- ಆಂಧ್ರಕ್ಕೆ ಹರಿದು ಹೋಗುತ್ತಿರುವ ನೀರು.
- ಇಲ್ಲೇ ಉಳಿಸಿಕೊಳ್ಳುವ ಪ್ರಯತ್ನಕ್ಕೆ ರಮೇಶ್ ಕುಮಾರ್ ಯೋಜನೆ?
- ಬಿರಂಗಿ ನಾಲೆಗೆ ಅಡ್ದವಾಗಿ ಪ್ರಾಜೆಕ್ಟ್ ನಿರ್ಮಾಣಕ್ಕೆ ಚಿಂತನೆ.
ಶ್ರೀನಿವಾಸಪುರ:ಹಲವು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ತಾಲೂಕಿನ ಉತ್ತರ ಭಾಗದ ಬಹುತೇಕ ಕೆರೆಗಳು, ದೊಡ್ಡಹಳ್ಳಗಳು, ಕುಂಟೆಗಳು, ಚೆಕ್ ಡ್ಯಾಮ್ ಗಳು ಕೊಡಿ ಹೊಗುತ್ತಿವೆ ರಾಯಲ್ಪಾಡು,ನೆಲವಂಕಿ ಹೊಬಳಿ ಭಾಗದ ಎಲ್ಲಾ ಕೆರೆಗಳು ಕೊಡಿ ಬಿದ್ದಿವೆ ರಾಯಲ್ಪಾಡು ಹೋಬಳಿ ದೊಡ್ಡ ಕೆರೆ ಎನ್ನಲಾದ ಕೋಡಿಪಲ್ಲಿ ಕೆರೆ ಕಳೆದ ಮೂರು ದಿನಗಳ ಹಿಂದೆ ಕೊಡಿ ಹೊದರೆ ಅದೇ ಪ್ರದೇಶದ ಜಾಲಗುಂಡ್ಲಹಳ್ಳಿ ಪ್ರಾಜೆಕ್ಟ್ ಮೆಲ್ಪಟ್ಟದ ವರಿಗೂ ಹರಿದಿದೆ,ಮಲ್ಲೆಮೊರಿಪಲ್ಲಿ,ಕಂಬಾಲಪಲ್ಲಿ, ಲಕ್ಮಮ್ಮಕುಂಟ ಕೆರೆಗಳು ತುಂಬಿ ಹರಿದಿವೆ ಮಂಗಳವಾರ ಸುರಿದ ಮಳೆಯಿಂದಾಗಿ ಅಡ್ಡಗಲ್,ಅವಗಾನಪಲ್ಲಿ,ಬಾಲಿರೆಡ್ಡಿಪಲ್ಲಿ ಕೋಡಿ ಬಿದ್ದರೆ ಕೊಟೇಕಲ್ಲೂರು ತುಂಬಿದೆ.
ಆಂಧ್ರ ಸೇರುತ್ತಿರುವ ಕೆರೆಗಳ ನೀರು!
ನಮ್ಮ ಭಾಗದ ಹಳ್ಳಿಗಳ ಕೆರೆಗಳು ಹಾಗು ಚಿಂತಾಮಣಿ ತಾಲೂಕಿನ ಉತ್ತರ ಭಾಗದ ಕೆರೆಗಳು ಜೊತೆಗೆ ನಂದಿ ಬೆಟ್ಟದಲ್ಲಿ ಜನ್ಮತಾಳುವ ಪಾಗ್ನಿ ನಧಿ ತುಂಬಿಹರಿದರೆ ನೀರು ಹರಿದು ಹೊಗುವುದು ಆಂಧ್ರದ ಗಡಿಯಂಚಿನಲ್ಲಿರುವ ಬಿರಂಗಿ ನಾಲೆ ಮೂಲಕ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿರುವ ವಿಶಾಲವಾದ ಬಾರಿ ಗಾತ್ರದ ದೊಡ್ಡ ಕೆರೆಗಳಾದ ಪೆದ್ದತಿಪ್ಪಸಮುದ್ರಂ ಮತ್ತು ಕಂದಕೂರಿನ ವ್ಯಾಸರಾಯನ ಕೆರೆ ಸೇರುತ್ತದೆ ಅಲ್ಲಿಂದ ರಂಗ ಸಮುದ್ರಂನ ರಂಗರಾಯನಕೆರೆ ಸೇರಿ, ಅನಂತಪುರ ಜಿಲ್ಲೆಯ ನದಿನಾಲೆಗಳನ್ನು ತುಂಬಿಸುತ್ತದೆ
ನೆಲವಂಕಿ ಹೊಬಳಿಯ ಪುಗೂರುಕೋಟೆ, ಮುದ್ದೇಪಲ್ಲಿ, ಕಮಟಂಪಲ್ಲಿ, ಗಂಗಾಪುರಂ ಪ್ರಾಜೆಕ್ಟ್, ಇಲ್ದೋಣಿ, ಗಂಗರಕಾನಹಳ್ಳಿ ನಾಯಿನ್ ಕೆರೆ, ಕೊತ್ತಪೇಟೆಯ ಅಂಗಡಪ್ಪಕುಂಟೆ,ಲಕ್ಷ್ಮೀಪುರ ಕೆರೆ,ಗುಂದೇಡು ಕೆರೆ, ಬುರುಕಾಯಿಲಕೋಟೆ ನಾರಪ್ಪನಾಯಕನಕೆರೆ, ಸೇರಿದಂತೆ ಬಹುತೇಕ ಕೆರೆಗಳು ತುಂಬಿದ್ದು ಈ ಕೆರೆಗಳು ಕೊಡಿ ಹರಿದು ನಿಮ್ಮನಪಲ್ಲಿ ನಾಲೆ ಮೂಲಕ ಜಾಲಗೊಂಡ್ಲಹಳ್ಳಿ ಪ್ರಾಜೆಕ್ಟಗೆ ಸೇರಿ ಅಲ್ಲಿಂದ ಆಂಧ್ರದ ಕೆರೆಗಳ ಪಾಲಾಗುತ್ತದೆ.
ಯಲ್ದೂರು ಹೋಬಳಿಯ ಪಿಂಡಿಗನಗರ, , ಹರಳಕುಂಟೆ, ಉಪ್ಪುಕುಂಟೆಯ ಎರಡು ಕೆರೆಗಳು ಕೊಡಿ ಹರಿಯುತ್ತಿದೆ, ಕೊಳತೂರು, ಲಕ್ಷ್ಮೀಸಾಗರ, ಯಲ್ದೂರು ಅಚಂಪಲ್ಲಿ ಕೆರೆಗೆ ನೀರು ಬರ್ತಿಯಾಗಿದೆ
ಕಳೆದ 7-8 ವರ್ಷಗಳ ಹಿಂದೆ ಇದೇ ರೀತಿಯಲ್ಲಿ ಕೆರೆಗಳು ತುಂಬಿ ಹರಿಯಿತಾದರೂ ಆ ಸಂದರ್ಭದಲ್ಲಿ ನಮ್ಮ ಜನಪ್ರತಿನಿಧಿಗಳು ನಮ್ಮಲ್ಲೆ ನೀರು ತಡೆಯಲು ಪ್ರಾಜೆಕ್ಟ್ ನಿರ್ಮಾಣ ಮಾಡುವ ಬಗ್ಗೆ ಹೇಳಿದರಾದರೂ ನಂತರ ಗಮನ ಹರಿಸಿಲ್ಲ ಎನ್ನುತ್ತಾರೆ ಇಲ್ಲಿನ ಜನ ಬಿರಂಗಿ ನಾಲೆಗೆ ಹರಿಯುವಂತ ನೀರಿಗೆ ಕರ್ನಾಟಕದಲ್ಲಿ ಅಡ್ಡಲಾಗಿ ಪ್ರಾಜೆಕ್ಟ್ ನಿರ್ಮಿಸಿದರೆ ನಮ್ಮ ಭಾಗದ ಕೆರೆ ನೀರು ನಮ್ಮಲ್ಲಿ ತಡೆಯುವಂತಾಗುತ್ತದೆ ಎನ್ನುತ್ತಾರೆ ನೀರಾವರಿ ತಜ್ಞರು.
ಶಾಸಕ ರಮೇಶ್ ಕುಮಾರ್ ಪ್ರಯತ್ನ?
ವೃತಾ ಆಂಧ್ರಕ್ಕೆ ಹರಿದು ಹೋಗುತ್ತಿರುವ ಕೆರೆಗಳ ನೀರನ್ನು ತಡೆಯಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಅಭಿಯಂತರರ ಜೊತೆ ಚರ್ಚಿಸಿರುವ ಶಾಸಕ ರಮೇಶ್ ಕುಮಾರ್ ಹೊಸಹುಡ್ಯ-ಕೊತ್ತಪಲ್ಲಿ ಭಾಗದಲ್ಲಿ ಸುಮಾರು 2 ಎಂ.ಸಿ.ಎಫ್.ಪಿ ಸಾಮರ್ಥ್ಯದ ಪ್ರಾಜೆಕ್ಟ್ ನಿರ್ಮಿಸುವ ಹಾಗು ನೆಲವಂಕಿ ಹೋಬಳಿಯ ನಾಯಿನಿ ಕೆರೆ ಹಾಗು ಇಲ್ದೋಣಿ ಕೆರೆಗಳ ಕಟ್ಟೆಗಳನ್ನು ಏರಿಸಿ ಅಭಿವೃದ್ದಿ ಪಡಿಸಿ ಕೆರೆಗಳ ನೀರು ಉಳಿಸಿಕೊಳ್ಳಲು ಯೋಜನೆ ರೂಪಿಸುವ ಹಂತದಲ್ಲಿ ಇದ್ದಾರೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಅಭಿಯಂತರ ಅನಂದ್ ತಿಳಿಸಿದರು.
ವಿಶೇಷ ವರದಿ: ಚ.ಶ್ರೀನಿವಾಸಮೂರ್ತಿ