- ಹಿಂದೆ ಮುಂದೆ ನೊಡದೆ ಕಡಿಮೆ ಬೆಲೆಗೆ ಹಳೇ ಬಂಗಾರ ಖರೀದಿ!
- ಹತ್ಯೆ ಸಂಭಂದ ಅಬರಣ ಶ್ರೀನಿವಾಸಪುರದಲ್ಲಿ ಖರಿದಿ!
- ಬೆಂಗಳೂರುರಾಮಮೂರ್ತಿ ನಗರ ಪೋಲಿಸರ ಕಾರ್ಯಚರಣೆ?
ಶ್ರೀನಿವಾಸಪುರ: ಬಂಗಾರದ ವ್ಯಾಪಾರಸ್ಥರು ತಮ್ಮಲ್ಲಿಗೆ ಹಳೇಯ ಬಂಗಾರ ಮಾರಾಟ ಮಾಡಲು ಬರುವಂತವರ ಪೂರ್ಣ ಮಾಹಿತಿ ಪಡೆದು, ಅವರ ಹಿನ್ನಲೆ ತಿಳಿದು ಅವರೊಂದಿಗೆ ವ್ಯವಹಾರ ನಡೆಸಬೇಕು ಎಂದು ಶಾಸಕ ರಮೇಶಕುಮಾರ್ ಬಂಗಾರದ ಅಭರಣ ವ್ಯಾಪರಸ್ಥರ ಸಭೆಯಲ್ಲಿ ಸೂಚ್ಯಕವಾಗಿ ತಿಳಿಸಿದರು.
ಪಟ್ಟಣದ ಬಂಗಾರದ ವ್ಯಾಪಾರಸ್ಥರು ಕ್ರೈಂ ಪೋಲಿಸರು ಕಳ್ಳತನದ ಮಾಲು ಖರಿದಿಯ ಆರೋಪ ಹೋರಿಸಿ,ವಿಚಾರಣೆ ನೆಪದಲ್ಲಿ ನಮ್ಮನ್ನು ಅಕ್ರಮವಾಗಿ ಬಂಧಿಸಿ ಹೆದರಿಸಿ ಬೆದರಿಸಿ ನಾವು ತಪ್ಪು ಮಾಡದಿದ್ದರು ನಮ್ಮ ಮೇಲೆ ಆರೋಪ ಹೇರುತ್ತಾರೆ ನಂತರ ಕಳ್ಳನ ಬಳಿ ನೀವು ಇಷ್ಟು ಗ್ರಾಮ ಬಂಗಾರವನ್ನು ನೀವು ಖರಿದಿ ಮಾಡಿರುತ್ತಿರ ಅಷ್ಟು ಗ್ರಾಮ ನಮ್ಮಿಂದ ವಸೂಲಾತಿ ಮಾಡುತ್ತಾರೆ ಇದಕ್ಕೆ ನಾವು ಹೆದರಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಾರ ವಹಿವಾಟು ಬಂದ್ ಮಾಡಿಕೊಂಡು ನಿಮ್ಮಲ್ಲಿಗೆ ಬಂದಿರುವುದಾಗಿ ಪಟ್ಟಣದ ಅಭರಣ ವ್ಯಾಪಾರಸ್ಥರು ಶಾಸಕ ರಮೇಶಕುಮಾರ್ ಬಳಿ ಅಲವತ್ತುಕೊಂಡರು. ಇದಕ್ಕೆ ಸ್ಪಂದಿಸಿದ ಅವರು ನಾವು ಪೋಲಿಸರನ್ನು ದೂರುವ ಮೊದಲು ನಮ್ಮಲ್ಲಿನ ಲೋಪದೊಷಗಳನ್ನು ಸರಿ ಮಾಡಿಕೊಳ್ಳೊಣ ಎಂದರು.
ನಮ್ಮಲ್ಲಿಗೆ ವಹಿವಾಟು ನಡೆಸಲು ಬರುವಂತವರು ಯಾರು ಏಕೆ ಬರುತ್ತಿದ್ದಾನೆ ಅವನಿಂದ ಬಂಗಾರದ ಮಾಲು ಖರಿದಿ ಮಾಡುವಾಗ ಅವನ ಅಧಾರ ಕಾರ್ಡ್ ಸೇರಿದಂತೆ ಏನೆಲ್ಲಾ ಅವಶ್ಯ ಮಾಹಿತಿ ಪಡೆಯುವುದು ವ್ಯಾಪಾರಸ್ಥನ ಜವಾಬ್ದಾರಿ ಎಂದರು ಎನೂ ಇಲ್ಲದೆ ಖರಿದಿ ಮಾಡಿದ್ದೇ ಆದರೆ ಮುಂದೆ ಇಂತಹ ಪರಿಣಾಮಗಳು ಹೆಚ್ಚು ನಡೆಯಬಹುದು ಎಂದರು.
ಮುಂದೆ ನಿವೇಷ್ಟು ಜಾಗ್ರತೆ ವಹಿಸುತ್ತಿರೋ ಅಷ್ಟು ಅನಕೂಲವಾಗುತ್ತದೆ ಇದಕ್ಕೂ ಮೀರಿ ನಡೆದಾಗ ನಿಮ್ಮ ಪರವಾಗಿ ನಾನು ಇರುತ್ತೇನೆ ಎಂದು ಭರವಸೆ ನೀಡಿದರು.
ಪೋಲಿಸರ ಅಮಾನುಷ್ಯ ವರ್ತನೆ ಬೇಸರ
ಬೆಂಗಳೂರೊ ಅಥಾವ ಇನ್ಯಾವುದೋ ಊರಿನ ಪೋಲಿಸರು ಮಫ್ತಿಯಲ್ಲಿ ಇಲ್ಲಿ ಬಂದು ಸ್ಥಳೀಯ ಪೋಲಿಸರಿಗೆ ಮಾಹಿತಿಯೂ ನೀಡದೆ ವ್ಯಾಪರಸ್ಥರನ್ನು ಸಿನಿಮಾ ಶ್ಯೈಲಿಯಲ್ಲಿ ಬಂದಿಸಿ ಕರೆದುಕೊಂಡು ಹೋಗುವುದು ಸರಿಯಿಲ್ಲ ಯಾವುದೇ ಊರಿನ ಪೋಲಿಸರು ಇಲ್ಲಿಗೆ ಬಂದಾಗ ಇಲ್ಲಿನ ಠಾಣೆಯಲ್ಲಿ ಮಾಹಿತಿ ನೀಡಿ ಕಾರ್ಯಚರಣೆ ನಡೆಸುವುದು ಸೂಕ್ತ ಎಂದರು.
ಹತ್ಯೆ ಸಂಬಂದ ಅಭರಣ ಶ್ರೀನಿವಾಸಪುರದಲ್ಲಿ ಖರೀದಿ.
ಇತ್ತಿಚಿಗೆ ಎರಡನೇಯ ಲಾಕ್ಡೌನ್ ಸಂದರ್ಭದಲ್ಲಿ ಕೋಲಾರದ ಪೋಲಿಸ್ ಠಾಣೆ ಪೋಲಿಸರು ಶ್ರೀನಿವಾಸಪುರಕ್ಕೆ ಆಗಮಿಸಿ ಇಲ್ಲಿನ ಅಭರಣ ವ್ಯಾಪಾರಿಯೊಬ್ಬರನ್ನು ಅಕ್ರಮ ಅಭರಣ ಕೊಂಡಿದ್ದ ಆರೋಪದ ಮೇಲೆ ಬಂಧಿಸಿ ಕರೆದುಕೊಂಡು ಹೋಗಿದ್ದರು.ನಂತರ ವಿಚಾರಣೆಯಲ್ಲಿ ಕೋಲಾರದ ಸಮೀಪ ನಡೆದ ಹತ್ಯೆಯೊಂದರ ಸಂಬಂದ ಕಳುವಾಗಿದ್ದ ಬಂಗಾರದ ಆಭರಣಗಳನ್ನು ಆ ವ್ಯಾಪಾರಿ ಹತ್ಯೆಯಲ್ಲಿ ಪಾಲ್ಗೋಂಡಿದ್ದವರ ಬಳಿಯಿಂದ ಖರಿದಿಸಿದ್ದನಂತೆ ನಂತರದಲ್ಲಿ ಖರಿದಿ ಮಾಡಿರುವುದು ಒಪ್ಪಿಕೊಂಡು ಕೋಲಾರ ಪೋಲಿಸರು ತಿಳಿಸಿದಷ್ಟು ಬಂಗಾರವನ್ನು ನೀಡಿರುತ್ತಾನಂತೆ.
ಮತ್ತೊಂದು ಘಟನೆಯಲ್ಲಿ ಬೆಂಗಳೂರಿನ ರಾಮಮೂರ್ತಿ ನಗರ ಪೋಲಿಸರು ಮಫ್ತಿಯಲ್ಲಿ ಶ್ರೀನಿವಾಸಪುರಕ್ಕೆ ಬಂದು ಇಲ್ಲಿನ ಪ್ರಮುಖ ಬಂಗಾರದ ವ್ಯಾಪಾರಿಯೊಬ್ಬರನ್ನು ಆತನ ಅಭರಣದ ಅಂಗಡಿ ಮುಂದೆಯೇ ಹಾಡು ಹಗಲೆ ಥೇಟ್ ಸಿನಿಮಾ ಶೈಲಿಯಲ್ಲಿ ಕಾರಿನಲ್ಲಿ ಎತ್ತಿಹಾಕಿಕೊಂಡು ಹೋಗಿ ಆತನಿಂದಲೂ ತಕ್ಕಮಟ್ಟಿಗೆ ಬಂಗಾರ ವಸೂಲಾತಿ ಮಾಡಿಕೊಂಡಿದ್ದರು.