ಶ್ರೀನಿವಾಸಪುರ:ಸಮುದ್ರದಲ್ಲಿ ಈಜಾಡುತ್ತಿದ್ದ ಶ್ರೀನಿವಾಸಪುರದ ಯುವಕನೊರ್ವ ನೀರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಭಾವಿಕುಡ್ಲ ಬೀಚ್ (ಕಡಲತೀರ)ನಲ್ಲಿ ನಡೆದಿದೆ.
ಶ್ರೀನಿವಾಸಪುರ ಪಟ್ಟಣದ ವಿವೇಕಾನಂದ ರಸ್ತೆಯ ನಿವಾಸಿ ಪಟ್ಟಾ ಕುಟುಂಬದ ವೆಂಕಟೇಶ್ ಎನ್ನುವರ ಮಗ ವಿನಯ್ ಎಸ್.ವಿ (22) ನೀರುಪಾಲಾದ ವಿದ್ಯಾರ್ಥಿಯಾಗಿದ್ದು, ಆತನ ಮೃತದೇಹ ಶುಕ್ರವಾರ ಕಡಲ ತೀರದಲ್ಲಿ ದೊರೆತಿದೆ.
ಬೆಂಗಳೂರಿನ ಕನಕಪುರ ರಸ್ತೆ ರಘುವನಹಳ್ಳಿಯಲ್ಲಿರುವ ಹಿಲ್ ಸೈಡ್ ಫಾರ್ಮಸಿ ಕಾಲೇಜಿನ ಒಟ್ಟು 48 ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ಹೋಗಿದ್ದರು ಈ ವೇಳೆ ಸಮುದ್ರಲ್ಲಿ ಎಂಜಾಯ್ ಮಾಡುತ್ತಿದ್ದಾಗ ಅವಘಡ ನಡೆದಿದ್ದು ವಿಧ್ಯಾರ್ಥಿಗಳು ಅಪಾಯದಲ್ಲಿದ್ದವರನ್ನ ಗಮನಿಸಿ ಸ್ಥಳೀಯರಾದ ದುಬ್ಬಸಸಿಯ ಸರ್ವೇಶ ಮೊರ್ಜೆ ಮತ್ತು ಪಂಢರಿನಾಥ ಮೂರ್ಜೆ ತಕ್ಷಣ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಇವರಿಗೆ ಕರಾವಳಿ ಕಾವಲು ಪೊಲೀಸ್ ಪಡೆಯವರು ಸಹಕರಿಸಿ ಹರಸಾಹಸ ಪಟ್ಟು ಒಟ್ಟು ಐವರನ್ನು ದಡಕ್ಕೆ ತಂದು ಪ್ರಾಣ ಉಳಿಸಿದ್ದಾರೆ.ಆದರೆ ವಿನಯ್ ಎಸ್.ವಿ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗಿದ್ದು ಶುಕ್ರವಾರ ಪತ್ತೆಯಾಗಿದ್ದು ಇಂದು ಶನಿವಾರ ವಿನಯ್ ಮೃತದೇಹವನ್ನು ಶ್ರೀನಿವಾಸಪುರಕ್ಕೆ ತಂದು ಅಂತ್ಯಕ್ರಿಯೆ ನಡೆಸಿದ್ದಾರೆ.