ಬೆಂಗಳೂರಿನ ಬ್ಯಾಡರಳ್ಳಿಯಲ್ಲಿ ಘಟನೆ
ಜೀವ ಉಳಿಸಿದ ಪೋಲಿಸ್ ಶ್ರೀನಿವಾಸಪುರದವರು
ನ್ಯೂಜ್ ಡೆಸ್ಕ್: ನೀರಿನ ತೊಟ್ಟಿಗೆ ಬಿದ್ದು ಪ್ರಾಣಾಪಯದಲ್ಲಿದ್ದ ಮಗುವೊಂದನ್ನು ಪೊಲೀಸ್ ಅಧಿಕಾರಿ ರಕ್ಷಿಸಿದ ಘಟನೆ ಬೆಂಗಳೂರು ನಗರದ ಮಾಗಡಿ ರಸ್ತೆ ಬ್ಯಾಡರಹಳ್ಳಿಯ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ನಡೆದಿದೆ.
ಇವತ್ತು ದಿನ ಹೇಗಿದೆ ಅಂದರೆ ದೂರು ನೀಡಲು ಪೋಲಿಸ್ ಠಾಣೆಗೆ ಹೋದರೆ ಸಾರ್ವಜನಿಕರನ್ನು ಪೋಲಿಸರು ಸೌಜನ್ಯವಾಗಿ ಮಾತನಾಡುವ ಪರಿಸ್ಥಿತಿ ಇಲ್ಲದಂತ ವಾತವರಣ ಪೋಲಿಸ್ ಠಾಣೆಗಳಲ್ಲಿ ನಿರ್ಮಾಣವಾಗಿದೆ ಅಷ್ಟೊಂದು ಒತ್ತಡದಲ್ಲಿ ಪೋಲಿಸ್ ಇಲಾಖೆಯಲ್ಲಿ ಅಧಿಕಾರಿಗಳು ಪೋಲಿಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇಂತಹ ಒತ್ತಡದಲ್ಲೂ ಪೋಲಿಸ್ ಅಧಿಕಾರಿಯೊಬ್ಬರು ಪ್ರಾಣಾಪಯದಲ್ಲಿದ್ದ ಮಗುವಿನ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಮಗು ಜೀವ ಉಳಿಸಿದ ಪೋಲಿಸ್ ಅಧಿಕಾರಿ ಶ್ರೀನಿವಾಸಪುರದವರು
ಮಗುವನ್ನು ಕಾಪಾಡಿದ ಪೋಲಿಸ್ ಅಧಿಕಾರಿ ಶ್ರೀನಿವಾಸಪುರ ತಾಲೂಕಿನ ಗೌವನಪಲ್ಲಿ ಪಂಚಾಯಿತಿಯ ಆದಿರಾಜಪಲ್ಲಿ ಗ್ರಾಮದ ಎ.ಆರ್. ನಾಗರಾಜ್ ಅವರು ಬೆಂಗಳೂರಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಆಗಿದ್ದಾರೆ.
ಮಗುವನ್ನು ರಕ್ಷಿಸಿದ್ದು ಹೇಗೆ?
ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್ನಲ್ಲಿ ಮಾರ್ಚ್ 6 ರಂದು ಮಧ್ಯಾಹ್ನನದ ವೇಳೆ ಮಗು ನೀರಿನ ಸಂಪಿನಲ್ಲಿ ಬಿದ್ದಿದೆ ದಯವಿಟ್ಟು ಕಾಪಾಡಿ ಎಂದು ಹೆಚ್ಚು ಮಹಿಳೆಯರೆ ಇದ್ದ ಗುಂಪು ದಾರಿ ಹೋಕರಲ್ಲಿ ಮನವಿ ಮಾಡುತ್ತಿದ್ದರು ಯಾರು ಸಹ ಮನವಿಗೆ ಸ್ಪಂದಿಸಲಿಲ್ಲ ಅದೆ ಸಂದರ್ಭದಲ್ಲಿ ಅದೆ ಮಾರ್ಗವಾಗಿ ಡ್ಯೂಟಿಗೆ ಹೊರಟಿದ್ದ ಪಿಎಸ್ಐ ಎ.ಆರ್. ನಾಗರಾಜ್ ತಮ್ಮ ವಾಹನ ನಿಲ್ಲಿಸಿ ಜನರ ಮನವಿ ಆಲಿಸಿದ್ದಾರೆ ತಕ್ಷಣ ಕಾರ್ಯಪ್ರವೃತ್ತರಾದ ಅವರು 10 ಅಡಿ ಆಳದ ಸಂಪ್ಗೆ ಇಳಿದು ಮಗುವನ್ನು ರಕ್ಷಿಸಿದ್ದಾರೆ.
ಮಗುವಿನ ರಕ್ಷಣೆ ಮಾಡುವುದು ಸ್ವಲ್ಪ ತಡವಾಗಿದ್ದರು ಮಗು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಇತ್ತು. ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.ತುಂಬಾ ಆಳದ ಸಂಪ್ ಗೆ ಇಳಿಯಲು ಆಕ್ಸಿಜನ್ ಸಹಾಯ ಪಡೆಯುತ್ತಾರೆ ಅದರೆ ಇದ್ಯಾವುದನ್ನು ಲೆಕ್ಕಿಸದೆ ಪಿಎಸ್ಐ ನಾಗರಾಜ್ ನೇರವಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಧೈರ್ಯದಿಂದ ಸಂಪಿಗೆ ಇಳಿದು ಮಗು ರಕ್ಷಣೆ ಮಾಡಿದ್ದು ಅತ್ತ ಪೋಲಿಸ್ ಇಲಾಖೆ ಹಾಗು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.