ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕಳೆದ ನಲವತ್ತು-ಐವತ್ತು ವರ್ಷಗಳಿಂದ ರೈತರು ಉಳಿಮೆ ಮಾಡಿಕೊಂಡಿದ್ದ ಭೂಮಿಯನ್ನು ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಚರಣೆಯ ನೆಪದಲ್ಲಿ ನೂರಾರು ಎಕರೆಯಷ್ಟು ರೈತರ ಜಮೀನುಗಳನ್ನು ಏಕಾ ಏಕಿ ತೆರವು ಮಾಡಿರುವುದಲ್ಲದೆ ರೈತರ ವಿರುದ್ದ ದೌರ್ಜನ್ಯವಾಗಿ ವರ್ತಿಸಿ ರೈತರು ಬೆಳೆದಿರುವಂತ ಬೆಳೆಯನ್ನು ನಾಶ ಮಾಡಿದ್ದಾರೆ ಎಂದು ಸಂಸದ ಮುನಿಸ್ವಾಮಿ ನೇತೃತ್ವದ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಅರಣ್ಯ ಖಾತೆ ಸಚಿವ ಭೂಪೆಂದರ್ ಯಾದವ್ ಅವರನ್ನು ಭೇಟಿ ಮಾಡಿ ತಿಳಿಸಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ನಡೆದಿರುವಂತ ಅರಣ್ಯ ಒತ್ತುವರಿ ತೆರವು ಕಾರ್ಯಚರಣೆಯ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಸರ್ಕಾರದ ಅರಣ್ಯ ಖಾತೆ ಸಚಿವ ವಿವರಿಸಿದ ಸಂಸದ ಮುನಿಸ್ವಾಮಿ ನಷ್ಟಕ್ಕೆ ಒಳಗಾಗಿರುವಂತ ರೈತರಿಗೆ ನ್ಯಾಯ ಒದಗಿಸಿಕೊಡಬೇಕು,ರೈತರ ಯಾವುದೇ ಜಮೀನುಗಳನ್ನು ತೆರವು ಗೊಳಿಸ ಬಾರದೆಂದು ಮನವಿ ಪತ್ರ ಸಲ್ಲಿಸಿದ್ದಾರೆ.
ಕೇಂದ್ರ ಅರಣ್ಯ ಸಚಿವರ ಭೇಟಿಮಾಡಿದ ಸಂಸದ ಮುನಿಸ್ವಾಮಿ ನೇತೃತ್ವದ ನಿಯೋಗದಲ್ಲಿ ವಿಧಾನಪರಿಷತ್ ಸದಸ್ಯ ಇಂಚರಗೋವಿಂದರಾಜ್,ಬಿ.ಜೆ.ಪಿ ಕೋಲಾರ ಜಿಲ್ಲಾದ್ಯಕ್ಷ ಡಾ.ವೇಣುಗೋಪಾಲ್,ಮುಖಂಡ ಬಂಗಾರಪೇಟೆಚಂದ್ರಾರೆಡ್ದಿ, ಮುಳಬಾಗಿಲು ಅಲಂಗೂರು ಶಿವಣ್ಣ,ರಾಷ್ಟ್ರೀಯ ರೈತ ಮುಖಂಡ ಗೋಪಾಲ್,ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.