- ಹವಾಮಾನ ವೈಪರಿತ್ಯ ಧರ ಇಲ್ಲದೆ
- ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಮಾವು ರೈತ
- ತೋಟಗಳಲ್ಲಿ,ಮಂಡಿಗಳಲ್ಲಿ ಕೊಳೆಯುತ್ತಿರುವ ಮಾವು
- ತಿರಳು ಉದ್ಯಮ ಇಲ್ಲದ್ದು ದುರಂತ
ನ್ಯೂಜ್ ಡೆಸ್ಕ್:ಹವಾಮಾನ ವೈಪರಿತ್ಯ, ಆಲಿಕಲ್ಲು ಮಳೆ ,ಕೀಟಗಳ ದಾಳಿ ಲಾಕ್ಡೌನ್, ಧರ ಕುಸಿತ ಹೀಗೆ ಸರಣಿ ಸಮಸ್ಯಗಳಿಂದ ಮಾವಿನ ಬೆಳೆಗಾರ ಈ ಬಾರಿ ಜರ್ಜಿತನಾಗಿದ್ದಾನೆ. ಕಣ್ಣಿರಿನಲ್ಲಿ ಕೈತೊಳೆಯುತ್ತಿದ್ದಾನೆ, ಶ್ರೀನಿವಾಸಪುರ ಭಾಗದ ಜೀವನಾಡಿ ಬೆಳೆ ಮಾವಿನ ಇಳುವರಿ ಕುಸಿದು ಬಿದ್ದಿದ್ದೆ.ಇಲ್ಲಿನ ಜನ ವಾರ್ಷಿಕ ಬೆಳೆಯಾಗಿ, ಜೀವನಾಡಿಯಂದು ನಂಬಿದ್ದ ಮಾವು ಸಂಪೂರ್ಣವಾಗಿ ನೆಲಕಚ್ಚಿದೆ. ಮಾವು ಈ ಬಾರಿ ಕಡಿಮೆ ಇಳುವರಿ ಬಂದಿದೆ ಅದರಲ್ಲೂ ಅದೂ ಫಲ ಪೂರ್ಣವಾಗುತ್ತಿಲ್ಲ ಕಾಯಿ ಬೆಳೆದಷ್ಟು ಊಜಿನೋಣದ ಕಾಟದಿಂದ ಗಿಡದಲ್ಲೆ ಕೊಳೆತು ಹೋಗುತ್ತಿದೆ.
ತೋತಾಪುರಿ,ಮಾಲ್ಲಿಕಾ,ನೀಲಂ ಮತ್ತು ಬೆನಿಷಾ ಇಲ್ಲಿನ ಮುಖ್ಯ ಬೆಳೆಗಳು ಉಳಿದಂತೆ ಸೇಂದುರಾ ಇತರೆ ಮಾವಿನ ಜಾತಿ ಹಣ್ಣಗಳು ಇಲ್ಲಿ ಅಪರೂಪ.
ಪ್ರಮುಖವಾಗಿ ಬೆಳೆಯುವ ತೋತಾಪುರಿ ಕಾಯಿ ಕೊಳ್ಳಲು ಇಲ್ಲಿನ ಬೆಳೆಗಾರ ಆಂಧ್ರ,ತಮಿಳುನಾಡುಗಳಲ್ಲಿರುವ ತಿರುಳು ಫ್ಯಾಕ್ಟರಿಗಳ ದಾರಿ ಕಾಯುವ ಅನಿವಾರ್ಯತೆ ಇದೆ ಈ ಬಾರಿ ತಿರುಳು ಉದ್ಯಮವು ಇಲ್ಲಿನ ಮಾವಿನಹಣ್ಣು ಖರೀದಿಸಲು ಆಸಕ್ತಿ ಹೊಂದಿಲ್ಲ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ ಇಷ್ಟೆಲ್ಲಾ ಸಮಸ್ಯೆಗಳು ಮಾವು ಬೆಳೆಗಾರನನ್ನು ಕಾಡುತ್ತಿದ್ದರು ಸರ್ಕಾರ ಯಾವುದೇ ರಿತಿಯಲ್ಲೂ ಬೆಳೆಗಾರನನ್ನು ಕೈ ಹಿಡಿಯದೆ ನಿರ್ಲಕ್ಷ್ಯವಹಿಸಿರುವುದು ದುರಂತಮಯ ಎನ್ನಬಹುದು.
ಸರ್ಕಾರವೂ ಮಾವು ಬೆಳೆಗಾರನ ಕಷ್ಟಕ್ಕೆ ಸ್ಪಂದಿಸಲಿಲ್ಲ ಯಾವುದೇ ಬೆಂಬಲ ಬೆಲೆ ಇತರೆ ಯಾವುದೇ ಸೌಲಭ್ಯ ಬೆಳೆಗಾರನನ್ನು ಕಷ್ಟಕ್ಕೆ ಅಗಲಿಲ್ಲ ಇದರ ಪರಿಣಾಮವಾಗಿ, ಮಾವಿನ ರೈತ ಅಗ್ಗದ ಬೆಲೆಗೆ ಮಾರಾಟ ಮಾಡಬೇಕು ಇಲ್ಲ್ಲವಾದರೆ ಮಾವನ್ನು ಮರಗಳಲ್ಲಿ ಕೊಳೆಯಲು ಬೀಡಬೇಕು ಕಾಯಿ ಕೊಯ್ಲು ಮಾಡಿ ಮಂಡಿಗೆ ತಂದು ಹಾಕಿದರೆ ಅಲ್ಲಿ ಮತ್ತೆ ಗ್ರೇಡಿಂಗ್ ಹೆಸರಿನಲ್ಲಿ ಕಾಯಿ ವಿಂಗಡಿಸುತ್ತಾರೆ ಉಳಿದ ಕಾಯಿಗೆ ಬರುವ ದುಡ್ದು ಕೊಯ್ಲು ಕಾರ್ಮಿಕರಿಗೆ ಮತ್ತು ಸಾರಿಗೆಯ ವೆಚ್ಚಕ್ಕೆ ಸರಿಯಾಗುತ್ತದೆ ಇದು ಮಾವು ರೈತನ ಪರಿಸ್ಥಿತಿ
ಒಂದು ಎಕರೆಗೆ ಸರಿ ಸುಮಾರು 50,000 ರೂ.ಖರ್ಚಾಗುತ್ತದೆ ಹವಾಮಾನ ಸೇರಿದಂತೆ ಎಲ್ಲವೂ ಸರಿ ಇದ್ದರೆ ಎಕರೆಗೆ 7 ರಿಂದ 10 ಟನ್ ಇಳುವರಿ ಪಡೆದು ಪ್ರತಿ ಟನ್ ಗೆ 10 ರಿಂದ 15 ಸಾವಿರ ಧರ ನಿರೀಕ್ಷಿಣೆಯಲ್ಲಿದ್ದ ಮಾವು ಬೆಳೆಗಾರನಿಗೆ ಇಂದು ಕೇವಲ 5 ರಿಂದ 6 ಸಾವಿರಕ್ಕೆ ಸೀಮಿತವಾಗಿದೆ.
ಕರೋನಾ ಲಾಕ್ಡೌನ್ ನಿಂದಾಗಿ ಮಾರುಕಟ್ಟೆ ಕೊರತೆಯಿಂದಾಗಿ ಬೆಲೆಗಳು ಕುಸಿದಿದ್ದು ಅನ್ಲಾಕ್ ಆದರೇ ಮಾವಿಗೆ ಬೆಲೆ ಬರಬಹುದು ಎಂಬ ನಿರಿಕ್ಷೇಯಲ್ಲಿ ಬೆಳೆಗಾರ ಆಶಾಭಾವನೆಯಿಂದ ಇದ್ದಾನೆ
ನಮ್ಮಲ್ಲಿ ಇಲ್ಲದ ತಿರಳು ಉದ್ಯಮ
ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಸರ್ಕಾರದ ಉಚಿತ ಯೋಜನೆಗಳ ಗುಂಗಿನಲ್ಲೆ ಕಾಲ ಕಳೆಯುತ್ತಿರುವ ವ್ಯವಸ್ಥೆ ಇದೆ, ಇಲ್ಲಿ ಬೆಳೆದಂತ ಬೆಳೆಗೆ ಶಾಶ್ವತ ಮಾರುಕಟ್ಟೆ ಅಥಾವ ಅದನ್ನು ಉಪಯೋಗಿಸಿ ಮಾಡುವ ಕಾರ್ಖಾನೆ ಬೇಕು ಎಂಬ ಕನಿಷ್ಠ ಅಲೋಚನೆ ಮಾಡೆದೆ ಇರುವಷ್ಟು ದೂರ ಸಾಗಿ ಬಂದಿದೆ ಎನ್ನುವ ಆರೋಪ ಇದೆ.
ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾವು ಬೆಳೆಯುವ ರೈತನಿಗೆ ಅನಕೂಲವಾಗಲಿ ಎಂದು ಇದುವರಿಗೂ ಆಳಿದ ಸರ್ಕಾರದ ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನ ಇಲ್ಲಿನ ಜನಪ್ರತಿನಿಧಿಗಳಿಂದಲೂ ಆಗದಿರುವುದು ದುರಂತವೆ ಸರಿ.ಇಲ್ಲಿ ಇರುವಂತ ಕೇವಲ ಒಂದು ಮಾವು ತಿರಳು ತಗೆಯುವಂತ ಕಾರ್ಖಾನೆ ಎಲ್ಲಿಗೂ ಸಾಲದೂ ಮಾವು ತಿರುಳು ಸಂಬಂದಿತ ಉದ್ಯಮಗಳು ಹಾಗು ಮಾವು ತಿರುಳು ತಗೆಯುವ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾದರೆ ಇಲ್ಲಿನ ಜೀವನಾಡಿ ಮಾವಿಗೆ ಗೌರವಾನಿತ ಬೆಲೆ ಬರಬಹುದು ಎಂಬುದು ತಙ್ಞರ ಅಭಿಪ್ರಾಯ.
ವಿಶೇಷ ವರದಿ:ಚ.ಶ್ರೀನಿವಾಸಮೂರ್ತಿ