ಶ್ರೀನಿವಾಸಪುರ: ಟ್ರಾಫಿಕ್ ಸಮಸ್ಯೆಯಿಂದ ಯುವನೊರ್ವ ಲಾರಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ನಡೆದು ಮೂರು ದಿನ ಕಳೆದರು ಶ್ರೀನಿವಾಸಪುರ ಪಟ್ಟಣವನ್ನು ಕಾಡುತ್ತಿರುವ ರಸ್ತೆ ಸಂಚಾರದ ಸಮಸ್ಯೆ(Trafic probalem)ಬಗೆಹರಿಸಲು ತಾಲೂಕು ಆಡಳಿತ ಮುಂದಾಗದಿರುವ ಬಗ್ಗೆ ಸಾರ್ಬಜನಿಕರು ತೀವ್ರ ಅಸಮಧಾನ ವ್ಯಕ್ತಪಡಿಸಿರುತ್ತಾರೆ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಬೃಹದಾಕರವಾಗಿದೆ ಜನ ಸಂಚಾರಕ್ಕೆ ಅವಕಾಶ ಇಲ್ಲದಂತೆ ಎಂ.ಜಿ ರಸ್ತೆಯ ಫುಟ್ ಬಾತ್ ಬಹುತೇಕ ಒತ್ತುವರಿಯಾಗಿದ್ದು ಬಸ್ ನಿಲ್ದಾಣದ ವೃತ್ತದಲ್ಲಿ ಫುಟ್ ಬಾತ್ ದಿನ ಬಾಡಿಗೆ ವ್ಯಾಪರಕ್ಕೆ ನಿಗದಿಯಾಗಿದಿಯಂತೆ.
ಎಂ.ಜಿ ರಸ್ತೆಯ ಇಂದಿರಾ ಕ್ಯಾಂಟಿನ್-ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರದೇಶದಲ್ಲಿ ಫುಟ್ ಬಾತ್ ಕಾರ್ ಸ್ಟಾಂಡ್ ಆಗಿದ್ದರೆ ವಿವೇಕಾನಂದ ವೃತ್ತದಲ್ಲಿ ಬೈಕ್ ಸ್ಟಾಂಡ್ ಆಗಿದೆ, ವಾಸವಿ ಕಲ್ಯಾಣ ಮಂಟಪ ಭಾಗದ ತರಕಾರಿ ಅಂಗಡಿಗಳು ಫುಟ್ ಬಾತ್ ಮೀರಿ ರಸ್ತೆಯನ್ನೆ ಆಕ್ರಮಿಸಿಕೊಂಡಿವೆ,ಮುಳಬಾಗಿಲು ವೃತ್ತದಲ್ಲಿ ತಗಡಿನ ಅಂಗಡಿಗಳದೆ ಕಾರುಬಾರ್,ಸಂತೇ ಮೈದಾನದಲ್ಲಿ ಮನೆಗಳ ನಿರ್ಮಾಣ ಆದ ಹಿನ್ನಲೆಯಲ್ಲಿ ವಾರದ ಸಂತೆ ಏಕಾಏಕಿ ರಾಷ್ಟ್ರೀಯ ಹೆದ್ದಾರಿಯನ್ನ ಆಕ್ರಮಿಸಿಕೊಂಡಿದೆ.ವಿವೇಕಾನಂದ ರಸ್ತೆಯಲ್ಲಿ ಟೀಫನ್ ಹೋಟೆಲ್ ಗಳು ನಡೆಯುವುದೆ ರಸ್ತೆಯಲ್ಲಿ,ಆಜಾದ್ ರಸ್ತೆಯ ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ ನಡು ರಸ್ತೆಯಲ್ಲೆ ತರಕಾರಿ ಅಂಗಡಿಗಳ ವ್ಯಾಪರ ನಡೆಯುತ್ತಿದೆ.ದಿನ ಬೆಳಗಾದರೆ ಹಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಬಾಗ ನಡು ರಸ್ತೆಯಲ್ಲಿ ನಿಲ್ಲುತ್ತಿರುವ ಖಾಸಗಿ ಬಸ್ಸುಗಳಿಗೆ ತಾತ್ಕಾಲಿಕ ಶೆಲ್ಟರ್ ಕಲ್ಪಿಸುವ(Privat bus stand) ಆಲೋಚನೆ ತಾಲೂಕು ಆಡಳಿತಕ್ಕೆ ಇಲ್ಲದಿರುವುದು ದುರಂತವೆ ಸರಿ ಎನ್ನುತ್ತಾರೆ.
ತಾಲೂಕು ಆಡಳಿತಕ್ಕೆ ಇದ್ಯಾವುದು ಬೇಕಿಲ್ಲ ಎಲ್ಲವೂ ಒತ್ತುವರಿಯಾಗಿ ಜನ ಸಾಮನ್ಯರಿಗೆ ತೊಂದರೆ ಆಗುತ್ತಿದ್ದರು ಇದ್ಯಾವುದು ನಮಗೆ ಸಂಬಂದವೆ ಇಲ್ಲವೇನೋ ಎಂಬ ನಿರ್ಲಕ್ಷ್ಯ ಧೋರಣೆ ಕುರಿತಾಗಿ ಜನರು ಆರೋಪಿಸುತ್ತಾರೆ.
