- ದಲ್ಲಾಲರು ಇಲ್ಲದಿದ್ದರೆ ತಾಲೂಕು ಆಫಿಸನಲ್ಲಿ ಕೆಲಸ ಆಗಲ್ಲ
- ರೈತರು ಎಲ್ಲದಕ್ಕೂ ದಲ್ಲಾಲರನ್ನೇ ಆಶ್ರಯಿಸಬೇಕು
- ಎಲ್ಲಾ ತಿಳಿದಿದ್ದರು ಕಂದಾಯ ಇಲಾಖೆ ಅಧಿಕಾರಿಗಳ ಜಾಣಕುರಡು
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಕಚೇರಿಯಲ್ಲಿ ಕೆಲಸ ಆಗಬೇಕು ಎಂದರೆ ದಲ್ಲಾಳಿಗಳ ಮೂಲಕ ಸಾಧ್ಯವಾಗುತ್ತದೆ ದಲ್ಲಾಳಿಗಳು ಇಲ್ಲಾಂದ್ರೆ ಜನಸಾಮನ್ಯರ ಕೆಲಸ ಕಾರ್ಯಗಳು ಆಗುವುದಿಲ್ಲ ಎಂದು ರೈತರು ದೂರಿದರು ತಾಲೂಕಿನ ರೋಣೂರು ಹೋಬಳಿ ಅಲವಾಟ ಗ್ರಾಮದ ಕೆಲ ರೈತರು ತಾಲೂಕು ಆಫೀಸ್ ಭೂ ದಾಖಲೆಗಳ ಶಾಖೆಯಲ್ಲಿ.(ರೆಕಾರ್ಡ್ ಸೆಕ್ಷನ್)ದಾಖಲೆಗಳನ್ನು ಪಡೆದುಕೊಳ್ಳಲು ಕಳೆದ 7-8 ತಿಂಗಳಿನಿಂದ ತಿರುಗಾಡುತ್ತಿದ್ದರು ಇಲ್ಲಿ ಕಾರ್ಯನಿರ್ವಹಿಸುತ್ತಿರುವರು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಎಂದರೆ ಬಿಳಿ ಖದರ್ ಬಟ್ಟೆ ತೊಟ್ಟು ಬರಬೇಕು ಇಲ್ಲಾಂದ್ರೆ ದಲ್ಲಾಳಿಗಳ ಮೂಲಕ ಹಣ ನೀಡಿದರೆ ಮಾತ್ರ ಇಲ್ಲಿ ಕೆಲಸ ಕಾರ್ಯಗಳು ಸಲಿಸಾಗಿ ಆಗುತ್ತದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಆಫೀಸ್ ನಲ್ಲಿ ಇಂತಹ ಸೇಕ್ಷನ್ ಗೆ ಅಂತ ವಿವಿಧ ರೀತಿಯ ದಲ್ಲಾಳಿಗಳು ಇರುತ್ತಾರೆ,ಅವರ ಮೂಲಕವೆ ಇಲ್ಲಿ ಎಲ್ಲವೂ ನಡೆಯುತ್ತದೆ ಎಂದು ಆರೋಪಿಸಿದ ರೈತರು ಇಲ್ಲಿನ ಅಧಿಕಾರಿಗಳು ತಾವೆ ಖುದ್ದು ದಲ್ಲಾಳಿಗಳನ್ನು ನೇಮಿಸಿಕೊಂಡಂತೆ ಇದೆ.
ರೈತನ ಜೀವನ ಸಂಪೂರ್ಣವಾಗಿ ತಾಲೂಕು ಕಚೇರಿ ಮೇಲೆ ಅಧಾರವಾಗಿರುತ್ತದೆ ತಮ್ಮ ಜಮೀನುಗಳ ವಿಚಾರವಾಗಿ ಕಂದಾಯ ಇಲಾಖೆಯ ಜೊತೆ ಸಂಪರ್ಕ ಹೊಂದಿರುತ್ತಾರೆ ಜಮೀನಿನ ಮೂಲ ದಾಖಲೆಗಳಿಗೆ ಇನ್ನಿತರೆ ಅವಶ್ಯ ಕಾಗದ ಪತ್ರಗಳು ಬೇಕಿದ್ದಲ್ಲಿ ಇಲಾಖೆಯ ಅಧಿಕಾರಿಗಳ ಬಳಿ ಬಂದರೆ ವರ್ಷಾನುಗಟ್ಟಲೆ ಅಲೆದಾಡಿಸಿದರೆ ರೈತನ ಪರಿಸ್ಥಿತಿ ಏನಾಗಬೇಕು ಎಂದು ಅಲವತ್ತುಕೊಂಡರು.
ಇಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಇದೆ ಆದರೂ ಆಯಾ ಕಟ್ಟಿನ ಅಧಿಕಾರಿಗಳಿಗೆ ತಿಂಗಳ ಮಾಮೂಲಿ ಏನು ಸಲ್ಲುಬೇಕೋ ಅದು ನಿಯಮಾನುಸಾರವಾಗಿ ಸಲ್ಲುತ್ತಿರುವುದರಿಂದ ಎಲ್ಲರೂ ಜಾಣ ಕುರಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಾರೆ.ಈ ಸಂದರ್ಭದಲ್ಲಿ ತಾಲೂಕುಪಂಚಾಯಿತಿ ಮಾಜಿ ಅಧ್ಯಕ್ಷ ಬಂಡಪಲ್ಲಿಕೃಷ್ಣಾರೆಡ್ಡಿ ಸೇರಿದಂತೆ ಹಲವಾರು ರೈತರು ಇದ್ದರು.
ತಹಶೀಲ್ದಾರ್ ಸ್ಪಷ್ಟನೆ
ತಾಲೂಕು ಆಫೀಸ್ ನಲ್ಲಿ ಯಾವುದೆ ದಲ್ಲಾಲರ ಚಟುವಟಿಕೆಗಳು ಇಲ್ಲ ಕೆಲ ಮಾಧ್ಯಮಗಳಲ್ಲಿ ಕಂದಾಯ ಇಲಾಖೆ ವಿರುದ್ದ ಬಂದಿರುವಂತ ವರದಿ ಸತ್ಯಕ್ಕೆ ದೂರವಾದುದು ಎಂದು ತಹಶೀಲ್ದಾರ್ ಶೀರಿನ್ ತಾಜ್ vcsnewz ಗೆ ಹೇಳಿದರು.ಪ್ರತಿ ದಿನ ಬೆಳೆಗ್ಗೆ 10.30 ರಿಂದ ಸಂಜೆ 5.00 ಗಂಟೆಯವರಿಗೂ ತಾಲೂಕು ಆಫೀಸ್ ಭೂ ದಾಖಲೆಗಳ ಶಾಖೆ ಕಾರ್ಯನಿರ್ವಹಿಸುತ್ತಿದೆ ಅವಶ್ಯ ಸಿಬ್ಬಂದಿ ಇದ್ದಾರೆ ಎಂದ ಅವರು ಒಂದು ವೇಳೆ ದಾಖಲೆ ನೀಡುವಲ್ಲಿ ವಿಳಂಬ ಅಥಾವ ಇನ್ಯಾವುದೆ ಸಮಸ್ಯೆ ಇದ್ದರೆ ಅಂತಹರು ನೇರವಾಗಿ ನನ್ನ ಕೊಠಡಿಗೆ ಬಂದು ಲಿಖಿತ ದೂರು ನೀಡಿದ್ದೆ ಆದಲ್ಲಿ ಅಂತಹ ನೌಕರರ ವಿರುದ್ದ ಕ್ರಮ ಜರಿಗಿಸುವುದಾಗಿ ಹೇಳಿದರು.