ಶ್ರೀನಿವಾಸಪುರ: ಸೋಮವಾರ ರಾತ್ರಿ ಬೀಸಿದ ರಣ ರಕ್ಕಸ ಬಿರುಗಾಳಿ ಮತ್ತು ಆಲಿ ಕಲ್ಲು ಮಳೆಗೆ ನೂರಾರು ಎಕರೆಯಲ್ಲಿನ ಮಾವಿನ ಫಸಲು ಟನ್ ಗಟ್ಟಲೆ ನೆಲಕ್ಕೆ ಉದರಿ ಬಿದ್ದಿದೆ.
ತಾಲೂಕಿನಲ್ಲಿ ಸುಮಾರು ಸಾವಿರದ ನೂರ ಅರವತ್ತು ಹೆಕ್ಟೇರ್ ಪ್ರದೇಶದಲ್ಲಿ ಜೀವನಾಡಿ ಮಾವು ನೆಲದ ಪಾಲಾಗಿದ್ದರೆ ಹತ್ತು ಹೆಕ್ಟೇರ್ ಪ್ರದೇಶದಲ್ಲಿ ಟಮ್ಯಾಟೋ ಹಾಗು ಇತರೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಕೆ ಅಧಿಕಾರಿಗಳು ಅಂದಾಜಿಸಿರುತ್ತಾರೆ.
ಈ ಬಾರಿ ಕಡಿಮೆಯಂದರೆ ಕಡಿಮೆ ಫಸಲು ಬಿಟ್ಟಿದ್ದು ಅಂದಾಜು ಶೇಖಡವಾರು 20 ರಿಂದ 30 ಮಾತ್ರ ಫಸಲು ಬಂದಿತ್ತು ಕಳೆದ 3-4 ದಿನಗಳ ಹಿಂದೆ ಬೀಸಿದ ಗಾಳಿ ಮಳೆಯಿಂದಾಗಿ ಕಸಬಾ ಹೋಬಳಿಯ ಬಹುತೇಕ ಭಾಗದಲ್ಲಿ ಮಾವು ಫಸಲು, ಟಮ್ಯಾಟೋ ನೆಲದ ಪಾಲಾಗಿದ್ದರೆ ನಿನ್ನೆ ರಾತ್ರಿ ಬೀಸಿದ ಆರ್ಭಟದ ಬಿರುಗಾಳಿ ಮಳೆಯಿಂದ ತಾಲೂಕಿನ ರೋಣೂರು,ನೆಲವಂಕಿ,ಯಲ್ದೂರು ಹೋಬಳಿಗಳಲ್ಲಿ ಮಾವಿನ ಫಸಲು ಧರೆಗೆ ಬಿದ್ದಿದೆ. ಪಕ್ವವ ಗೊಂಡು ಕೊಯ್ಲು ಹಂತದಲ್ಲಿದ್ದ ಮಾವಿನ ಕಾಯಿಗಳು ಗಾಯಗೊಂಡಿವೆ.
ಯಲ್ದೂರು ಹೋಬಳಿಯ ಅರಕೇರಿ ಗ್ರಾಮದಲ್ಲಿ ರಣರಕ್ಕಸ ಬಿರುಗಾಳಿಗೆ ಮಾವಿನ ತೋಪಿನಲ್ಲಿ ಹಾಕಲಾಗಿದ್ದ ತಗಡಿನ ಶೆಡ್ ಗಾಳಿಗೆ ಹಾರಿಹೋಗಿದ್ದರೆ ಸುಮಾರು 30-40 ವರ್ಷದ ವಯಸ್ಸಿನ ಮಾವಿನ ಮರಗಳ ರೆಂಬೆಗಳು ಮುರಿದು ಬಿದ್ದಿವೆ. ತೆಂಗಿನ ಮರಗಳು ಸಹ ನೆಲಕ್ಕೆ ಬಾಗಿವೆ. ರೈತ ಅರಕೇರಿ ರಾಜಣ್ಣ ಹೇಳುವಂತೆ 40 ವರ್ಷಗಳಿಂದ ಈಚಿಗೆ ಇಷ್ಟೊಂದು ಬೀಕರವಾದ ಗಾಳಿ ಮಳೆ ನಾವು ಕಂಡಿಲ್ಲ ಎನ್ನುತ್ತಾರೆ.
ಮಾವಿನ ಮಂಡಿಗಳಿಗೆ ಸಂಪದ್ಭರಿತ ಮಾವು ಫಸಲು ಹಾಕಬೇಕಿದ್ದ ರೈತರು ಗಾಳಿಗೆ ಉದಿರಿ ಗಾಯಗೊಂಡ ಮಾವಿನ ಕಾಯಿ ಹಾಕುತ್ತಿರುವುದು ನೋವಿನ ಸಂಗತಿ ಎಂದು ಕಣ್ಣಿರಿಡುತ್ತಿದ್ದಾರೆ, ಟನ್ 30-40 ಸಾವಿರ ಬಾಳುತ್ತಿದ್ದ ಮಲ್ಲಿಕಾ,ಬೇನುಷ ಮತ್ತು ಬಾದಮಿ ಜಾತಿ ಮಾವು ಗಾಳಿಯಿಂದ ಉದರಿರುವ ಪರಿಣಾಮ 4-5 ರೂಪಾಯಿಗಳಿಗು ಕೊಳ್ಳುವರಿಲ್ಲ ಎನ್ನುತ್ತಾರೆ.
ರಾತ್ರಿ ಬಿದ್ದಿರುವ ಆಲಿಕಲ್ಲು ಸಮೇತ ಬಿರುಗಾಳಿ ಮಳೆಯಿಂದಾದ ಅನಾಹುತದ ಮಾಹಿತಿ ಪಡೆಯಲು ತಾಲೂಕು ತೋಟಗಾರಿಗೆ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ತಾಲೂಕಿನಾದ್ಯಂತ ಸಂಚರಿಸಿ ನಷ್ಟದ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ತೋಟಗಾರಿಕೆ ಹಿರಿಯ ಸಹಾಯಕ ನೀರ್ದೇಶಕ ಶ್ರೀನಿವಾಸನ್ ತಿಳಿಸಿದರು. ಫಸಲು ನಷ್ಟಗೊಂಡ ಪ್ರದೇಶಗಳಿಗೆ ತಹಶೀಲ್ದಾರ್ ಶರೀನ್ ತಾಜ್ ಭೇಟಿ ನೀಡಿ ನಷ್ಟದ ಅಂದಾಜು ಮಾಹಿತಿ ಪಡೆದಿರುತ್ತಾರೆ.
ಮಾವಿನ ತೀವ್ರತೆ ಗೊತ್ತಿಲ್ಲದ ತೋಟಗಾರಿಕೆ ಸಚಿವ
ಶ್ರೀನಿವಾಸಪುರ ಕೇಂದ್ರಿಕೃತವಾಗಿ ಬೆಳೆಯುವಂತ ಮಾವು ಬೆಳೆ ಇಲ್ಲಿನ ರೈತಾಪಿ ಜನರ ಜೀವನಾಡಿ ಬೆಳೆ ಮಾವಿನ ತೀವ್ರತೆಯ ಅರಿವು ಇಲ್ಲದ ತೋಟಗಾರಿಕೆ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಶ್ರೀನಿವಾಸಪುರಕ್ಕೆ ಬಂದಿದ್ದಾರು ಇಲ್ಲಿ ಪ್ರಾಕೃತಿಕ ಅನಾಹುತದಿಂದ ಜೀವನಾಡಿ ಮಾವು ಹಾಳಾಗಿದೆ ಸರ್ಕಾರದ ಪ್ರತಿನಿಧಿಯಾಗಿ ಮಾವು ರೈತರ ನೋವು ಆಲಿಸದೆ ಹೋಗಿದ್ದು ದುರಂತ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ನಂಬಿಹಳ್ಳಿಶ್ರೀರಾಮರೆಡ್ದಿ ಆರೋಪಿಸಿದ್ದಾರೆ.
ಪರಿಹಾರಕ್ಕೆ ಅಗ್ರಹ
ಇಲ್ಲಿನ ಮಾವು ಕೇವಲ ಬೆಳೆಯಲ್ಲ ರೈತಾಪಿ ಕುಟುಂಬಗಳ ಜೀವನಾಡಿ ಕೂಡ ಹೌದು ಜೀವನಾಡಿ ಮಾವು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದೆ ಮಾವನ್ನೆ ನಂಬಿದ್ದ ಜನತೆ ಕಷ್ಟಕ್ಕೆ ಈಡಗಿದ್ದಾರೆ ಇದರ ಅರಿವು ಸರ್ಕಾರಗಳಿಗೆ ಇರಬೇಕು ಎಂದು ಮಾವು ಬೆಳೆಗಾರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಎಂದು ಹೇಳಿದ್ದಾರೆ.ಮಾವು ಬೆಳೆ ಕಳೆದುಕೊಂಡ ರೈತರನ್ನು ಸರ್ಕಾರಗಳು ಕೈ ಹಿಡಿಯಬೇಕು ಎಂದಿರುವ ಅವರು ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಮುನಿರತ್ನ ಅವರು ತೋಟಗಾರಿಕೆ ಸಚಿವರು ಆಗಿದ್ದು ಮಾವು ಬೆಳೆ ಹಾಳಾಗಿರುವ ವಿಚಾರದಲ್ಲಿ ವಿಶೇಷ ಆಸಕ್ತಿ ವಹಿಸಿ ನಷ್ಟವಾಗಿರುವ ಬಗ್ಗೆ ಪ್ರಾಮಾಣಿಕವಾಗಿ ಸರ್ವೆ ಮಾಡಿಸಿ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಅಗ್ರಹಿಸಿರುತ್ತಾರೆ.
ಜನ ಪ್ರತಿನಿಧಿಗಳ ವಿರುದ್ದ ಆಕ್ರೋಶ
ಜೀವನಾಡಿ ಬೆಳೆ ಮಾವಿನ ರೈತರು ನಷ್ಟಕ್ಕೆ ಒಳಗಾಗಿದ್ದರು ಇಲ್ಲಿನ ಜನಪ್ರತಿನಿಧಿಗಳಿಗೆ ಸಿರಿಯಸ್ ನೆಸ್ ಇಲ್ಲ ಎಂದು ದೂರಿದ ಅವರು ಜಿಲ್ಲಾಮಟ್ಟದ ಸಭೆಗೆ ಕೊಡುವಂತ ಮಹತ್ವ ಮಾವಿನ ರೈತರ ಕಷ್ಟ ಆಲಿಸಲು ನೀಡಲು ಸಾಧ್ಯ ಇಲ್ಲವಾ ಎಂದು ತೀವ್ರಧಾಟಿಯಲ್ಲಿ ಪ್ರಶ್ನಿಸಿದ್ದಾರೆ.