ಶ್ರೀನಿವಾಸಪುರ:ಗುರುವಾರ ನಸುಕಿನ ಜಾವ 4 ಗಂಟೆಯಿಂದಲೇ ಅರಣ್ಯ ಒತ್ತುವರಿ ತೆರವು ಕಾರ್ಯಚರಣೆ ಆರಂಭವಾಗಿದೆ, ಬೆಳ್ಳಂಬೆಳಗ್ಗೆ ಜೆ ಸಿ ಬಿ ಗಳೊಂದಿಗೆ ಆಗಮಿಸಿದ ಕೋಲಾರ ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲು ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ಕೊಟ್ಟಿದ್ದಾರೆ ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿ ಅಲಂಬಗಿರಿ ಅರಣ್ಯ ಪ್ರದೇಶದ ವ್ಯಾಪ್ತಿಯ ಪಾತಪಲ್ಲಿ ಗ್ರಾಮದ ಬಳಿ ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಕಾರ್ಯಚರಣೆ ನಡೆಯುತ್ತಿದ್ದು ಬೃಹತ್ ಗಾತ್ರದ ಮಾವಿನ ಮರಗಳನ್ನು ನೆಲಸಮ ಮಾಡಿ ಜಮೀನು ಒತ್ತುವರಿ ತೆರವುಮಾಡುತ್ತಿರುವ ಅರಣ್ಯ ಇಲಾಖೆಯವರು ಹಳ್ಳ ತೋಡಿ ತಮ್ಮ ಗಡಿಯನ್ನು ಗುರುತುಮಾಡುತ್ತಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ಕಾರ್ಯಚರಣೆ ಮುಂದುವರಿಯಲಿದ್ದು ಶೆಟ್ಟಿಹಳ್ಳಿ,ಪಣಸಚೌಡನಹಳ್ಳಿ,ಆರಮಾಕಲಹಳ್ಳಿ ಸೇರಿದಂತೆ ಈಭಾಗಗಳಲ್ಲಿ ಒತ್ತುವರಿ ತೆರವು ಮುಂದುವರಿಯಲಿದೆ ಎನ್ನುತ್ತಾರೆ.
ಅರಣ್ಯಾಧಿಕಾರಿ ಮುಂದೆ ಅಲವತ್ತುಕೊಂಡ ಗ್ರಾಮಸ್ಥರು
ಅರಣ್ಯ ಒತ್ತುವರಿ ತೆರವು ಕಾರ್ಯಚರಣೆ ಪ್ರಾರಂಭ ವಾಗುತ್ತಿದ್ದಂತೆ ಸುಮುತ್ತಲಿನ ಗ್ರಾಮಸ್ಥರು ಜಮಾವಣೆಗೊಂಡು ಜಿಲ್ಲಾ ಅರಣ್ಯಾಧಿಕಾರಿ ತಮ್ಮ ಅಳಲು ತೊಡಿಕೊಂಡು ಎಪ್ಪತ್ತು-ಎಂಬತ್ತು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಮಾಡುತ್ತಿದ್ದು ಇದು ಹೋದರೆ ನಮಗೆ ಜೀವನ ಇಲ್ಲ ಎಂದು ಅಲವತ್ತುಕೊಳ್ಳುತ್ತಿದ್ದರು.