ಶ್ರೀನಿವಾಸಪುರ:ಪ್ರಪಂಚ ಪ್ರಸಿದ್ಧ ಮಾವಿನ ನಗರ ಶ್ರೀನಿವಾಸಪುರದ ಪ್ರಸಿದ್ಧ ಶ್ರೀ ವರದ ಬಾಲಂಜನೇಯ ಬ್ರಹ್ಮ ರಥೋತ್ಸವ ಇಂದು ಸಂಭ್ರಮ ಸಡಗರದಿಂದ ನಡೆಯಿತು.
ಪ್ರತಿವರ್ಷದಂತೆ ಫಾಲ್ಗುಣ ಮಾಸದ ಕಾಮನ ಹುಣ್ಣಿಮೆಯಂದು ಶ್ರೀ ಅಂಜನೇಯ ಸಮೇತ ಶ್ರೀರಾಮ ಸಿತಾದೇವಿ ಲಕ್ಷ್ಮಣ ದೇವರ ಉತ್ಸವ ಮೂರ್ತಿಗಳನ್ನು ಹೊತ್ತ ರಥ ಶ್ರೀ ವರದ ಬಾಲಂಜನೇಯ ಕ್ಷೇತ್ರದಲ್ಲಿ ಚಲಿಸುತ್ತಿದ್ದರೆ ನೆರೆದಿದ್ದ ಜನೊಸ್ತಮದ ಹರ್ಷೋದ್ಗಾರಗಳ ನಡುವೆ ತಮ್ಮ ಕೋರಿಕೆಗಳನ್ನು ಈಡೆರಿಸುವಂತೆ ದವಣ ಕುಚ್ಚಿದ ಬಾಳೆಹಣ್ಣನ್ನು ರಥದ ಮೇಲೆ ಎಸೆದು ಕೃತಾರ್ಥರಾದರು.

ಶ್ರೀ ವರದ ಬಾಲಾಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಎಂಟು ದಿನಗಳ ಕಾಲ ಜಾತ್ರ ಉತ್ಸವಗಳು ನಡೆಯುತ್ತದೆ ದಿನಾಂಕ 12ರಂದು ಬುಧವಾರದಿಂದ ಅಂಕುರಾರ್ಪಣೆಯ ಧ್ವಜಾರೋಹಣದೊಂದಿಗೆ ಅರಂಭವಾಗಿದ್ದು 13 ರಂದು ಗುರುವಾರ ಸಂಜೆ ಶೇಷವಾಹನೋತ್ಸವ ಸೇವೆ ರಾತ್ರಿ 7 ಗಂಟೆ ಸಮಯದಲ್ಲಿ ಸಿತಾರಾಮರ ಕಲ್ಯಾಣೋತ್ಸವ ನಡೆಯಿತು ಇಂದು 14 ಶುಕ್ರವಾರ ಹಗಲು ಬ್ರಹ್ಮ ರಥೋತ್ಸವ ನಡೆಯಿತು ಸಂಜೆ ಧೋಳೂತ್ಸವ ರಾತ್ರಿ ಭಜನೆ ಕಾರ್ಯಕ್ರಮ ನಡೆಯಿತು 15 ರಂದು ಶನಿವಾರ ಹಂಸವಾಹನೋತ್ಸವ ನಡೆಯಲಿದೆ ರಾತ್ರಿ ಪಾರ್ವಟೋತ್ಸವ ಹಾಗು ಕೊಳ್ಳೂರು ಗ್ರಾಮಸ್ಥರಿಂದ ಶ್ರೀ ಕೃಷ್ಣ ಪಾಂಡವೀಯಂ ತೆಲಗು ನಾಟಕ ನಡೆಯಲಿದೆ 16ರಂದು ಭಾನುವಾರ ವಸಂತೋತ್ಸವ ಮತ್ತು ಧ್ವಜಾರೋಹಣ ಇದ್ದು 17 ರಂದು ಸೋಮವಾರ ಪ್ರಾಕಾರೋತ್ಸವ ರಾತ್ರಿ ಪುಷ್ಫ ವಿಮಾನೋತ್ಸವ ನಡೆಯಲಿದ್ದು 18 ರಂದು ಮಂಗಳವಾರ ಹಗಲು ಪ್ರಾಕಾರೋತ್ಸವ ರಾತ್ರಿ ಶಯನೋತ್ಸವ ಸೇವೆ ನಡೆಯಲಿದೆ ಎಂದು ಶ್ರೀ ವರದ ಬಾಲಂಜನೇಯಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರು ಕಾರ್ಯದರ್ಶಿ ಮಂದಳಿಯವರು ತಿಳಿಸಿದ್ದಾರೆ.ವರದ ಬಾಲಂಜನೇಯ ಬ್ರಹ್ಮ ರಥೋತ್ಸವ ಜಾತ್ರೆಯ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳು ಅನ್ನ ಸಂತರ್ಪಣೆ, ಪಾನಕ ಹೆಸರು ಬೇಳೆಯನ್ನು ಹಂಚಲಾಯಿತು