ಶ್ರೀನಿವಾಸಪುರ:ಒಂದು ಕಾಲವಿತ್ತು ನಮ್ಮ ಹಿರಿಯರು ಗಾಣದಿಂದ ತೆಗೆದ ಎಣ್ಣೆಯಲ್ಲಿಯೇ ಅಡುಗೆ ಮಾಡುತ್ತಿದ್ದರು ಬದಲಾದ ಕಾಲಘಟ್ಟದಲ್ಲಿ ಆಧುನಿಕತೆಯ ಭರಾಟೆಯಲ್ಲಿ ಗಾಣಗಳು ಮಾಯವಾಗಿ ಪಾಕೆಟ್ ಆಯಿಲ್ ಗಳು ಬಂದವು.ಆದರೆ ಈಗ scene reverse ಅಗಿದೆ, ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅಡುಗೆ ರೀಫೈಂಡ್ ಪಾಕೆಟ್ ಆಯಿಲ್ ಕಲಬೆರಕೆಯಿಂದ ಕೂಡಿರುತ್ತದೆ.
ರೀಫೈನ್ಡ್ ಆಯಿಲ್ ಅಂತ ಶಾಪ್ ಗಳಿಂದ ತರುವಂತ ಯಾವುದೆ ಎಣ್ಣೆ ಶುದ್ಧವಲ್ಲ,ರಾಸಾಯನಿಕ ಮಿಶ್ರಿತವಾಗಿರುತ್ತದೆ ಸದ್ದಿಲ್ಲದೆ ಮನುಷ್ಯನನ್ನು ಅನಾರೋಗ್ಯಕ್ಕೆ ಈಡುಮಾಡುತ್ತದೆ ಎಂದು ಜನ ಹೇಳುತ್ತಾರೆ ಇದನ್ನು ಆಹಾರ ತಂತ್ರಜ್ಞರು ದೃಡಪಡಿಸುತ್ತಿದ್ದಾರೆ.
ಈ ಎಲ್ಲಾ ಗೊಂದಲ ಗೌಜಲುಗಳ ಸಹವಾಸ ನಮಗೆ ಬೇಡ ಎಂದು ಜನ ಮತ್ತೆ ಗಾಣದ ಎಣ್ಣೆ ಬಳಸಲು ಮುಂದಾಗುತ್ತಿದ್ದಾರೆ ಇದರ ಪರಿಣಾಮ ಎಣ್ಣೆ ತೆಗೆಯುವ ಉದ್ಯಮಗಳು ಹಳ್ಳಿ ಸಣ್ಣ ಪುಟ್ಟ ಪಟ್ಟಣಗಳಲ್ಲೂ ಆರಂಭವಾಗುತ್ತಿವೆ.ನಿರುದ್ಯೋಗಿ ಯುವಕರು ಯುವತಿಯರು ಗಾಣದಿಂದ ಎಣ್ಣೆ ತೆಗೆಯುವ ಉದ್ಯಮವನ್ನು ಸ್ಥಾಪಿಸಿ ಯಶಸ್ವಿಯಾಗುತ್ತಿದ್ದಾರೆ, ಇಂತಹ ಯಶ್ವಸಿ ಯುವ ಉದ್ಯಮಿಯ ಪಟ್ಟಿಯಲ್ಲಿ ಶ್ರೀನಿವಾಸಪುರ ತಾಲೂಕಿನ ಕೊಡಿಚರವು ಗ್ರಾಮದ ಗಣೇಶ್ ಎಂಬುವರು ಬಾಬಾ ಆಯಿಲ್ ಮಿಲ್ ಗಾಣದ ಎಣ್ಣೆ ಘಟಕ ಪ್ರಾರಂಭಿಸಿ ಮರದ ಗಾಣದ ಶುದ್ಧ ಎಣ್ಣೆಯನ್ನು ತಯಾರಿಸುತ್ತ ಮಾರಟಮಾಡುತ್ತಿದ್ದಾರೆ,ರಾಜ್ಯಾದ್ಯಾಂತ ಗ್ರಾಹಕರನ್ನು ಹೊಂದುವ ಮೂಲಕ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ.ಗಣೇಶ್ ಅವರದ್ದು ಮೂಲತಃ ಬೋದಕ ವೃತ್ತಿ,ಕೊವೀಡ್ ಸಮಯದಲ್ಲಿ ಇವರ ಉದ್ಯೋಗಕ್ಕೆ ತೊಂದರೆಯಾದಾಗ ಅವರಿಗೆ ಹೊಳೆದಿದ್ದು ಉದ್ಯಮಿ ಆಗಬೇಕು ಎಂಬ ಛಲ ಈ ಹಿನ್ನಲೆಯಲ್ಲಿ ಗಣೇಶ್ ಅವರು ಸ್ವಂತ ಗ್ರಾಮ ಕೊಡಿಚರವಿನಲ್ಲಿ ಸುಮಾರು 4 ಲಕ್ಷ ಹಾಗು ಬ್ಯಾಂಕ್ ಸಹಕಾರದೊಂದಿಗೆ 10 ಲಕ್ಷ ಬಂಡವಾಳದೊಂದಿಗೆ ಉದ್ಯಮವನ್ನ ಆರಂಭಿಸಿದರು.ಇವರ ಎಣ್ಣೆ ಉದ್ಯಮದಲ್ಲಿ ಇಡಿ ಕುಟುಂಬ ತೊಡಗಿಸಿಕೊಂಡಿದ್ದು ಇವರು ಗಾಣದಿಂದ ಶೇಂಗಾ,ಕೊಬ್ಬರಿ,ಕುಸುಬಿ,ಸೂರ್ಯಕಾಂತಿ,ಸಾಸಿವೆ,ಎಳ್ಳೆಣ್ಣೆಗಳನ್ನು ತೆಗೆದು, ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ
ಮಾರುಕಟ್ಟೆಯಲ್ಲೂ ಶೇಂಗಾ ಎಣ್ಣೆ ಪಾಕೆಟ್ ಸಿಗುತ್ತದೆಯಾದರೂ ಅಲ್ಲಿನ ಎಣ್ಣೆಯಲ್ಲಿ ಪ್ಯಾರಾಫಿನ್ ಆಯಿಲ್ ಮಿಶ್ರಣ ಮಾಡುತ್ತಾರೆ ಅದನ್ನು ಪ್ರತಿ ಲೀಟರ್ ಕೇವಲ 150/- ರೂಪಾಯಿಗೆ ಮಾರುತ್ತಾರೆ.ಆದರೆ ಬಾಬಾ ಆಯಿಲ್ ಮಿಲ್ ನಲ್ಲಿ ಒಂದು ಲೀಟರ್ ಕಡಲೆಕಾಯಿ ಬೀಜದ ಎಣ್ಣೆ 280 ರೂಪಾಯಿ ಆಗುತ್ತದೆ ಅದಕ್ಕೆ ಗಣೇಶ್ ಹೇಳುವುದೆನೆಂದರೆ 3 ಕೆಜಿ ಶೇಂಗಾ ಬೀಜವನ್ನು ಗಾಣಕ್ಕೆ ಹಾಕಿದರೆ ಒಂದು ಕೆಜಿ ಎಣ್ಣೆ ಬರುತ್ತದೆ.ಸ್ಥಳೀಯ ರೈತರಿಂದಲೂ ನೇರವಾಗಿ ಖರೀದಿ ಮಾಡುತ್ತೇವೆ ಹೆಚ್ಚಿನ ಅವಶ್ಯಕತೆ ಇದ್ದಾಗ ಕೋಲಾರ,ಚಿಂತಾಮಣಿ ಮತ್ತು ಆಂಧ್ರದ ಬಿ.ಕೊತ್ತಕೋಟ ಯಿಂದ ಎಣ್ಣೆಕಾಳುಗಳನ್ನು ಖರೀದಿಮಾಡಿ ತರಲಾಗುತ್ತದೆ ವಾತವರಣದ ಅನಕೂಲತೆಯ ಮೇರೆಗೆ ಕಡಲೆಕಾಯಿ ಬೀಜವನ್ನು ಹದಗೊಳಿಸಿದ ನಂತರ ಸಂಸ್ಕರಿಸಿ ಗಾಣಕ್ಕೆ ಹಾಕಲಾಗುತ್ತದೆ ಎನ್ನುತ್ತಾರೆ. ಕಡಲೆಕಾಯಿ ಬೀಜದ ಎಣ್ಣೆಯನ್ನು ಅರ್ದ ಕೆಜಿ, 1ಕೆಜಿ ಹಾಗು 5 ಕೆಜಿ ಪ್ಲಾಸ್ಟಿಕ್ ಕ್ಯಾನುಗಳಲ್ಲಿ ಶ್ರೀನಿವಾಸಪುರ ಹಾಗು ಕೋಲಾರದ ನಗರಗಳಲ್ಲಿನ ಗ್ರಾಹಕರಿಗೆ ನೇರವಾಗಿ ಮನೆ ಬಾಗಿಲಿಗೆ ತಲುಪಿಸುತ್ತಿದ್ದು ಬೆಂಗಳೂರು ನಗರ ಸೇರಿದಂತೆ ಆಂಧ್ರ ಕರ್ನಾಟಕದಲ್ಲಿರುವ ತಮ್ಮ ಗ್ರಾಹಕರಿಗೂ ದಿ ಪ್ರೊಫೇಷನಲ್ ಕೊರಿಯರ್ ಮೂಲಕ ಗಾಣದ ಎಣ್ಣೆಗಳಾದ ಕಡಲೆಕಾಯಿ ಬೀಜದ ಎಣ್ಣೆ,ಕುಸುಬಿ,ಸೂರ್ಯಕಾಂತಿ, ಸಾಸಿವೆ,ಎಳ್ಳೆಣ್ಣೆ,ಕೊಬ್ಬರಿ ಎಣ್ಣೆಗಳನ್ನು ತಲುಪಿಸುತ್ತಿದ್ದಾರೆ.ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಎಣ್ಣೆ ಬೇಡ ಎನ್ನುವ ಪರಿಸರ ಸ್ನೇಹಿ ಗ್ರಾಹಕರು ಸ್ಟಿಲ್ ಡಬರಿಯನ್ನು ತಂದು ನೇರವಾಗಿ ಬಾಬಾ ಆಯಿಲ್ ಮಿಲ್ ಬಳಿಯಲ್ಲಿ ಎಣ್ಣೆ ತಗೆದುಕೊಳ್ಳಬಹುದು ಶುದ್ಧ ಗಾಣದ ಎಣ್ಣೆ ಬೇಕಿದ್ದವರು ಗಣೇಶ್ ಅವರನ್ನು ಸಂಪರ್ಕಿಸಬಹುದು 9481435515
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Thursday, November 21