದ್ಯಾರ್ಥಿನಿಯರು ಓಡಾಡಲು ತೊಂದರೆ ಆಗುತ್ತದೆ ಜೊತೆಗೆ ಕೆಲವೊಮ್ಮೆ ವಾಹನದಿಂದ ವಾಯು ಮಾಲಿನ್ಯ ಶಬ್ದ ಮಾಲಿನ್ಯವನ್ನು ವಿದ್ಯಾರ್ಥಿನಿಯರು ಎದರಿಸಬೇಕಾಗಿತ್ತು ಈ ಬಗ್ಗೆ ಕಾಲೇಜು ಸಿಬ್ಬಂದಿ ಮನವಿ ಮಾಡಿದ್ದರೂ ವಾಹನ ಮಾಲೀಕರಿಗೆ ಡೊಂಟ್ ಕೇರ್ ಆಗಿತ್ತು.ಸ್ಥಳೀಯ ಜನತೆ ಹೇಳುವಂತೆ ಬಾಲಕೀಯರ ಕಾಲೇಜು ಆವರಣದಲ್ಲಿ ನಿಲ್ಲಿಸುವ ವಾಹನಗಳು ಬಹುತೇಕ ಸರ್ಕಾರಿ ನೌಕರರದಂತೆ.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Thursday, November 21