- ತಂದೆ ತಾಯಿ ವೃತ್ತಿಯಲ್ಲಿ ಶಿಕ್ಷಕರು
- ಅವರ ಆಶಯದಂತೆ ಐ.ಎ.ಎಸ್
- ಪಾಸ್ ಮಾಡಿದ ವೈದ್ಯ ಗೌತಮ್
ಶ್ರೀನಿವಾಸಪುರ: ಆತ ವೃತ್ತಿಯಲ್ಲಿ ವೈದ್ಯ ಅದನ್ನೆ ಮುಂದುವರೆಸಿದ್ದರೆ ಇವತ್ತು ವೈದ್ಯಕೀಯ ವೃತ್ತಿಯಲ್ಲಿ ಸಾಗುತ್ತಿದ್ದರು ಇದಕ್ಕಿಂತ ಭಿನ್ನವಾಗಿ ಸಮಾಜಮುಖಿಯಾಗಿ ವ್ಯವಸ್ಥೆಯಲ್ಲಿ ವಿಶೇಷವಾದದನ್ನು ಸಾಧಿಸಬೇಕು ಎಂಬ ಪೋಷಕರ ಆಶಯದಂತೆ ಸಂಕಲ್ಪತೊಟ್ಟು ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ, ಕೇಂದ್ರ ಲೋಕಸೇವಾ ಆಯೋಗದ ಪರಿಕ್ಷೆ ಬರೆದು (UPSC) ಪಾಸ್ ಮಾಡಿ ಐ.ಎ.ಎಸ್ ಆಗಬೇಕು ಎಂಬ ಪೋಷಕರ ನನಸು ಈಡೇರಿಸುವ ನಿಟ್ಟಿನಲ್ಲಿ ಕಠಿಣ ನಿರ್ಧಾರ ಮಾಡಿದ ಶ್ರೀನಿವಾಸಪುರ ಪಟ್ಟಣದ ನಿವಾಸಿ ಯುವಕ ಡಾ||ಗೌತಮ್ 939 ರ್ಯಾಂಕ್ ಪಡೆದು ಐಎಎಸ್ ಸಾಧನೆ ಮಾಡಿದ್ದಾರೆ.ಇವರು ಯಾವುದೇ ಕೋಚಿಂಗ್ ತರಬೇತಿ ಇಲ್ಲದೆಯೇ ಸಾಧನೆ ಮಾಡಿದ್ದಾರೆ ಎಂಬುದು ವಿಶೇಷ.
ಪಟ್ಟಣದ ಮಾರುತಿ ನಗರದಲ್ಲಿ ವಾಸವಾಗಿರುವ ಡಯಟ್ ಉಪನ್ಯಾಸಕ ಜಿ.ಎಮ್.ಗಂಗಪ್ಪನವರ ಪುತ್ರ ಡಾ|| ಗೌತಮ್ ನಾಗರೀಕ ಸೇವಾ ಪರಿಕ್ಷೆಯಲ್ಲಿ 939ರ್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿರುತ್ತಾರೆ. ತಾಲೂಕಿನ ರೋಣೂರು ಹೋಬಳಿ ಗೋಪಾಲಪುರದ ಜಿ.ಎಮ್.ಗಂಗಪ್ಪ ಕೃಷಿಕನ ಮಗನಾಗಿ ತಾನು ಓದಿ ಶಿಕ್ಷಕ ವೃತ್ತಿ ಸಾಧಿಸಿದ ಅವರು ಮಕ್ಕಳ ಭವಿಷ್ಯತ್ ರೂಪಿಸಲು ಶ್ರೀನಿವಾಸಪುರ ಪಟ್ಟಣದಲ್ಲಿ ನೆಲೆನಿಂತು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದಲ್ಲದೆ ಅವರ ಬೆಂಬಲವಾಗಿ ನಿಂತು ಪ್ರೋತ್ಸಾಹಿದ ಪರಿಣಾಮ ಹಿರಿಯ ಮಗ ಮಿಥುನ್ ಕೇಂದ್ರ ಸರ್ಕಾರದ ನಬಾರ್ಡ್ ನಲ್ಲಿ ರಾಜ್ಯಮಟ್ಟದ ಅಧಿಕಾರಿಯಾಗಿ ಪಶ್ಚಿಮ ಬೆಂಗಾಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡನೇಯ ಮಗ ಡಾ|| ಗೌತಮ್ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಲೋಕಸೇವಾ ಆಯೋಗದ ಪರಿಕ್ಷೆ ಬರೆಯಲು ತಯಾರಿ ನಡೆಸುವ ಸಲುವಾಗಿ ವೈದ್ಯ ವೃತ್ತಿ ತೊರೆದು ಸ್ವಂತವಾಗಿ ತಮ್ಮ ಸಹೋದರ ನಬಾರ್ಡ್ ಅಧಿಕಾರಿ ಮಿಥುನ್ ಮಾರ್ಗದರ್ಶನದಲ್ಲಿ UPSC ಪರಿಕ್ಷೆಗೆ ತರಬೇತಿ ಪಡೆದು ಐ.ಎ.ಎಸ್ ಪಾಸ್ ಮಾಡಿದ್ದಾರೆ.
ಆರಂಭದಿಂದಲೂ ಸಾಮಾನ್ಯ ಶಾಲೆಯಲ್ಲಿ ಓದಿದ ಡಾ||ಗೌತಮ್ ಪ್ರಾಥಮಿಕ ವಿದ್ಯಾಭ್ಯಾಸ ಶ್ರೀನಿವಾಸಪುರದ ಎಸ್.ಎಫ್.ಎಸ್ ಶಾಲೆಯಲ್ಲಿ,ಹಿರಿಯ ಪ್ರಾಥಮೀಕ ಶಾಲೆ ನವೋದಯ ಶಾಲೆಯಲ್ಲಿ ಮುಗಿಸಿ, ಪ್ರೌಢಶಾಲೆ ಹಾಗು ಪಿಯು ವಿಧ್ಯಾಬ್ಯಾಸವನ್ನು ಮುದ್ದೇನಹಳ್ಳಿಯ ಸತ್ಯಸಾಯಿ ಲೋಕ ಶಿಕ್ಷಣ ಸಂಸ್ಥೆಯಲ್ಲಿ ಪೂರ್ಣಗೊಳಿದ್ದಾರೆ ಎಂದು ಡಾ||ಗೌತಮ್ ತಂದೆ ಜಿ.ಎಮ್.ಗಂಗಪ್ಪ ಹೆಮ್ಮೆಯಿಂದ ಹೇಳುತ್ತಾರೆ.
ಡಾ||ಗೌತಮ್ ಐ.ಎ.ಎಸ್ ಸಾಧನೆಗೆ ಸರ್ವತಾ ಹರ್ಷ ವ್ಯಕ್ತವಾಗಿದ್ದು ರೊಟರಿ ಸಂಸ್ಥೆ ಡಾ||ಗೌತಮ್ ಅವರನ್ನು ಅಭಿನಂದಿಸಿರುತ್ತಾರೆ.