ಶ್ರೀನಿವಾಸಪುರ: ಮಾಂಡೋಸ್ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಉತ್ತರ ಭಾಗದ ಬಹುತೇಕ ಕೆರೆಗಳು ಹಾಗು ನೀರಾವರಿ ಪ್ರಾಜೆಕ್ಟ್ ಗಳು ಬರ್ತಿಯಾಗಿ ತುಂಬಿ ಭೋರ್ಗೆರುಯುತ್ತ ಆಂಧ್ರದ ಕಡೆ ಹರಿಯುತ್ತಿವೆ.
ನೆಲವಂಕಿ ಹೋಬಳಿಯ ಗೋರವಿಮಾಕಲಹಳ್ಳಿ,ಜೋಡಿಕೊತ್ತಪಲ್ಲಿ,ಕುರುಪಲ್ಲಿ,ಚಿಕ್ಕಒಬಳನಾಯಕನ ಕೆರೆ,ದೊಡ್ದಒಬಳನಾಯಕನಕೆರೆ,ಇಲ್ದೋಣಿ ಕೆರೆ ಕೋಡಿಬಿದ್ದಿವೆ,ಇವುಗಳಿಂದ ಹರಿಯುವ ನೀರು ಗುಂದೇಡು ಕೆರೆಗೆ ಹರಿದು ಅಲ್ಲಿಂದ ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿ ಹಾದು ಹೋಗಿರುವ ಗುಂದೇಡು ದೊಡ್ದ ಹಳ್ಳದ ಮೂಲಕ ನಿಮ್ಮನಪಲ್ಲಿ ನಾಲೆ ಮೂಲಕ ಜಾಲಗೊಂಡ್ಲಹಳ್ಳಿ ಪ್ರಾಜೇಕ್ಟ್ ಸೇರುತ್ತದೆ.
ಪುಲಗೂರಕೋಟೆಯ ನಾಯಿನಚರವುಕೆರೆ ಅಭಿವೃದ್ದಿ!
ತಾಲೂಕು ಪುಲಗೋರಕೋಟೆ ಭಾಗದ ಕೊತ್ತಗಡ್ದ-ಗಂಗಾಪುರ ಅರಣ್ಯ ಪ್ರದೇಶದಲ್ಲಿ ಬೆಟ್ಟಗಳ ಸಾಲಿನ ಕಣಿವೆ ಪ್ರದೇಶದಲ್ಲಿ ಬರುವಂತ ನಾಯಿನಚರವು ಕೆರೆಗೆ ಬೆಟ್ಟಗಳಿಂದ ದೊಡ್ದಮಟ್ಟದಲ್ಲಿ ನೀರು ಹರಿದು ಬರುತ್ತದೆ ಇಲ್ಲಿ ನೀರು ನಿಲ್ಲಲು ಸಾಧ್ಯವಾಗದೆ ನೇರವಾಗಿ ಕೆರೆ ನೀರು ನೇರವಾಗಿ ಆಂಧ್ರದ ಚಂಬಕೂರು-ರಾಮಸಮುದ್ರಂ ಭಾಗದ ಕೆರೆಗಳ ಪಾಲಾಗುತ್ತಿದ್ದು ಅದನ್ನು ತಡೆಯುವ ಉದ್ದೇಶದಿಂದ ಕೋಡಿಬಿದ್ದ ನಾಯಿನಚರವು ಕೆರೆಯ ನೀರನ್ನು ಹಿಮ್ಮುಖವಾಗಿ ಹರಿಸಲು ಸಣ್ಣ ನೀರಾವರಿ ಇಲಾಖೆ ವತಿಯಿಂದ ಯೋಜನೆ ರೂಪಿಸಿದ್ದು ಕೆರೆಕಟ್ಟೆ ಅಭಿವೃದ್ದಿ ಪಡಿಸಿ ಕೋಡಿ ಎತ್ತರಿಸಿ ನಾಲೆ ನಿರ್ಮಿಸಿ ನೀರನ್ನು ಇಲ್ದೋಣಿ ಕೆರೆಗೆ ಹರಿಸಲು ಅರ್ದ ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗಿದೆ ಎಂದು ನೀರಾವರಿ ಇಲಾಖೆ ಇಂಜನೀರಗಳು ಹೇಳುತ್ತಾರೆ
ರಾಯಲ್ಪಾಡು ಹೋಬಳಿಯಲ್ಲಿರುವ ಅಡ್ಡಗಲ್,ಯರ್ರಂವಾರಿಪಲ್ಲಿ ದೊಡ್ಡಕೆರೆ,ಕೂರಿಗೆಪಲ್ಲಿ,ಕೆಂಪಿರೆಡ್ಡಿಗಾರಿಪಲ್ಲಿ, ಮಂಜೇವಾರಿಪಲ್ಲಿ,ಬಸನಪಲ್ಲಿ ಬೂಡಿದಗುಂಟ,ಪಾಪೋನಿ ವೊಡ್ಡು,ಒಪ್ಪೋನಿಕುಂಟ,ಚರವುಮೊರಪಲ್ಲಿ,ಬಾಲೇವಾರಪಲ್ಲಿ,ರಾಯಲ್ಪಾಡು ಪೈಕೆರೆ,ಸುಣ್ಣಕಲ್ ಕ್ರಾಸ್ ಕಂಭಮ್ ಕೆರೆ,ಮೂಲಗೊಲ್ಲಪಲ್ಲಿ ಕೆರೆಗಳು ತುಂಬಿ ಬದ್ದಿಪಲ್ಲಿ ನೀರಾವರಿ ಪ್ರಾಜೇಕ್ಟ್ ಸೇರುತ್ತದೆ ಪ್ರಾಜೆಕ್ಟ್ ಕೋಡಿಬಿದ್ದ ನೀರು ಆಂಧ್ರದ ಬೀರಂಗಿ ಹಳ್ಳದ ಮೂಲಕ ಆಂಧ್ರದ ಅನ್ನಮಯ್ಯ ಜಿಲ್ಲೆಯಯ ಪೆದ್ದತಿಪ್ಪಸಮುದ್ರಮ್ ಭಾಗದ ರಂಗಸಮುದ್ರಂ ಕೆರೆ ಸೇರುತ್ತಿದೆ.
ಚಕ್ ಡ್ಯಾಮ್ ನಿರ್ಮಾಣಕ್ಕೆ ಯೋಜನೆ
ಆಂಧ್ರದ ಪಾಲಾಗುತ್ತಿರುವ ನೀರನ್ನು ಕರ್ನಾಟಕದ ಗೌವನಪಲ್ಲಿ-ಕೊತ್ತಕೋಟ ರಸ್ತೆಯಲ್ಲಿನ ಹೊಸಹುಡ್ಯ ಬಳಿ ಬೀರಂಗಿ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆ ವತಿಯಿಂದ 2 ಎಂ.ಸಿ.ಎಫ್.ಪಿ ಸಾಮರ್ಥ್ಯದ ಚಕ್ ಡ್ಯಾಮ್ ನಿರ್ಮಿಸುವ ಕುರಿತಾಗಿ ಯೋಜನೆ ರೂಪಿಸಲಾಗಿದೆ ಎಂದು ಇಲಾಖೆ ಅಭಿಯಂತರರು ಹೇಳುತ್ತಿದ್ದಾರೆ ಆದರೆ ಪ್ರಸ್ತಾವನೆ ಸರ್ಕಾರದ ಮುಂದೆ ಹೊಗಿಲ್ಲ ಎನ್ನಲಾಗುತ್ತಿದೆ.
ಕರ್ನಾಟಕದ ಬೂಭಾಗದಿಂದ ಕೆಳಮಟ್ಟದಲ್ಲಿರುವ ಆಂಧ್ರದ ಕೆರೆಗಳು ಕರ್ನಾಟಕದಿಂದ ಹರಿದು ಬರುವಂತ ನೀರನ್ನು ತುಂಬಿಸಿಕೊಂಡು ಆಂಧ್ರದ ಆ ಭಾಗದ ರೈತರ ವ್ಯವಸಾಯಕ್ಕೆ ನೀರು ಒದಗಿಸಲು ಅನವು ಮಾಡಿಕೊಡುತ್ತವೆ.
ತಾಲೂಕಿನ ಗಡಿಭಾಗದ ಕೆರೆಗಳ ನೀರು ಸರಾಗವಾಗಿ ಹರಿದು ಹೋಗುತ್ತಿದೆ ಇದು ಕೇವಲ ಶ್ರೀನಿವಾಸಪುಅರ ತಾಲೂಕಿನ ಕಥೆಯಲ್ಲ ಚಿಂತಾಮಣಿ ತಾಲೂಕಿನ ಬಹುತೇಕ ಕೆರೆಗಳ ನೀರು ರಭಸವಾಗಿ ಬೀರಂಗಿ ಹಳ್ಳದ ಮೂಲಕ ಆಂಧ್ರಕ್ಕೆ ಹರಿದು ಹೋಗುತ್ತಿದೆ ಎಂದು ಇಲ್ಲಿನ ಜನತೆ ಅಲವತ್ತು ಕೊಳ್ಳುತ್ತಾರೆ.
ರೈತರ ನೆಮ್ಮದಿ ಕಿತ್ತುಕೊಂಡ ಮಾಂಡೋಸ್ ಚಂಡಮಾರುತ!
ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹೋದ ಪರಿಸ್ಥಿತಿ ತಾಲೂಕಿನ ರೈತರದಾಗಿದ್ದು ಟಮ್ಯಾಟೊ ಬೆಳೆಗೆ ನಿರಂತರ ರೋಗ ಬರುತ್ತಿರುವ ಹಿನ್ನಲೆಯಲ್ಲಿ ರೈತರು ಸಾಂಪ್ರದಾಯಿಕ ಬೆಳೆಗಳಾದ ರಾಗಿ ಭತ್ತ ವನ್ನು ನಂಬಿದ್ದರು ಆದರೆ ಮಾಂಡೋಸ್ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಮಾಡಬೇಕಿದ್ದ ರಾಗಿ ಭತ್ತದ ಬೆಳೆಗಳು ಗದ್ದೆಯಲ್ಲೆ ನೆಲಕ್ಕೆ ಒರಗಿದೆ. ಯುವ ರೈತರು ಅಶಾಭಾವನೆಯಿಂದ ಲಕ್ಷಾಂತರ ಬಂಡವಾಳ ಹಾಕಿ ನೂರಾರು ಎಕರೆಯಲ್ಲಿ ನಾಟಿ ಮಾಡಿದ್ದ ಸಿಹಿಕಾರ್ನ್ ಜೋಳದ ಬೆಳೆ ಮಳೆಯ ಆರ್ಭಟಕ್ಕೆ ನಲುಗಿ ಹೋಗಿದ್ದರೆ ಡಿಸೆಂಬರ್ ಎರಡನೆ ವಾರಕ್ಕೆ ಮಾರುಕಟ್ಟೆಗೆ ಬರಬೇಕಿದ್ದ ಸೊಗಡಿನ ಅವರೆ ಬೆಳೆ ಚಂಡಮಾರುತದ ಅರ್ಭಟಕ್ಕೆ ತತ್ತರಿಸಿ ಹೂವೆಲ್ಲ ಉದರಿ ಹೋಗಿದೆ.
ಚಂಡಮಾರುತದ ಎಫೇಕ್ಟ್ ಕೆರೆಗಳು ಕೋಡಿ ಬಿದ್ದಿವೆಯಾದರೂ ಇತ್ತ ಬೆಳೆ ಕೈಗೆ ಸಿಗದೆ ನೆಲದ ಪಾಲಾಗಿದ್ದು ರೈತರ ನೆಮ್ಮದಿಯನ್ನು ಕಿತ್ತುಕೊಂಡಂತಾಗಿದೆ.