ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲಿ ನಡೆಯುತ್ತಿರುವ ಅರಾಜಕತೆ ರಾಜಕೀಯಕ್ಕೆ ಇತಿಶ್ರೀ ಹಾಡಬೇಕು ಎಂದು ಕ್ಷೇತ್ರದ ಜನತೆ ನಿರ್ಧಾರ ಮಾಡಿದ್ದಾರೆ ಇದಕ್ಕಾಗಿ ನನಗೆ ರಾಜಕೀಯ ಶಕ್ತಿ ತುಂಬಲು ಮುಂದಾಗಿರುವುದಾಗಿ ಗುಂಜೂರು ಶ್ರೀನಿವಾಸರೆಡ್ಡಿ ಹೇಳಿದರು ಅವರು ಇಂದು ಭಾನುವಾರ ಹಳೇಪೇಟೆಯ ವಿವಿದ ಸಮಾಜಗಳ ಯುವಕರನ್ನು ಮತ್ತು ವಿವಿಧ ಪಕ್ಷಗಳ ಮುಖಂಡರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಗುಂಜೂರು ಶ್ರೀನಿವಾಸರೆಡ್ಡಿಯೊಂದಿಗೆ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಪೆದ್ದರೆಡ್ಡಿರಾಜೇಂದ್ರಪ್ರಸಾದ್ ಮಾತನಾಡಿ ನಾನು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೀನಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ತಮ್ಮ ಸ್ವಂತ ಆಸ್ತಿ ಅಂತ ತಿಳಿದಕೊಂಡಿರುವ ಕೆಲವರು ಪಕ್ಷದಲ್ಲಿನ ನಮ್ಮಂತ ನಿಷ್ಠಾವಂತರನ್ನು ಕಡೆಗಣಿಸಿ ಕೋಮುಶಕ್ತಿಗಳನ್ನು ಬೆಳೆಸುತ್ತಿದ್ದಾರೆ ಇದರಿಂದ ಬೆಸೆತ್ತ ನಾವು ಅವರ ಧೊರಣೆಗಳನ್ನು ಖಂಡಿಸಿ ಜಾತ್ಯಾತೀತ ಶಕ್ತಿಗಳನ್ನು ಬಲ ಪಡಿಸುವ ಉದ್ದೇಶದಿಂದ ಗುಂಜೂರು ಶ್ರೀನಿವಾಸರೆಡ್ಡಿ ಅವರಿಗೆ ರಾಜಕೀಯ ಶಕ್ತಿ ತುಂಬಲು ಮುಂದಾಗಿರುವುದಾಗಿ ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಎಲ್.ಸೂರ್ಯನಾರಯಣ್ ಮಾತನಾಡಿ ಜೆಡಿಎಸ್ ಪಕ್ಷದ ಕಾರ್ಯಕರ್ತನಾದ ನಾನು ಮತ್ತು ನನ್ನ ಕೆಲ ಸ್ನೇಹಿತರು ಇವತ್ತು ಗುಂಜೂರು ಶ್ರೀನಿವಾಸರೆಡ್ಡಿಯವರೊಂದಿಗೆ ಅಧಿಕೃತವಾಗಿ ಗುರುತಿಸಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ನನ್ನ ಎಲ್ಲಾ ರಾಜಕೀಯ ನಿರ್ಧಾರಗಳು ಶ್ರೀನಿವಾಸರೆಡ್ಡಿ ಅವರೊಂದಿಗೆ ಇರುತ್ತದೆ ಹಾಗೆ ಇನ್ನು ಕೆಲ ಸ್ನೇಹಿತರು ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಗುಂಜೂರು ಶ್ರೀನಿವಾಸರೆಡ್ಡಿಯವರಿಗೆ ರಾಜಕೀಯವಾಗಿ ಜೊತೆಯಾಗಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಹಳೇಪೇಟೆ ತರಕಲೊಳ್ಳು ನಾರಾಯಣರೆಡ್ಡಿ ಸಹೋದರರು, ದೂದಿಪೇಟೆ ಮುನಿರೆಡ್ಡಿ ಕುಟುಂಬ, ಅನ್ವರ್, ಬೀಸನಹಳ್ಳಿ ಶಂಕರೇಗೌಡ, ಪಟೇಲ್ ಕೃಷ್ಣಾರೆಡ್ಡಿ ಮಕ್ಕಳು, ಕುರಬಸಮಾಜದ ಯುವಕರು, ಸೀತರೆಡ್ಡಿಹಳ್ಳಿ,ನಲ್ಲಪಲ್ಲಿ,ಉನಿಕಿಲಿ,ಕೇತಗಾನಹಳ್ಳಿ ಗ್ರಾಮಗಳ ಯುವಕರು ದೊಡ್ಡಮಟ್ಟದಲ್ಲಿ ಗುಂಜೂರು ಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಗುಂಜೂರು ಬಣದ ಮುಖಂಡರಾದ ರಾಜಶೇಖರೆಡ್ಡಿ,ಹೆಬ್ಬಟ ರಫೀಕ್, ಪುರಸಭೆ ಮಾಜಿ ಸದಸ್ಯ ಮೊಹಮದ್ ಆಲಿ ನಂಬಿಹಳ್ಳಿಶ್ರೀನಿವಾಸ್, ಪಟೇಲ್ ಹೋಟೆಲ್ ಷಫಿ,ಶ್ರೀರಾಮ್,ಬೈಚಪ್ಪ ಮುಂತಾದವರು ಇದ್ದರು