ಶ್ರೀನಿವಾಸಪುರ:ಫಸಲ್ ಭೀಮಾ ಯೋಜನೆಯ ಹಣ ನೀಡದೆ ವಿಳಂಬ ನೀತಿ ಅನುಸರಿಸುತ್ತ ಈ ವರ್ಷವೂ ಮಾವು ಬೆಳೆಗಾರರನ್ನು ವಿಮಾ ಸಂಸ್ಥೆ ವಂಚಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿ ನೂರಾರು ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಾವು ಬೆಳೆಗಾರರು ಕಟ್ಟಿದ್ದ ವಿಮಾ ಕಂತಿನ ಕ್ಲೈಮ್ ಹಣವನ್ನು ಕಳೆದ ಅಕ್ಟೋಬರ್ ನಲ್ಲೆ ನೀಡಬೇಕಾಗಿತ್ತು ಆದರೆ ವಿಮಾ ಕಂತು ಕಟ್ಟಿಸಿಕೊಂಡಿರುವ ಎಚ್ ಡಿ ಎಫ್ ಸಿ ಇರ್ಗೋ ಕಂಪನಿಯವರು ಫೆಬ್ರವರಿ ಬಂದರು ಕ್ಲೈಮ್ ಹಣ ನೀಡದೆ ತಡ ಮಾಡುತ್ತ ರೈತರನ್ನು ಯಾಮಾರಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಆರೋಪಿಸಿದರು.
ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘ ಹಾಗು ಇತರೆ ರೈತ ಸಂಘಟನೆಗಳ ಮುಖಂಡರು ಎಚ್ ಡಿ ಎಫ್ ಸಿ ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗುತ್ತ ವಿಮಾ ಕಂಪನಿಯವರು ವಿಮೆ ಹಣ ನೀಡದೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ತಹಶೀಲ್ದಾರ್ ಸುಧೀಂದ್ರ ಅವರಿಗೆ ಮನವಿ ನೀಡಿ ರೈತರು ನಾವು ಒಂದು ವಾರದ ಕಾಲ ಕಾಲಾವಧಿಯನ್ನು ನೀಡುತ್ತಿದ್ದೇವೆ ವಾರದ ಒಳಗಾಗಿ ವಿಮಾ ಕಂಪನಿ ಅವರನ್ನು ಕರೆಸಿ ಸಭೆ ಮಾಡಿ ರೈತರಿಗೆ ಬರಬೇಕಾದಂತಹ ಇನ್ಸೂರೆನ್ಸ್ ಹಣವನ್ನು ಕೊಡಿಸದೆ ಇದ್ದಲ್ಲಿ ಕೋಲಾರ ಜಿಲ್ಲೆಯಾದ್ಯಂತ ಉಗ್ರ ರೀತಿಯ ಹೋರಾಟಕ್ಕೆ ಮಾವು ಬೆಳೆಗಾರರು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ಪಾತುಕೋಟೆ ನವೀನ್ ಕುಮಾರ್ ಖಜಾಂಜಿ ಬೆಲ್ಲಂ ಶ್ರೀನಿವಾಸ ರೆಡ್ಡಿ ಸಂಚಾಲಕರಾದ ಪಾರುಕ್ ಅಹಮದ್ ಗೌರವಾಧ್ಯಕ್ಷರಾದ ಈರಪ್ಪರೆಡ್ಡಿ ಉಪಾಧ್ಯಕ್ಷರಾದ ಎಲವಗುಂಟೆ ಬೈರಾರೆಡ್ಡಿ ಪ್ರಾಂತ ರೈತ ಸಂಘದ ಮುಖಂಡ ಸೂರ್ಯನಾರಾಯಣ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ವೀರಭದ್ರ ಸ್ವಾಮಿ ಹಸಿರು ಸೇನೆ ತಾಲೂಕ ಅಧ್ಯಕ್ಷರು ನಂಬಿಹಳ್ಳಿ ಶ್ರೀರಾಮರೆಡ್ಡಿ ಬೈಚೇಗೌಡ ವೆಂಕಟೇಶ್ ಕೃಷ್ಣಪ್ಪ ಶ್ರೀನಿವಾಸ್ ರೆಡ್ಡಿ ಮುಂತಾದವರು ಇದ್ದರು