- ಪಕ್ಷ ದ್ರೋಹ ತರವಲ್ಲ ಎಂ.ಶ್ರೀನಿವಾಸನ್ ದೂರು
- ರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ರಾಜಕೀಯ ಅನವಶ್ಯಕ
- ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಗೆದ್ದು ಬರಲಿ
- ಅಕ್ರಮಗಳನ್ನು ಮುಚ್ಚಿಡಲು ನನ್ನ ವಿರುದ್ದ ಆರೋಪ ಪೆದ್ದರೆಡ್ಡಿ
- ನಾನು ವಿದ್ಯಾವಂತ ಪ್ರಮಾಣಿಕ ರಾಜಕಾರಣಿ
- ನಮ್ಮ ಕುಟುಂಬದ ಆಶ್ರಯದಲ್ಲಿ ರಾಜಕಾರಣ ಮಾಡಿದವರು
- ನನ್ನ ವಿರುದ್ದ ಮಾತನಾಡುವ ನೈತಿಕತೆ ಇಲ್ಲ
ಶ್ರೀನಿವಾಸಪುರ:-ಪಕ್ಷದಲ್ಲಿದ್ದುಕೊಂಡು ಪಕ್ಷಕ್ಕೆ ದ್ರೋಹ ಮಾಡುವುದು ಅವರ ರಾಜಕೀಯ ನಡವಳಿಕೆಗೆ ಶೋಭೆ ತರುವುದಿಲ್ಲ ಎಂದು ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ರಾಜೇಂದ್ರ ಪ್ರಸಾದ್ ವಿರುದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಪರೋಕ್ಷವಾಗಿ ಕಿಡಿ ಕಾರಿದರು. ರಾಜೇಂದ್ರ ಪ್ರಸಾದ್ ಹೆಸರು ಪರಸ್ತಾಪಿಸದೆ ಮಾತನಾಡಿದ ಅವರು ಎ.ಪಿ.ಎಂ.ಸಿ. ಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಸಭೆಯ ನಂತರ ಎ.ಪಿ.ಎಂ.ಸಿ. ಯಲ್ಲಿ ಅಧಿಕಾರ ಉಳಸಿಕೊಂಡ ಅಧ್ಯಕ್ಷ ರಮೇಶ್ ಬಾಬು, ಉಪಾಧ್ಯಕ್ಷ ರಾಜಣ್ಣ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು.
ಪಕ್ಷದ ಸಿದ್ದಾಂತ ಗಾಳಿಗೆ ತೂರಿ ವಿರೋಧ ಪಕ್ಷದವರ ಜೋತೆ ಕೈ ಜೋಡಿಸಿ ಶಾಸಕ ರಮೇಶ್ ಕುಮಾರ್ ಅವರ ನಿಷ್ಟಾವಂತ ಕಾರ್ಯಕರ್ತರಿಗೆ ಮೋಸಮಾಡಲು ಮುಂದಾದ ನಂಬಿಕೆ ದ್ರೋಹಿಗೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ದೂರಿದರು.
ಆ ವ್ಯಕ್ತಿಗೆ ಮಾನ ಮರ್ಯಾದೆ ಇದ್ದರೆ ಎ.ಪಿ.ಎಂ.ಸಿ. ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಗೆದ್ದು ಬರಲಿ ನೋಡೋಣ ಎಂದು ಸವಾಲು ಹಾಕಿದರು. ಕರೋನದಿಂದ ರೈತರು ಸಂಕಷ್ಟದಲ್ಲಿದ್ದಾರೆ ಮಾವಿನ ಬೆಲೆ ನೆಲ ಕಚ್ಚಿದೆ ಈ ಸಂದರ್ಭದಲ್ಲಿ ಮಾವು ಬೆಳೆಗಾರನ ಕಷ್ಟ ಸುಖ ಅರಿಯಬೇಕಾದ ನಾವು ವ್ಯಾಪರಸ್ಥರು ನಡೆಸುತ್ತಿರುವ ಬಿಳಿ ಚಿಟೀ ವ್ಯವಹಾರಕ್ಕೆ ಕಡಿವಾಣ ಹಾಕುವುದು ಬಿಟ್ಟು ಅಧಿಕಾರಕ್ಕಾಗಿ ರಾಜಕೀಯ ರಾದ್ದಾಂತ ಮಾಡುವುದು ನಾಚಿಕೆ ಗೇಡು ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಯೋಗೇಂದ್ರ ಗೌಡ, ಸಿ. ಪೆದ್ದರೆಡ್ಡಿ, ಟೈಲರ್ ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ, ರೈತ ಮುಖಂಡರಾದ ಬೈರೆಡ್ಡಿ, ಸಿ.ವಿ. ಪ್ರಭಾಕರಗೌಡ, ಜಾಮಚೆಟ್ಲು ಶ್ರೀನಿವಾಸ್, ಮುತ್ತಕಪಲ್ಲಿ ಶ್ರೀನಾಥ್, ವೆಂಕಟಾದ್ರಿ ಮತ್ತಿತರರು ಹಾಜರಿದ್ದರು.
ಎ.ಪಿ.ಎಂ.ಸಿ ಯಲ್ಲಿನ ಅಕ್ರಮಗಳನ್ನು ಮುಚ್ಚಿಡಲು ನನ್ನ ವಿರುದ್ದ ಆರೋಪ ಪೆದ್ದರೆಡ್ಡಿ.
ಶ್ರೀನಿವಾಸಪುರ ಎ.ಪಿ.ಎಂ.ಸಿ ಯಲ್ಲಿ ತಮ್ಮ ಅಕ್ರಮಗಳನ್ನು ಮುಚ್ಚಿಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯಲು ಹಾಲಿ ಅಧ್ಯಕ್ಷರು ಹಿಂದಿನ ಅಧ್ಯಕ್ಷರ ತಂಡ ಒಗ್ಗಾಟ್ಟಾಗಿ ಬಿ.ಜೆ.ಪಿ ಬೆಂಬಲದೊಂದಿಗೆ ಅಧಿಕಾರ ಉಳಿಸಿಕೊಂಡಿದ್ದಾರೆ ಎಂದು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪೆದ್ದರೆಡ್ಡಿರಾಜೇಂದ್ರಪ್ರಸಾದ್ ಆರೋಪಿಸಿದರು ಅವರು ಎ.ಪಿ.ಎಂ.ಸಿ ಆವರಣದಲ್ಲಿರುವ ಸಭಾಂಗಣದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿ ಸುಮಾರು 5 ಕೋಟಿ ರೂಪಾಯಿಗಳ ಅಭಿವೃದ್ದಿ ಕಾಮಗಾರಿ ಟೆಂಡರ್ ಹಾಗು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವಂತ ಎ.ಪಿ.ಎಂ.ಸಿ 3 ಎಕರೆ ಜಮೀನಿಗೆ ಸಂಭಂದಿಸಿದಂತೆ ನಡೆದಿರುವ ಅಕ್ರಮಗಳಿಗೆ ಕುಮ್ಮಕ್ಕು ಕೊಟ್ಟು ಹಾಲಿ ಅಧ್ಯಕ್ಷ ಮತ್ತು ಅವರ ತಂಡ ಮುಂದಾಗಿದ್ದ ಹಿನ್ನಲೆಯಲ್ಲಿ ಇದನ್ನು ವಿರೋಧಿಸಿ ಹಾಲಿ ಅಧ್ಯಕ್ಷ ಹಾಗು ಉಪಾಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದು ನಿಜ ಎಂದು ಒಪ್ಪಿಕೊಂಡರು. ಎ.ಪಿ.ಎಂ.ಸಿ ಕಾರ್ಯದರ್ಶಿ ವೇಣು ಎ.ಪಿ.ಎಂ.ಸಿ ಅಡಳಿತ ಮಂಡಳಿ ಸಭೆಗಳಿಗೆ ನಮ್ಮನ್ನು ಕರೆಯದೆ ಅಕ್ರಮವಾಗಿ ಸಭೆಗಳನ್ನು ನಡೆಸಿ ಅವ್ಯವಹಾರಗಳಿಗೆ ದಾರಿಮಾಡಿಕೊಡುತ್ತಿದ್ದಾರೆ ಎಂದ ಅವರು ಈ ಬಗ್ಗೆ ಪ್ರಶ್ನೆ ಮಾಡಿದರೆ ಕೋವಿಡ್ ಇರುವುದರಿಂದ ವ್ಯಾಟ್ಸಾಪ್ ಮೂಲಕ ಸಭೆ ನಡೆಯುವ ಬಗ್ಗೆ ಹೇಳಿರುತ್ತೇವೆ ಎಂಬ ಬೇಜವಬ್ದಾರಿ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ಮಾಜಿ ಅಧ್ಯಕ್ಷ ಹಾಲಿ ಸದಸ್ಯೆ ಶಾಮಲಗೋಪಾಲ ಆಡಳಿತಮಂಡಳಿ ಗಮನಕ್ಕೆ ತಾರದೆ 2 ನಿವೇಶನಗಳನ್ನು ಅಕ್ರಮವಾಗಿ ನೊಂದಣಿ ಮಾಡಿಕೊಟ್ಟು ಅವರಿಂದ ಶೇಕಡಾವಾರು ಹಣ ಪಡೆದಿರುತ್ತಾರೆ. ಈಗಿನ ಅಧ್ಯಕ್ಷ ರಮೇಶಬಾಬು ತಂಡ ಅಭಿವೃದ್ದಿ ಕಾಮಗಾರಿಗಳ ಟೆಂಡರ್ ವ್ಯವಹಾರದಲ್ಲಿ ಗುತ್ತಿಗೆದಾರನ ಅಕ್ರಮಗಳಿಗೆ ಸಹಕರಿಸುತ್ತಿದ್ದಾರೆ ಎಂದು ದೂರಿದರು.
ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನು ಎ.ಪಿ.ಎಂ.ಸಿಗೆ ಉಳಿಸಿಕೊಡಲು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿದ್ದೆ ಅದನ್ನು ಅಳತೆ ಮಾಡಿಸಿ ಬೌಂಡರಿ ವಿಂಗಡಿಸಿದ್ದೆ ಎಂದ ಅವರು ಇವತ್ತು ಅಕ್ರಮ ಒತ್ತುವರಿದಾರರು ಅತಿಕ್ರಮಣ ಮಾಡಿಕೊಂಡಿರುವ ಜಮೀನನ್ನು ತಮ್ಮದೇ ಜಮೀನು ಎಂದು ವಾಣಿಜ್ಯ ವ್ಯವಹಾರಗಳಿಗೆ ಬಾಡಿಗೆ ನೀಡಿರುತ್ತಾರೆ.
ನನ್ನ ಅವಧಿಯಲ್ಲಿ ಜವಾಬ್ದಾರಿಯುತ ಅಧ್ಯಕ್ಷನಾಗಿ ರಾಜ್ಯ ಮಂಡಳಿ ನಿರ್ದೇಶಕನಾಗಿ ಎ.ಪಿ.ಎಂ.ಸಿ ಅವರಣದಲ್ಲಿ ಮೂಲಭೂತ ಅಭಿವೃದ್ದಿ ಕಾಮಗಾರಿಗಳಿಗೆ ಸುಮಾರು 5 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದೆ ಎಂದರು.
ನಾನು ವಿದ್ಯಾವಂತ ಸ್ವಾಭಿಮಾನಿ ರಾಜಕಾರಣಿಯಾಗಿದ್ದು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಾಡಿರುವ ಆರೋಪಗಳಿಗೆ ಉತ್ತರ ನೀಡಲ್ಲ, ನಮ್ಮ ಕುಟುಂಬದ ಆಶ್ರಯ ಪಡೆದು ರಾಜಕೀಯದಲ್ಲಿ ಮೆಲೆ ಬಂದಂತವರಿಗೆ ನನ್ನ ವಿರುದ್ದ ಮಾತನಾಡುವ ನೈತಿಕತೆ ಇಲ್ಲ, ಯಾವ ವೈಯುಕ್ತಿಕ ಹಿತಾಸಕ್ತಿಗೆ ಯಾರಿಗೆ ಯಾರು ದ್ರೋಹ ಮಾಡಿದ್ದಾರೆ ಎಂಬುದು ಜಗತ್ತಿಗೆ ತಿಳಿದ ವಿಚಾರ ನನ್ನ ರಾಜಕೀಯದ ಬಗ್ಗೆ ಮಾತನಾಡುಲು ಇವರು ಯಾರು ಎಂದು ಹೇಳಿದರು.
ಸುದ್ದಿಗೋಷ್ಥಿಯಲ್ಲಿ ಎ.ಪಿ.ಎಂ.ಸಿ ನಿರ್ದೇಶಕರುಗಳಾದ ಮ್ಯಾಕಲಗಡ್ಡ ನಾರಾಯಣಸ್ವಾಮಿ, ಅಶೋಕ ರೆಡ್ಡಿ, ಶ್ರೀನಿವಾಸರೆಡ್ಡಿ, ನಾಮಿನಿ ಸದಸ್ಯ ಅಶೋಕರೆಡ್ಡಿ ಕೊಟ್ರಗೂಳಿನಾರಯಣಸ್ವಾಮಿ ಇದ್ದರು.