ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿನ ಮಹಾತ್ಮಗಾಂಧಿ ರಸ್ತೆಯ(M.G.ROAD)ಲ್ಲಿರುವ ವೃತ್ತಗಳು(circle) ಅಪಘಾತಗಳಿಗೆ ಅಹ್ವಾನ ನೀಡುತ್ತಿವೆ ಇವು ತುಂಬಾನೇ ಡೆಂಜರ್ ಅನ್ನಬಹುದು ಎನ್ನುವ ಹಾಗಿದೆ. ವೇಣು ಸ್ಕೂಲ್ ಬಳಿಯಿಂದ ಹಳೇಯ ಬಸ್ ನಿಲ್ದಾಣದವರಿಗೂ ಇರುವಂತ ಐದು ವೃತ್ತಗಳು ಜನರಿಗೆ ಕಂಟಕ ಪ್ರಾಯವಾಗಿದೆ ಯಾರು ಯಾವಾಗ ಕಾಲೋ ಕೈಯೋ ಮುರಿದಿಕೊಳ್ಳುತ್ತಾರೋ ಯಾವರಿತಿ ಅಪಘಾತ ಆಗುತ್ತದೊ ಎಂಬ ಆತಂಕ ಇಲ್ಲಿನ ಜನರನ್ನು ಕಾಡುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಮಹಾತ್ಮಗಾಂಧಿ ರಸ್ತೆಯಲ್ಲಿ ರಾಜ್ಯ ಹೆದ್ದಾರಿ 99 ಹಾದು ಹೋಗಿದೆ ಮೂರು ರಾಜ್ಯಗಳನ್ನು ಸಂಪರ್ಕಿಸುವ ಕೊತ್ತಪಲ್ಲಿ-ಮಾಸ್ತಿ ರಸ್ತೆಯಾಗಿದ್ದು ಪಟ್ಟಣದ ಜನರೆ ಅಲ್ಲ ಕೆಸ್.ಆರ್.ಟಿ.ಸಿ ಬಸ್ಸುಗಳು,ತಮಿಳುನಾಡು ಆಂಧ್ರಕ್ಕೆ ಹೋಗುವ ಬಾರಿಗಾತ್ರದ ಲಾರಿಗಳು,ಶಾಲಾ ವಾಹನಗಳು ಸೇರಿ ದೊಡ್ದಮಟ್ಟದಲ್ಲಿ ವಾಹನಗಳ ಸಂಚಾರ ಇರುತ್ತದೆ ಇಂತಹ ರಸ್ತೆಯಲ್ಲಿ ಯಾವುದೇ ವೃತ್ತದಲ್ಲೂ ರಸ್ತೆ ಉಬ್ಬುಗಳು ಇಲ್ಲ ರಸ್ತೆ ಮಾರ್ಗ ಸೂಚಿಗಳಿಲ್ಲ, ವೇಗದಮೀತಿ ಸೂಚನ ಫಲಕ ಇಲ್ಲ, ಶಾಲೆ/ಕಾಲೇಜು ಇವೆ, ಬಸ್ ಸ್ಟಾಂಡ್ ಇದೆ,ಬ್ಯಾಂಕ್ ಇದೆ ಎಂಬ ಸೂಚನ ಫಲಕಗಳನ್ನು ಅಳವಡಿಲ್ಲ, ವೃತ್ತಗಳಲ್ಲಿ ನೆಲಕ್ಕೆ ಬಿಳಿ ಬಣ್ಣ ಬಳಿದು ಕೈತೊಳೆದುಕೊಂಡಿರುವ ಪುರಸಭೆ ಮತ್ತು ಲೋಕೋಪಯೋಗಿ ಅಧಿಕಾರಿಗಳು ಅಲ್ಲಿ ಆಗುವಂತ ಅಪಘಾತಗಳಿಗೂ ನಮಗೂ ಸಂಬಂಧವೆ ಇಲ್ಲವೇನೂ ಎಂಬಂತೆ ಇದ್ದಾರೆ ಈ ಬಗ್ಗೆ ಲೋಕೋಪಯೋಗಿ ಇಂಜನಿಯರುಗಳನ್ನು ಕೇಳಿದರೆ ನಾವು ರಸ್ತೆ ಮಾಡಿದ್ದಿವಿ ರಸ್ತೆ ಉಬ್ಬುಗಳನ್ನು ನಿರ್ಮಿಸಲು ಇಲಾಖೆ ನಿಯಮಗಳಲ್ಲಿ ಅವಕಾಶ ಇಲ್ಲ ರಸ್ತೆಉಬ್ಬು ಅವಶ್ಯ ಎನ್ನುವ ಹಾಗಿದ್ದರೆ ಇಂತಹ ವೃತ್ತಗಳಲ್ಲಿ ಅಪಘಾತಗಳು ಆಗುತ್ತಿದೆ ಎಂದು ಪೋಲಿಸ್ ಇಲಾಖೆ ವರದಿ ನೀಡಿದರೆ ಮಾತ್ರ ಪರಶೀಲನೆ ಮಾಡುವುದಾಗಿ ಹೇಳುತ್ತಾರೆ. ಇನ್ನು ಮುಖ್ಯ ರಸ್ತೆಗೆ ಸಂಪರ್ಕಿಸುವ ಉಪ ರಸ್ತೆಗಳಲ್ಲಿ ಪುರಸಭೆ ವತಿಯಿಂದ ರಸ್ತೆಉಬ್ಬುಗಳನ್ನು ನಿರ್ಮಿಸಲು ಅವಕಾಶ ಇದೆ ಎನ್ನುತ್ತಾರೆ. ಈ ಬಗ್ಗೆ ಪುರಸಬೆಯವರು ಹೌದ ನಮಗೇನು ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತಾರೆ.
ತರಕಾರಿ ಮಾರುಕಟ್ಟೆ ವೃತ್ತ
ಚಿಂತಾಮಣಿ ವೃತ್ತದಿಂದ ಅಜಾದ್ ರಸ್ತೆ ಮೂಲಕ ಬಂದು ಕೂಡುವ ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆ ವೃತ್ತದಲ್ಲಿ ವೃತ್ತ ಎನ್ನುವ ಕುರುವೆ/ಸುಳಿವು ಇಲ್ಲದಾಗಿದೆ ಅಲ್ಲಿನ ತರಕಾರಿ ಅಂಗಡಿ ಮಾಲಿಕರು ಫುಟ್ಬಾತ್ ಬಳಸಿಕೊಂಡು ರಸ್ತೆ ಅಂಚಿನವರಿಗೂ ಅಂಗಡಿಗಳನ್ನು ವಿಸ್ತರಿಸಿಕೊಂಡಿರುವ ಹಿನ್ನಲೆಯಲ್ಲಿ ವೃತ್ತ ಕಿರಿದಾಗಿ ವಾಹನ ಸಂಚಾರಕ್ಕೆ ಇಕ್ಕಾಟ್ಟಾಗಿದೆ.
ಮುಳಬಾಗಿಲು ವೃತ್ತ
ಮುಳಬಾಗಿಲು ವೃತ್ತದಲ್ಲಿ ಮಂಗಳೂರು-ತಿರ್ನಲ್ ವೇಲಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ(234)ಹಾಗು ರಾಜ್ಯ ಹೆದ್ದಾರಿ ಕೂಡುವ ಸ್ಥಳ ಅಲ್ಲಿ ದರ್ಗಾದ ಮುಂಬಾಗದಲ್ಲಿ ರಾಜ್ಯ ಹೆದ್ದಾರಿಯವರು ರಸ್ತೆ ಉಬ್ಬು ಹಾಕಿದ್ದು ಬಿಟ್ಟರೆ ಮತ್ತೇನು ಸೂಚನಾ ಫಲಕ ಇಲ್ಲ ಈ ವೃತ್ತದಲ್ಲಿ ಬೆಳಗಿನ ಹೊತ್ತು ಶಾಲಾ ಮಕ್ಕಳು ಸೈಕಲ್ ತುಳಿದುಕೊಂಡು ಹೋಗುವಾಗ ಯಾರಿಗೆ ಏನು ಗ್ರಹಚಾರ ಕಾದಿಯೋ ಎಂಬಂತ ಸನ್ನಿವೇಶ ಇರುತ್ತದೆ ರಾಷ್ಟ್ರೀಯ ಹೆದ್ದಾರಿ(234) ಚಿಂತಾಮಣಿ ಕಡೆಯಿಂದ ಸಂತೇಮೈದಾನ ಕಡೆಯಿಂದ ಬರುವಂತ ಬಾರಿ ಗಾತ್ರದ ಲಾರಿಗಳು ಟ್ರಕ್ ಗಳು ಈ ವೃತ್ತದ ಮೂಲಕ ಹಾದು ಮುಳಬಾಗಿಲು ಕಡೆಗೆ ಸಾಗುತ್ತವೆ ಇಲ್ಲಿ ಪಟ್ಟಣದ ಒಳಗಡೆ ಸಾಗುತ್ತಿದ್ದೆವೆ ಎಂಬ ಸಾಮನ್ಯ ಙ್ಙಾನ ಇಲ್ಲದವರಂತೆ ವಾಹನ ಚಾಲಕರು ವೇಗವಾಗಿ ಬಂದು ವೃತ್ತವನ್ನು ದಾಟುತ್ತಾರೆ ಇಲ್ಲಿಯೂ ಸಹ ಹಲವಾರು ಬಾರಿ ಅಪಘಾತಗಳು ನಡೆದು ಅದೃಷ್ಟವಶಾತ್ ಪ್ರಣಪಾಯದಿಂದ ಪಾರಾದಂತ ಘಟನೆಗಳು ನಡದಿವೆ ಎನ್ನುತ್ತಾರೆ ಸ್ಥಳೀಯರು .
ಬಸ್ ನಿಲ್ದಾಣದ ವೃತ್ತ@ಇಂದಿರಾಭವನ್ ಸರ್ಕಲ್
ಇದು ಪುರಸಭೆ ಕಾರ್ಯಲಯ ಹಾಗು KSRTC ಬಸ್ಸು ನಿಲ್ದಾಣದ ನಡುವೆ ಅತ್ತ ರಾಜಾಜಿ ರಸ್ತೆಯಿಂದ ವೆಂಕಟೇಶ್ವರ ಬಡಾವಣೆಯಿಂದ ಇತ್ತ ರಾಮಕೃಷ್ಣ ಬಡಾವಣೆಯಿಂದ ಬರುವಂತ ರಸ್ತೆಗಳು ಕೂಡುವಂತ ವೃತ್ತ ಆಗಿದೆ ವೃತ್ತ ಅನ್ನುವುದಕ್ಕಿಂತ ಇದೊಂದು ಜಂಕ್ಷನ್ ಅನ್ನಬಹುದು ದೇಶದ ಆಗುಹೋಗುಗಳ ಕುರಿತಾಗಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಂಭ್ರಮ ಆಚರಿಸಲು ಇನ್ನಿತರೆ ಪ್ರತಿಭಟನೆಗಳು ನಡೆಸಲು ಇರುವಂತ ಐಕಾನ್ ವೃತ್ತ, ಇಷ್ಟೆಲ್ಲದರ ನಡಿವೆ ಆಂಧ್ರದಿಂದ ಬರುವಂತ ವಾಹನಗಳು ಕೋಲಾರದಕಡೆಗೆ ಚಿಂತಾಮಣಿ ಕಡೆಗೆ ಹಾಗೆ ಮುಳಬಾಗಿಲು ಕಡೆಗೆ ಹೋಗಲು ಈ ವೃತ್ತವನ್ನು ಬಳಸುವುದು ಸಾಮಾನ್ಯ ಇದರ ಮದ್ಯೆ KSRTC ಬಸ್ಸುಗಳು ನಿಲ್ದಾಣದಿಂದ ಹೊರ ಹೋಗುವಾಗ ಈ ವೃತ್ತದ ಮೂಲಕವೆ ಹೋಗುತ್ತವೆ ಬಸ್ ನಿಲ್ದಾಣದ ಇಲ್ಲದೆ ಖಾಸಗಿ ಬಸ್ಸುಗಳು ವೃತ್ತವನ್ನು ಅತಿಕ್ರಮಿಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಇದೇ ವೃತ್ತದಲ್ಲಿಯೇ ಕೆಲವೊಮ್ಮೆ ಮಾರುಕಟ್ಟೆಗೆ ಕಾರಿನಲ್ಲಿ ಬರುವಂತವರು ತಮ್ಮ ವಾಹನಗಳನ್ನು ಇದೆ ವೃತ್ತದಲ್ಲಿ ಪಾರ್ಕಿಂಗ್ ಮಾಡುವುದು ಕಾಮನ್ ಆಗಿದೆ. ಹಾಗಾಗಿ ಈ ವೃತ್ತ ಸರ್ವಕಾಲಿಕ ಬಿಝಿ.
ಎಂ.ಜಿ.ರಸ್ತೆ ಅಗಲೀಕರಣದಲ್ಲೂ ಜಾಣಕುರಡು!
ಈಗ್ಗೆ ಸುಮಾರು ಎಂಟು ವರ್ಷಗಳ ಹಿಂದೆ ಎಂ.ಜಿ.ರಸ್ತೆ ಅಗಲೀಕರಣ ಆಯಿತು ಅದು ಸಹ ಸಮರ್ಪಕವಾಗಿ ಆಗಲೇ ಇಲ್ಲ ಉಳ್ಳವರಿಗೊಂದು ನ್ಯಾಯ ಎನ್ನುವಂತೆ ಅನಕೂಲವಂತರ ಕಟ್ಟಡಗಳು ಕಾನೂನಿನ ನೆಪದಲ್ಲಿ ಉಳಿದು ಬಿಟ್ಟವು ಮೊದಲು ರಸ್ತೆ ಮದ್ಯೆ ಭಾಗದಿಂದ ಎಡಗಡೆಗೆ 35 ಅಡಿ ಬಲಗಡೆಗೆ 35 ಅಡಿ ಎನ್ನಲಾಯಿತು ಕೊನೆಗೆ ಅದು ಉಳ್ಳವರ ಕಟ್ಟಡಗಳ ಹತ್ತಿರ ಬರುವಷ್ಟರಲ್ಲಿ 28 ಅಡಿಗಳಿಗೆ ಸೀಮಿತವಾಯಿತು ಇದನ್ನು ಕೆಲ ಕಟ್ಟಡಗಳ ಮಾಲಿಕರು ಅವಕಾಶ ಎನ್ನುವಂತೆ ದುರ್ಬಳಿಕೆ ಮಾಡಿಕೊಂಡರು.
ಇಂದಿರಾಭವನ್ ಸರ್ಕಲ್ ಮತ್ತು ವಿವೇಕಾನಂದ ವೃತ್ತದಲ್ಲಿ ರಸ್ತೆ ಸ್ವಯಂ ಚಾಲಿತ ಸಂಚಾರ ದೀಪಗಳ ಅಳವಡಿಕೆ ತೀರಾ ಅವಶ್ಯಕತೆ ಇದೆ ಎನ್ನುವುದು ತಙ್ಞರ ಅಭಿಪ್ರಾಯವಾಗಿದ್ದು ಇದರ ಅಳವಡಿಕೆಯಿಂದ ಆಗಬಹುದಾದ ಅನಾಹುತಗಳನ್ನು ತಡೆಯಬಹುದಾಗಿದೆ