ಶ್ರೀನಿವಾಸಪುರ:ಚುನಾವಣೆ ದಿನ ಹಾಗು ಮಾರನೆ ದಿನ ಗುರುವಾರ ಶ್ರೀನಿವಾಸಪುರ ಪಟ್ಟಣದಲ್ಲಿ ಗಲಭೆಗಳಿಗೆ ಕಾರಣವಾಗಿ ವ್ಯಕ್ತಿಯೊರ್ವನಿಗೆ ಇರಿದ ಆರೋಪದಲ್ಲಿ ಶ್ರೀನಿವಾಸಪುರ ಠಾಣೆಯಲ್ಲಿ ಪಟ್ಟಣದ ಇಂದಿರಾನಗರ ಹಾಗು ಹೈದರಾಲಿ ಮೊಹ್ಹಲ್ಲಾದ ನಿವಾಸಿಗಳಾದ ಐವರ ವಿರುದ್ದ ಪ್ರಕರಣ ದಾಖಲಾಗಿದ್ದು ಇದರಲ್ಲಿ ಆರೀಫ್ ಹಾಗು ನಾಸೀರ್ ಎನ್ನುವ ಇಬ್ಬರನ್ನು ಶ್ರೀನಿವಾಸಪುರ ಪೋಲಿಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ
ಈ ಸಂಬಂದ ಪೋಲಿಸರು ಫುಲ್ ಹೈ ಆಲರ್ಟ್ ಆಗಿದ್ದು ಚಿಂತಾಮಣಿ ವೃತ್ತ, ಮೊಹ್ಹಲ್ಲಾಗಳಲ್ಲಿ ಜನ ಜಾಗೃತಿ ಸಭೆ ನಡೆಸಿರುವ ಪೋಲಿಸರು ಚುನಾವಣೆ ಫಲಿತಾಂಶ ಹೊರ ಬಿದ್ದ ನಂತರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಯಾವುದೆ ಕಾರಣಕ್ಕೂ ಪಟಾಕಿ ಹೊಡೆಯುವುದು ವಿಜಯೋತ್ಸವ ಮೆರೆವಣಿಗೆ ಮಾಡುವುದನ್ನು ನಿಷೇಧಿಸಲಾಗಿದ್ದು ಇಂತಹ ಕಾರ್ಯಗಳಲ್ಲಿ ಯಾರು ತೊಡಗಿಸಿಕೊಳ್ಳಬಾರದು ಎಂದು ಸೂಚನೆ ನೀಡಿರುತ್ತಾರೆ.ರಾಜ್ಯ ಸಶಸ್ತ್ರ ಮೀಸಲು ಪಡೆ ಬಂದೋಬಸ್ತ್ ಅನ್ನು ನಿಯೋಜಿಸಿ ಬಿಗಿ ಬದ್ರತೆ ಮುಂದುವರೆಸಿದ್ದಾರೆ.
ಸಮುದಾಯದ ಮುಖಂಡರ ಜೊತೆಗೆ ಶಾಂತಿ ಸಭೆ ನಡೆಸಿ ಮಾತನಾಡಿದ ಪೋಲಿಸ್ ಇನ್ಸಪೇಕ್ಟರ್ ನಾರಯಣಸ್ವಾಮಿ ಯಾರು ಪ್ರೇರೆಪಿತ ಮಾತುಗಳಿಗೆ ಮರುಳಾಗಬಾರದು ಯಾವುದೆ ಕಾರಣಕ್ಕೂ ಕಾನೂನು ಕೈಗೆ ತಗೆದುಕೊಳ್ಳದಂತೆ ವಿನಂತಿಸಿದ್ದಾರೆ.
ಅಡ್ಡಗಲ್ ಗ್ರಾಮದಲ್ಲಿ ಇಂದು ಸಂಜೆ ರಾಜಕೀಯ ಗಲಭೆ
ರಮೇಶ್ ಕುಮಾರ್ ಸ್ವಗ್ರಾಮವಾದ ಅಡ್ಡಗಲ್ ಗ್ರಾಮದಲ್ಲಿ ಇಂದು ಸಂಜೆ ರಾಜಕೀಯ ಗಲಭೆಯಾಗಿದ್ದು ಇಬ್ಬರ ಮೆಲೆ ಹಲ್ಲೆಯಾಗಿದೆ ಹಲ್ಲೆಗೊಳಗಾದ ಯುವಕರನ್ನು ಅಡ್ಡಗಲ್ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಉಮರೇಜ್ ಹಾಗು ತಬರೇಜ್ ಎಂದು ಗುರುತಿಸಲಾಗಿದೆ ಇಬ್ಬರು ಸಹೋದರರು ಎನ್ನಲಾಗಿದ್ದು ಇವರ ಮೆಲೆ ಅಡ್ಡಗಲ್ ಗ್ರಾಮದ ಜೆಡಿಎಸ್ ಕಾರ್ಯಕರ್ತ ಶಾಕು ಎನ್ನುವ ವ್ಯಕ್ತಿ ಹಲ್ಲೆ ಮಾಡಿರುವ ಬಗ್ಗೆ ಹೇಳಲಾಗಿದೆ ಹಲ್ಲೆಗೊಳಗಾದ ತಬರೇಜ್ ತೀವ್ರವಾಗಿ ಗಾಯಗೊಂಡಿರುವ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಶ್ರೀನಿವಾಸಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಗಲಭೆಯ ವಿಷಯ ತಿಳಿಯುತ್ತಲೆ ಗ್ರಾಮದಲ್ಲೆ ಇದ್ದ ರಮೇಶ್ ಕುಮಾರ್ ಆಸ್ಪತ್ರೆ ಬಳೆ ದಾವಿಸಿ ಪರಿಸ್ಥಿಯ ಬಗ್ಗೆ ಮಾಹಿತಿ ಪಡೆದಿರುತ್ತಾರೆ,ಗೌವನಪಲ್ಲಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳದಲ್ಲಿ ಪೋಲಿಸರ ಬಿಗಿ ಬಂದೊ ಬಸ್ತು ಏರ್ಪಡಿಸಿರುತ್ತಾರೆ.