ಶ್ರೀನಿವಾಸಪುರ:ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಕುಟುಂಬದ ಪರವಾಗಿ ನಿಂತಿದ್ದ ಕೆ.ಹೆಚ್ ಮುನಿಯಪ್ಪ ಭಣದ ಪ್ರಮುಖ ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗು ಮಾವು ಮಂಡಳಿ ಮಾಜಿ ಅಧ್ಯಕ್ಷ ದಳಸನೂರುಗೋಪಾಲಕೃಷ್ಣ ತಮ್ಮ ನಿಲವು ವ್ಯಕ್ತಪಡಿಸಿದ್ದಾರೆ ಅವರು ಬುಧವಾರ ದಳಸನೂರಿನ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡಸಿ ಮಾತನಾಡಿ ಗೌತಮ್ ಇದುವರಿಗೂ ನನ್ನನ್ನು ಭೇಟಿಯಾಗಿಲ್ಲ ಅವರ ತಂದೆ ಬೆಂಗಳೂರಿನ ಮಾಜಿ ಮೇಯರ್ ವಿಜಯಕುಮಾರ್ ನನ್ನ ಆತ್ಮೀಯರು ಉತ್ತಮ ಒಡನಾಟ ಹೊಂದಿದ್ದರು ಅಂತಹವರ ಮಗನಾದ ಗೌತಮ್ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಅವರನ್ನು ತಾಲೂಕಿನ ಜನತೆ ಹೆಚ್ಚಿನ ಮತ ನೀಡುವ ಮೂಲಕ ಅವರಿಗೆ ಗೆಲವು ತಂದುಕೊಡಬೇಕು ಎಂದರು.
ಪಕ್ಷದ ಸಿದ್ದಾಂತ ಬೇರೆ ವೈಯುಕ್ತಿಕ ಭಿನ್ನಾಭಿಪ್ರಾಯ ಬೇರೆ ನನ್ನ ಹಾಗು ತಾಲೂಕಿನ ಕಾಂಗ್ರೆಸ್ ಮುಖಂಡರ ನಡುವಿನ ಬಿನ್ನಾಭಿಪ್ರಾಯಗಳು ಏನೆ ಇರಬಹುದು ರಾಜಕೀಯವಾಗಿ ನಾನು ಕಾಂಗ್ರೆಸ್ ಪಕ್ಷದ ಸಿದ್ದಾಂತಗಳಿಗೆ ಗೌರವ ನೀಡುವಂತಹವನು ನಾನು ಮೂಲ ಕಾಂಗ್ರೆಸ್ಸಿಗ,ನನಗೆ ಕಾಂಗ್ರೆಸ್ ಪಕ್ಷ ಮುಖ್ಯ ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೆಸ್ ಸಿದ್ದಾಂತಗಳನ್ನು ನಂಬಿ ರಾಜಕೀಯ ಮಾಡಿಕೊಂಡು ಬರುತ್ತಿದ್ದೇನೆ ಪಕ್ಷ ಏನೆ ಜವಬ್ದಾರಿ ನೀಡಿದರು ಅದನ್ನು ನಿರ್ವಹಿಸುತ್ತೇನೆ ಇದುವರಿಗೂ ಅಭ್ಯರ್ಥಿ ಗೌತಮ್ ಭೇಟಿಯಾಗಿಲ್ಲ ಅಂದ ಮಾತ್ರಕ್ಕೆ ನಾವು ಪಕ್ಷ ನಿಷ್ಠೆ ಬದಲಾಯಿಸುವುದಿಲ್ಲ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಎಂದು ಪರೋಕ್ಷವಾಗಿ ತಮ್ಮದೆ ಪಕ್ಷದ ರಾಜಕೀಯ ಎದುರಾಳಿಗಳಾದ ಘಟಬಂಧನ್ ಮುಖ್ಯಸ್ಥರಿಗೆ ಟಾಂಗ್ ನೀಡಿದರು.
ದೇಶ ಸಂಕಷ್ಟದಲ್ಲಿದೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು.
ದೇಶದಲ್ಲಿನ ಮೋದಿ ಅವರ ಅಡಳಿತದಲ್ಲಿ ಸಂವಿಧಾನ ಬದ್ದ ವ್ಯವಸ್ಥೆ ಇಲ್ಲ ಇವತ್ತು ದೇಶ ಸಂಕಷ್ಟದಲ್ಲಿದೆ ಧರ್ಮ ಹಾಗು ಜಾತಿ ಆದಾರಿತ ರಾಜಕೀಯ ಮಾಡಲಾಗುತ್ತಿದೆ,ಅಂಬೇಡ್ಕರ್ ಸಂವಿಧಾನ ಇಲ್ಲ ಗಾಂಧಿಜಿ ಆಶಯಗಳು ಇಲ್ಲ ಕುವೆಂಪು ಭಾವನೆಗಳಿಗೆ ಗೌರವ ಇಲ್ಲದಂತಾಗಿದೆ ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಏರ್ಪಟ್ಟಿದೆ ಇದನೆಲ್ಲ ಸರಿದಾರಿಗೆ ತರಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗುತ್ತದೆ ಈ ನಿಟ್ಟಿನಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಳ್ಳಬೇಕು ಎಂದರು.
ಅಭ್ಯರ್ಥಿ ಎರಡು ಬಾರಿ ಬರಿತ್ತೇನೆ ಎಂದು ಬರಲಿಲ್ಲ
ಅಭ್ಯರ್ಥಿ ಗೌತಮ್ ನಾಮ ಪತ್ರಸಲ್ಲಿಸುವಾಗ ನನ್ನನ್ನು ಭೇಟಿಯಾಗಲು ಬರುತ್ತೇನೆ ಎಂದವರು ಬರಲಿಲ್ಲ ಹಾಗೆ ಶ್ರೀನಿವಾಸಪುರ ಪಟ್ಟಣದಲ್ಲಿ ಕಾಂಗ್ರೆಸ್ ಪ್ರಚಾರಸಭೆಗೆ ಬರುವಂತೆ ಕರೆ ಮಾಡಿ ಅಹ್ವಾನ ನೀಡಿದರು,ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆದಂತ ಹಲ್ಲೆಯಂತಹ ಕಹಿ ಘಟನೆಯಿಂದಾಗಿ ರಮೇಶ್ ಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಸಿದ್ದನಿಲ್ಲ ಹಾಗಾಗಿ ಸಭೆಗೆ ಬರುವುದಿಲ್ಲ ಎಂದು ಹೇಳಿದ್ದೆ ಅದಕ್ಕೆ ಅಭ್ಯರ್ಥಿ ಗೌತಮ್ ಸಭೆ ಮುಗಿಸಿ ಭೇಟಿಯಾಗುತ್ತೇನೆ ಎಂದಿದ್ದರು ನಂತರವೂ ಅವರು ನನ್ನನ್ನು ಭೇಟಿಯಾಗಲಿಲ್ಲ ಹಾಗಂತ ಅಭ್ಯರ್ಥಿ ಮೇಲಿನ ಕೋಪಕ್ಕೆ ಪಕ್ಷಕ್ಕೆ ದ್ರೋಹ ಬಗೆಯಲಾರೆ ಎಂದು ಒತ್ತಿ ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಕೋಚಿಮುಲ್ ಸದಸ್ಯ ಹನುಮೇಶ್ ಮುಖಂಡರಾದ ಗಾಂಡ್ಲಹಳ್ಲಿ ಶಶಿಕುಮಾರ್,ಸಂಪತ್ ಕುಮಾರ್, ದಳಸನೂರು ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಸದಸ್ಯರಾದ ಜಗದೀಶ್,ವೀರಬದ್ರರೆಡ್ಡಿ ವ್ಯವಸಾಯ ಸೇವಾ ಸಂಘದ ನಿರ್ದೇಶಕ ಅಂಗಡಿಮುರಳಿ ಮುಂತಾದವರು ಇದ್ದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Sunday, November 24