ಶ್ರೀನಿವಾಸಪುರ:ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒಂದಾದ ಪೋಸ್ಟಾಫಿಸ್ ರಸ್ತೆ@ಜೆ.ಸಿ.ರಸ್ತೆ ಕಾಮಗಾರಿ ಕಳೆದ 7-9 ತಿಂಗಳಿನಿಂದ ಪೂರ್ಣಗೊಳಿಸದೆ ನಿರ್ಲಕ್ಷಿಸಿರುವ ಪರಿಣಾಮ ರಸ್ತೆಯಲ್ಲಿ ಧೂಳು ಏಳುತ್ತಿದೆ.ಹದಗೆಟ್ಟ ರಸ್ತೆಯಲ್ಲಿ ಒಡಾಡಲು ಕಷ್ಟವಾಗುತ್ತಿದ್ದು ಈ ತಕ್ಷಣ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಅಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ನೇತೃತ್ವದಲ್ಲಿ ಆಟೋಚಾಲಕರು,ಅಂಗಡಿ ಮಾಲಿಕರು ಇಂದಿರಾಭವನ್ ವ್ರ್ಯ್ತ್ತದಲ್ಲಿ ರಸ್ತೆತಡೆ ಮಾಡಿ ಧರಣಿ ನಡೆಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಸುಬ್ರಮಣಿ ಮಾತನಾಡಿ ರಸ್ತೆ ಮಾಡುತ್ತೇವೆ ಎಂದು ಡಾಂಬರನ್ನು ಕಿತ್ತುಹಾಕಿ ಈಗ್ಗೆ ಏಳೆಂಟು ತಿಂಗಳಾಗಿದೆ ಇದುವರಿಗೂ ಕಾಮಗಾರಿ ಮಾಡಲು ಯಾವುದೆ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ,ಜೆಲ್ಲಿ ಹೊರಬಂದಿರುವ ಮಣ್ಣಿನ ರಸ್ತೆಯಲ್ಲಿ ಜನರು ಓಡಾಡಲು ಸಾಧ್ಯವಾಗುತ್ತಿಲ್ಲ ಹಾಳಾದ ರಸ್ತೆಯಲ್ಲಿ ವಾಹನಗಳು ಓಡಾಡಿದರೆ ಮನುಷ್ಯ ಕಾಣದಷ್ಟು ದಟ್ಟವಾದ ಮಣ್ಣಿನ ಧೂಳು ಏಳುತ್ತದೆ ಇದರಿಂದಾಗಿ ಇಲ್ಲಿನ ಅಂಗಡಿ ಮಾಲಿಕರ ಬಾಯಿ ಮೂಗಿಗೆ ಧೂಳು ಸೇರಿ ಕಫಾ ದಂತ ಅಲರ್ಜಿಕ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಆರೋಪಿಸಿದರು. ರಸ್ತೆ ವಿಚಾರದಲ್ಲಿ ಅಧಿಕಾರಿಗಳು ಹಾಗು ಗುತ್ತಿಗೆದಾರರು ವಿಳಂಬ ಧೊರಣೆ ಅನುಸರಿಸುತ್ತ ಜೆಸಿ ರಸ್ತೆ ಕಾಮಗಾರಿ ನಿರ್ಲಕ್ಷ್ಯಸಿದ್ದಾರೆ ಈ ಬಗ್ಗೆ ತಾಲೂಕು ಆಡಳಿತ ಮದ್ಯಪ್ರವೇಶ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಬೇಕು ಎಂದು ಅಗ್ರಹಿಸಿ ತಾಲೂಕು ತಹಶೀಲ್ದಾರ್ ಶೀರಿನ್ ತಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್ ಶೀರಿನ್ ತಾಜ್ ಅವರು ತಕ್ಷಣ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ ಅವರನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು, ಇದಕ್ಕೆ ಪ್ರತಿಕ್ರಿಯೆಸಿದ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ 25 ದಿನಗಳ ಕಾಲಾವಕಾಶ ಪಡೆದು ರಸ್ತೆ ಕಾಮಗಾರಿ ಪೂರ್ಣಗೊಳಿಸುವದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ವಾಪಸ್ಸು ಪಡೆಯಲಾಯಿತು.
ಪ್ರತಿಭಟನೆಯಲ್ಲಿ ಪುರಸಭೆ ಮಾಜಿ ಸದಸ್ಯ ರಾಮಾಂಜಿ,ಹೋಳೂರುಸಂತೋಷ್,ಸುನೀಲ್,ವಾಸವಿ ಸೀತಾರಾಮ್,ಕೊಪ್ಪರಂ ಮಂಜು ಮುಂತಾದವರು ಇದ್ದರು.