ಮಳೆಯಿಲ್ಲದೆ ಬಿಸಿಲ ತಾಪಕ್ಕೆ ಮಾವುಬೆಳೆ
ಸುಟ್ಟು ಸೊರಗಿ ನೆಲಕ್ಕೆ ಉರುಳುತ್ತಿದೆ
ಔಷಧಿ ಸಿಂಪಡಿಸಿದರೂ ಬೆಳೆ ಉಳಿಯುತ್ತಿಲ್ಲ
ಬೆಳೆಗಾರನಿಗೆ ಉಳಿದ ಔಷಧಿ ಸಾಲ.
ಶ್ರೀನಿವಾಸಪುರ:ಶ್ರೀನಿವಾಸಪುರದ ವಿಶ್ವ ಪ್ರಸಿದ್ಧ ಮಾವಿನಬೆಳೆ ಮಳೆಯಿಲ್ಲದೆ ದಿನೆ ದಿನೆ ಎರುತ್ತಿರುವ ಬಿಸಿಲಿನ ತಾಪಕ್ಕೆ ಜೀವನಾಡಿ ಬೆಳೆ ಉದರಿ ಹೋಗುತ್ತಿದೆ,ಉತ್ಪಾದನೆಯಲ್ಲಿ ಶೇ.70ರಷ್ಟು ಕುಸಿತವಾಗುವ ಪರಿಸ್ಥಿತಿ ಏರ್ಪಟ್ಟಿದೆ ಬಹುತೇಕ ರೈತರು ಮಾವು ಬೆಳೆಯ ಮೇಲೆ ಅವಲಂಬಿತರಾಗಿ ಬದಕು ಸಾಗಿಸುತ್ತಾರೆ,ಈ ಬಾರಿ ಬಿಸಿಲಿನ ತಾಪಕ್ಕೆ ಹೂ, ಪಿಂದೆಗಳು ಉದುರುತ್ತಿರುವುದನ್ನು ನೋಡಿದರೆ 10 ಟನ್ ಬರುತ್ತಿದ್ದ ಮಾವು 1-2 ಟನ್ ಸಿಗುವುದು ಅನುಮಾನವಾಗಿದ್ದು ಮಾವು ಬೆಳೆಗಾರರನ್ನು ಆತಂಕಕ್ಕೆ ಈಡು ಮಾಡಿದೆ.
ಈ ಬಾರಿಯ ಮಾವು ಹಂಗಾಮಿನಲ್ಲಿ ಫಸಲು ನೀರಿಕ್ಷೆ ಮೂಡಿಸಿತ್ತು ಆದರೆ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಗಿಡಗಳು ಅಕಾಲಿಕವಾಗಿ ಚಿಗುರೊಡೆದು ಹೂವು,ಕಾಯಿಗಳನ್ನು ಉದುರಿಸಿದೆ.
ಒಂದು ವರ್ಷದಿಂದ ಸಮರ್ಪಕ ಮಳೆ ಬಾರದೆ,ಭೂಮಿಯಲ್ಲಿ ಉಷ್ಣಾಂಶ ಹೆಚ್ಚಿದ್ದು ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಹೂ ಹಂತದಲ್ಲೆ ಮಾವಿನ ಫಸಲು ಉದರಿ ಡಿಸೆಂಬರ್ ತಿಂಗಳಿನಲ್ಲಿ ಬರಬೇಕಿದ್ದ ಹೂ ಫೆಬ್ರವರಿ ತಿಂಗಳಿನಲ್ಲಿ ಬಂದಿತು ಫಸಲು ತಡವಾಗುವುದರ ಜೊತೆಗೆ ರಣ ಬಿಸಲಿನ ತಾಪಕ್ಕೆ ಕಾಯಿ ಆಗಬೇಕಿದ್ದ ಪಿಂದೆ ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕೆ ಬಿಳುತ್ತಿದ್ದೆ ಕೊಂಚ ದೊಡ್ಡದಾಗಿ ಬಲಿತಿದ್ದ ಮಾವಿನ ಕಾಯಿ ನೀರಿನ ಅಂಶ ಸಿಗದೆ ಬಿಸಿಲ ತಾಪಕ್ಕೆ ಸೊರಗುತ್ತಿದೆ.ಸ್ವಂತ ಟ್ರಾಕ್ಟರ್ ಹಾಗು ಟ್ಯಾಂಕರ್ ಇದ್ದವರು ಕೊನೆ ಪ್ರಯತ್ನ ಎಂಬಂತೆ ಮಾವು ಗಿಡಗಳಿಗೆ ನೀರು ಹೊಡೆಸುತಿದ್ದಾರೆ.
ಮಾವು ಬೆಳೆಗಾರರು ನತದೃಷ್ಟರು
ಮಳೆ ಇಲ್ಲದಿರುವುದೇ ಮಾವು ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗಿದ್ದು,ಪ್ರಕೃತಿ ಮಾವು ಬೆಳೆಗಾರರನ್ನು ಕಳೆದ 3-4 ವರ್ಷಗಳಿಂದ ಇನ್ನಿಲ್ಲದಂತೆ ಕಾಡುತ್ತಿದೆ ಇದರಿಂದ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಈ ಕೂಡಲೆ ಮಳೆ ಬಂದಿದ್ದೇ ಆದಲ್ಲಿ ಶೇ. 30-40ರಷ್ಟು ಇಳುವರಿಯಾದರು ಮಾವು ಕಾಣಬಹುದು ಇಲ್ಲವಾದರೆ ತೀವ್ರ ಕುಸಿತವಾಗಲಿದೆ.
ಔಷಧ ಸಿಂಪಡಣೆ ಹಣ ಬರುವುದು ಅನುಮಾನ
ಬಿಸಿಲ ಝಳದಿಂದ ಉಂಟಾಗಿರುವ ಹವಮಾನ ವೈಪರಿತ್ಯದಿಂದ ಮಾವುಬೆಳೆ ನಾನಾ ರೀತಿಯ ರೋಗಕ್ಕೆ ತುತ್ತಾದ ಹಿನ್ನಲೆಯಲ್ಲಿ ಬೆಳೆಯನ್ನು ಕಾಪಾಡಿಕೊಂಡು ಇಳುವರಿ ಪಡೆಯುವ ನಿಟ್ಟಿನಲ್ಲಿ ಬೆಳೆಗಾರರು ಮಾವಿನ ಹೂ,ಪಿಂದೆ ಉದುರುವಿಕೆ,ನುಸಿ ರೋಗ ನಿಯಂತ್ರಣಕ್ಕೆ, ಎಂದು ಸುಮಾರು 5-6 ಬಾರಿ ಇನ್ನೂ ಕೆಲವರು 7-8 ಬಾರಿ ಔಷಧಗಳನ್ನು ಸಿಂಪಡಣೆ ಮಾಡಿದ್ದಾರೆಯಾದರೂ ಯಾವುದೆ ಪ್ರಯೋಜನವಾಗಿಲ್ಲ, ಹೂ ಕಾಯಿ ಉದುರುವ ಜೊತೆಗೆ ಮರಗಳ ಬೆಳವಣಿಗೆ ಮೇಲೂ ಪರಿಣಾಮ ಬೀರುವ ಸನ್ನಿವೇಶ ಸೃಷ್ಠಿಯಾಗಿದೆ. ಯುಗಾದಿ ನಂತರವಾದರೂ ಮಳೆ ಸುರಿದರೆ ಇರುವಂತ ಬೆಳೆಯನ್ನು ದೇವರ ವರ ಎಂದು ಉಳಸಿಕೊಳ್ಳಲು ಸಾಧ್ಯವಾಗಬುದೇನೋ ಎಂದು ಆಶಾಭಾವನೆಯಿಂದ ಮಾವು ಬೆಳೆಗಾರರು ಹೇಳುತ್ತಾರೆ.
ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹ
ಬಿಸಿಲ ತಾಪಕ್ಕೆ ಕಣ್ಣ ಮುಂದೆ ಉದರಿ ಹೋಗುತ್ತಿದ್ದ ಜೀವನಾಡಿ ಮಾವಿನ ಬೆಳೆ ಉಳಸಿಕೊಳ್ಳಲು ಸುಮಾರು ಒಂದೂವರೆ ತಿಂಗಳಿಂದ ಔಷಧಿ ಸಿಂಪಡಣೆ ಸೇರಿದಂತೆ ಇನ್ನಿತರೆ ಖರ್ಚು ಮಾಡುತ್ತಿದ್ದರು ಮಾವಿನ ಬೆಳೆ ಉಳಸಿಕೊಳ್ಳಲು ಸಾಧ್ಯವಾಗದ ದುಸ್ಥಿಯಲ್ಲಿ ಇರುವ ಬೆಳೆಗಾರರು ಸಾಲ ಸೋಲಗಳಿಂದ ಹೈರಾಣವಾಗಿದ್ದಾರೆ ಇನ್ನೂ ಮಾವುಫಸಲಿನ್ನು ಗುತ್ತಿಗೆ ಪಡೆಯುವ ಸಣ್ಣ ಪುಟ್ಟ ವ್ಯಾಪಾರಸ್ಥರು ಎಲೆ ಮೇಲೆ ಬಂಡವಾಳ ಹಾಕಿ ನಷ್ಟಕ್ಕೆ ಈಡಾಗಿ ಕಣ್ಣೀರು ಸುರಿಸುತ್ತಿದ್ದಾರೆ.
ದಾರಿ ಕಾಣದಾಗಿದೆ
ಮಾವಿನ ಬೆಳೆ ವ್ಯಾಪಾರವನ್ನೆ ನಂಬಿರುವ ನಮಗೆ ಕಳೆದ 3-4 ವರ್ಷಗಳಿಂದ ಇದೆ ಪರಿಸ್ಥಿತಿ ಹೀಗೆ ಮುಂದುವರೆಯುತ್ತಿದೆ ಈ ವರ್ಷ ನಾವು ಅನುಭವಿಸುತ್ತಿರುವ ಕೆಟ್ಟ ಪರಿಸ್ಥಿತಿ ಶತೃವಿಗೂ ಬೇಡ ಎಂದು ಮಾವಿನ ಫಸಲನ್ನು ಗುತ್ತಿಗೆ ಪಡೆದಿರುವ ವ್ಯಾಪಾರಸ್ಥರು ಅಲವತ್ತು ಕೊಳ್ಳುತ್ತಿದ್ದಾರೆ ನಮ್ಮ ಮುಂದೆ ಯಾವುದೆ ದಾರಿಗಳು ಕಾಣುತ್ತಿಲ್ಲ ನಮ್ಮ ಪರಿಸ್ಥಿತಿ ಹೇಳಿಕೊಳ್ಳಲಾಗದ್ದು ಎಂದು ಫಸಲು ಗುತ್ತಿಗೆ ಪಡೆದ ರೈತ ಸುಧಾಕರಬಾಬು ಹೇಳುತ್ತಾರೆ.
ಮಾವಿಗೆ ಶಾಶ್ವತ ಮಾರುಕಟ್ಟೆ ಇಲ್ಲ
ಇಷ್ಟೊಂದು ದೊಡ್ದ ಪ್ರಮಾಣದಲ್ಲಿ ಮಾವು ಬೆಳೆಯುತ್ತಿದ್ದರು ಇಲ್ಲಿನ ಜನಪ್ರತಿನಿಧಿಗಳು ಮಾವುಬೆಳೆಗಾರರಿಗೆ ಶಾಶ್ವತ ಮಾರುಕಟ್ಟೆ ಒದಗಿಸುವ ಕನಿಷ್ಟ ಪ್ರಯತ್ನ ಮಾಡಿಲ್ಲ,ಮಾವಿನ ತಿರಳಿನ ಸಂಸ್ಕರಣಾ ಘಟಕ, ಮಾವು ಸಂಬಂಧಿತ ಕೈಗಾರಿಕೆ ನಿರ್ಮಾಣಕ್ಕೆ ಮುಂದಾಗದೆ ಇರುವುದು ಇಲ್ಲಿನ ಸರ್ಕಾರದ ವ್ಯವಸ್ಥೆ ಬಗ್ಗೆ ಜನಪ್ರತಿನಿಧಿಗಳ ಕುರಿತಂತೆ ಬೆಳೆಗಾರರಾದ ನಮಗೆ ಅಸಹ್ಯ ಉಂಟಾಗುತ್ತಿದೆ ಎಂದು ರೈತ ಮುಖಂಡ ಸೂರ್ಯನಾರಾಯಣ್ ಹೇಳುತ್ತಾರೆ.
ಅನಕೂಲ ಮಾಡಿ ಕೊಡಿ ಅಗ್ರಹ
ಜೀವನಾಡಿ ಮಾವು ಬೆಳೆಯನ್ನು ನಂಬಿ ರೈತಾಪಿ ಜನ ಸಾಲಕ್ಕೆ ಸಿಲುಕಿದ್ದಾರೆ ಕೇವಲ ಔಷಧಿ ಸಿಂಪಡಣೆಗೆ ಲಕ್ಷಾಂತರ ಸಾಲ ಮಾಡಿರುವ ಬೆಳೆಗಾರರು ಉಳಿಮೆ ಸ್ವಚ್ಚತೆ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳಿಗೆ ಹಣ ಭೂಮಿಗೆ ಸುರಿದಿದ್ದಾರೆ ಒಂದು ವೇಳೆ ಮಾವು ಫಸಲು ನೀಡಿದರು ಬರುವಂತ ಹಣ ಯಾವುದಕ್ಕೂ ಸಾಲುವುದಿಲ್ಲ ಮಾವುಬೆಳೆಗಾರರ ಉಳಿವಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಅಗ್ರಹಿಸುತ್ತಾರೆ.
ನೆರವಿಗೆ ಬಾರದ ಮ್ಯಾಂಗೋ ಬೋರ್ಡ್
ಮಾವು ಬೆಳೆಗಾರರ ಅನಕೂಲಕ್ಕೆ ಸ್ಥಾಪನೆಯಾದ ಮ್ಯಾಂಗೋ ಬೋರ್ಡ್ ಮಾವು ಬೆಳೆಗಾರರಿಗೆ ಯಾವುದೆ ರೀತಿಯಲ್ಲೂ ಉಪಯೋಗಕ್ಕೆ ಬರುತಿಲ್ಲ ಕಳೆದ 3-4 ವರ್ಷಗಳಿಂದ ಮಾವು ಬೆಳೆಗಾರ ಸಂಕಷ್ಟದಲ್ಲಿ ಇದ್ದರು ಬೋರ್ಡ್ ನಿಂದ ಯಾವುದೆ ಪ್ರಯೋಜನ ಆಗಿಲ್ಲ ಎಂದು ಬೆಳೆಗಾರರು ಅರೋಪಿಸುತ್ತಾರೆ. ಮ್ಯಾಂಗೋ ಬೋರ್ಡ್ ಗೆ ಬೆಂಗಳೂರಿನಲ್ಲಿ ಒಂದು ಶ್ರೀನಿವಾಸಪುರದಲ್ಲಿ ಒಂದು ಕಚೇರಿ ಇದೆ ಅದಕ್ಕೆ ಒಬ್ಬರು ಸಾಂವಿಧಾನಿಕ ಬದ್ದ ಅಧ್ಯಕ್ಷರು,ಇತರೆ ಅಧಿಕಾರಿ ವರ್ಗ ಇದ್ದಾರೆ ಸರ್ಕಾರ ಸಾಮ್ಯತೆ ಇರುವ ಸಂಸ್ಥೆ ಯಾವುದೆ ರೀತಿಯಲ್ಲೂ ಮಾವುಬೆಳೆಗಾರರ ನೆರವಿಗೆ ಬಾರದೆ ಇರುವುದು ದುರಂತವೆ ಸರಿ ಎನ್ನುತ್ತಾರೆ ಮಾವು ಹೋರಾಟಗಾರ ಪಾತಕೋಟೆನವೀನ್.