- ರೈತಾಪಿ ಮಕ್ಕಳೆ ಇರುವ
- ಶಾಲೆ ಪ್ರಾರಂಭದಿಂದಲೂ
- ದಾಖಲೆ ಫಲಿತಾಂಶ
ಶ್ರೀನಿವಾಸಪುರ :ತಾಲೂಕಿನ ಪ್ರತಿಷ್ಠಿತ ಖಾಸಗಿ ವಿಐಪಿ ಶಾಲೆ ಸಿ.ಬಿ.ಎಸ್.ಇ 10ನೇ ತರಗತಿ ಪರೀಕ್ಷೆಯಲ್ಲಿ 100 ಫಲಿತಾಂಶ ಸಾಧಿಸಿದೆ ಎಂದು ಶಾಲಾ ಆಡಳಿತ ಮಂಡಲಿ ಅಧ್ಯಕ್ಷಡಾ|| ವೇಣುಗೋಪಾಲ್ ತಿಳಿಸಿದರು. ಅವರು ಶಾಲ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ವಿಐಪಿ ಶಾಲೆಯ ಸಿಬಿಎಸ್ಇ 10ನೇ ತರಗತಿಯಲ್ಲಿ ಒಟ್ಟು 50 ವಿದ್ಯಾರ್ಥಿಗಳು ಸಿಬಿಎಸ್ಇ ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ 50 ವಿದ್ಯಾರ್ಥಿಗಳು ತೇರ್ಗಡೆಯಾಗುವುದರ ಮೂಲಕ ಶಾಲೆಗೆ ಶೇಕಡಾ ನೂರರಷ್ಟು ಫಲಿತಾಂಶ ತಂದು ಕೊಟ್ಟಿದ್ದಾರೆ ಎಂದರು.
ವಿಐಪಿ ಶಾಲೆ ಪ್ರಾರಂಭವಾಗಿ 9 ವರ್ಷಗಳು ಕಳೆಯುತ್ತಿದೆ ಇದುವರೆಗೂ ಸಿಬಿಎಸ್ಇ 10ನೇ ತರಗತಿಯ 3 ಬ್ಯಾಚ್ ವಿದ್ಯಾರ್ಥಿಗಳು ಉತ್ತಮವಾಗಿ ನೂರರಷ್ಟು ಫಲಿತಾಂಶ ಸಾಧಿಸಿಕೊಂಡು ಸಿಬಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತ ಬಂದಿದ್ದು ಈ ಬಾರಿಯೂ 4ನೇ ಬ್ಯಾಚ್ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ- 07, ಉನ್ನತ ಶ್ರೇಣಿ– 10, ಪ್ರಥಮ ಶ್ರೇಣಿ -15, ದ್ವಿತೀಯಶ್ರೇಣಿ– 12,ತೃತೀಯ ಶ್ರೇಣಿಯಲ್ಲಿ -06 ವಿದ್ಯಾರ್ಥಿಗಳು ತೇರ್ಗಡೆಯಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದರು. ಸುರಭಿ.ಜಿ.ಶಂಕರ್ ಎಂಬ ವಿದ್ಯಾರ್ಥಿನಿ 483 ಅಂಕಗಳನ್ನು ಗಳಸಿ 97% ಜಿಲ್ಲೆಗೆ ಅತಿಹೆಚ್ಚು ಅಂಕ ಪಡೆದ ಹೆಗ್ಗಳಿಕೆಗೆ ಕಾರಣರಾಗಿದ್ದಳೆ.
ರೈತಾಪಿ ಕುಟುಂಬದ ಮಕ್ಕಳೆ ಹೆಚ್ಚು
ವಿಐಪಿ ಶಾಲೆಯಲ್ಲಿ ಗ್ರಾಮೀಣ ಭಾಗದ ರೈತಾಪಿ ಕುಟುಂಬಗಳ ಮಕ್ಕಳೆ ಹೆಚ್ಚಾಗಿ ಒದುತ್ತಿದ್ದು ಅವರು ಉಜ್ವಲ ಭವಿಷ್ಯತ್ತಿಗೆ ಉತ್ತಮ ಕನಸನ್ನು ಕಟ್ಟಿಕೊಂಡು ಅತ್ಯತ್ತಮವಾಗಿ ಅಭ್ಯಾಸ ಮಾಡುತ್ತ ಹೆತ್ತವರಿಗೆ ಮತ್ತು ಶಾಲೆಗೆ ಉತ್ತಮ ಹೆಸರು ತರುತ್ತಿದ್ದಾರೆ ಶಾಲೆ ಬೋಧಕ ಸಿಬ್ಬಂದಿ ಪೋಷಕರ ಆಶಯದಂತೆ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ವಿಐಪಿ ಶಾಲಾ ಆಡಳಿತ ಮಂಡಲಿ ಕಾರ್ಯದರ್ಶಿ ಡಾ|| ಕವಿತಾ, ಪ್ರಾಂಶುಪಾಲೆ ಅಸ್ಮಾತಬ್ಸುಮ್, ಉಪಪ್ರಾಂಶುಪಾಲೆ ದೀಪ, ಮುಖ್ಯ ಶಿಕ್ಷಕ ಜಬಿಲ್ಪಾಷಾ ಹಾಜರಿದ್ದರು.
ಮಕ್ಕಳಲ್ಲಿ ಸಂಭ್ರಮ: ಸಾಧನೆಗೈದ ವಿದ್ಯಾರ್ಥಿ ಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಪೋಷಕರೊಂದಿಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರಿಗೆ ಸಿಹಿ ಹಂಚಿ ಸಂತಸಪಟ್ಟರು. ಈ ವೇಳೆ ಸಾಧನೆಗೈದ ವಿದ್ಯಾರ್ಥಿನಿ ಸುರಭಿಯನ್ನು ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು,ಉನ್ನತ ವಿದ್ಯಾಭ್ಯಾಸದಲ್ಲಿಯೂ ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದರು.ಶಾಲೆಯು ನೂರಕ್ಕೆ ನೂರರಷ್ಟು ಫಲಿತಾಂಶಕ್ಕೆ ಕಾರಣರಾದ ಪ್ರಾಂಶುಪಾಲರಿಗೆ, ಶಿಕ್ಷಕರಿಗೆ, ಸಿಬ್ಬಂದಿಯನ್ನು ಆಡಳಿತ ಮಂಡಳಿ ಅಭಿನಂದಿಸಿದರು.