- ಅವ್ಯವಸ್ಥೆಯ ಅಗರ ಇಲ್ಲಿ ಎಲ್ಲವೂ ಸಮಸ್ಯೆ
- ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳ
- ದಿವ್ಯ ನಿರ್ಲಕ್ಷ್ಯದ ಪರಿಣಾಮ ಪ್ರಪಂಚ ಪ್ರಸಿದ್ಧ
- ಮಾವಿನ ಮಾರುಕಟ್ಟೆಯಲ್ಲಿ ಸರ್ವಂ ಧೂಳಂ
ಶ್ರೀನಿವಾಸಪುರ:ಇದು ಪ್ರಪಂಚ ಪ್ರಸಿದ್ಧ ಮಾವಿನ ಕಾಯಿ ಮಾರುಕಟ್ಟೆ ಭಾರತದ ಬಹುತೇಕ ಮಾವು ಮಾರುಕಟ್ಟೆಗಳಿಗೆ ನೇರಸಂಪರ್ಕ ಹೊಂದಿರುವಂತ ಬೃಹತ್ ಮಾವು ಮಾರುಕಟ್ಟೆ ಆದರೆ ಇಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸುವ ಸೌಜನ್ಯ ಕರ್ನಾಟಕ ಸರ್ಕಾರದ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಇಲ್ಲದಿರುವುದು ದುರಂತ ಎನ್ನಬಹುದು.
ರಾಷ್ಟ್ರೀಯ ಹೆದ್ದಾರಿ 64 ಶ್ರೀನಿವಾಸಪುರ-ಚಿಂತಾಮಣಿ ರಸ್ತೆಗೆ ಹೊಂದಿಕೊಂಡಂತೆ ಸುಮಾರು 19.5 ಎಕರೆಯಲ್ಲಿ ಖಾಸಗಿ ವ್ಯಕ್ತಿಗಳು 7.5 ಅತಿಕ್ರಮಿಸಿಕೊಂಡಿದ್ದು ಅದರಲ್ಲಿ ಸುಮಾರು 2 ಎಕರೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ವಾಪಸ್ಸು ಪಡೆದರಾದರು ಉಳಿದ 5.5 ಎಕರೆ ಬಲಿಷ್ಟ ಖಾಸಗಿ ವ್ಯಕ್ತಿಗಳಿಂದ ಬಿಡಿಸಿ ಕೊಳ್ಳಲಾಗದೆ ಬಿಟ್ಟಿದ್ದಾರೆ ಉಳಿದ 10 ಎಕರೆ ಮಾರುಕಟ್ಟೆ ಪ್ರದೇಶದಲ್ಲಿ ಸುಮಾರು ಮೂರು ಎಕರೆಯಲ್ಲಿ ಟಮ್ಯಾಟೊ ಹಾಗು ದಿನಹಿ ತರಕಾರಿ ಹರಾಜು ಹೊರತು ಪಡಿಸಿದರೆ ಉಳಿದ ಎಲ್ಲಾ ಭಾಗದಲ್ಲಿ ಮ್ಯಾಂಗೊ ಸಿಸನಬಲ್ ಕೃಷಿ ಉತ್ಪನ್ನ ಮಾರುಕಟ್ಟೆ ನಡೆಯುತ್ತದೆ,ಮಾವಿನ ಫಸಲಿನ ಸಂದರ್ಭದಲ್ಲಿ ಮಾತ್ರ ಬಿಝಿ ಉಳಿದಂತೆ ಯಾವುದೆ ಗಿಜಗುಟ್ಟುವ ವಹಿವಾಟು ನಡೆಯುವುದಿಲ್ಲ
ಮೂಲಭೂತ ಸೌಕರ್ಯಗಳು ಇಲ್ಲದ ಮಾರುಕಟ್ಟೆ
ಮಾವಿನ ಸುಗ್ಗಿಯಲ್ಲಿ ಮಾತ್ರ ಬಿಝಾಗುವ ಮಾರುಕಟ್ಟೆಯಲ್ಲಿ ಅಗತ್ಯ ಸೌಲಭ್ಯಗಳು ಇಲ್ಲ ಇಲ್ಲಿಗೆ ಮಾವಿನ ಕಾಯಿ ಮಾರಲು ಬರುವಂತ ರೈತಾಪಿ ಜನಕ್ಕೆ ಶುಚಿಯಾದ ಕುಡಿಯುವ ನೀರು ಉಪಹಾರಗೃಹ ಇಲ್ಲ, ಆವರಣದಲ್ಲಿ ಸ್ವಚ್ಚತೆ ಇಲ್ಲದೆ ರಸ್ತೆಗಳು ಗಬ್ಬು ನಾರುತ್ತದೆ, ಶೌಚಾಲಯ, ಸೌಲಭ್ಯ ಒದಗಿಸಿಲ್ಲ ಇವೆಲ್ಲವು ಮೂಲಭೂತ ಸೌಲಭ್ಯಗಳ ಅಡಿಯಲ್ಲಿ ಬರುತ್ತದೆ ಇದನ್ನು ಒದಗಿಸುವ ಜವಾಬ್ದಾರಿ ನಮ್ಮದು ಎಂಬ ಕನಿಷ್ಠ ಜ್ಞಾನ ಸೌಜನ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಇಲ್ಲದ ಪರಿಣಾಮ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಅವ್ಯವಸ್ಥೆಯ ಆಗರವಾಗಿದೆ.
ಎಲ್ಲದಕ್ಕೂ ಟ್ಯಾಂಕರ್ ನೀರೆ ಮೂಲ
ಕನಿಷ್ಠ ಕುಡಿಯುವ ನೀರು ಸಿಗುವುದಿಲ್ಲ ಅಂದರೆ ಏನು ಅರ್ಥ ಸ್ವಾತಂತ್ರ್ಯ ಕಂಡು ಎಂಟು ದಶಕಗಳಾಗುತ್ತಿದೆ ಇವತ್ತಿಗೂ ಕುಡಿಯುವ ನೀರಿನ ಸೌಭ್ಯಕ್ಕೆ ಅಂಗಲಾಚುವ ಪರಿಸ್ಥಿತಿ ಅನ್ನುವುದಾದರೆ ಎಂತಹ ಕರ್ಮಾ,ಇಲ್ಲಿ ಪ್ರಾಂಗಣದಲ್ಲಿ ಶುದ್ಧವಾದ ನೀರು ಸಿಗುವುದಿಲ್ಲ ಟ್ಯಾಂಕರ್ ನೀರಿಗೆ ಇಲ್ಲಿ ಪ್ರಾಧ್ಯಾನತೆ ವಿಶ್ವಪ್ರಸಿದ್ಧ ಮಾವು ಮಾರುಕಟ್ಟೆಯಲ್ಲಿ ಶುದ್ಧ ನೀರಿನ ಘಟಕೆ ಸ್ಥಾಪಿಸುವ ಮುಖ್ಯ ಆಲೋಚನೆ ಆಳುವಂತವರಿಗೆ ಇಲ್ಲದಿರುವುದು ದುರಂತ.
ಇಲ್ಲಿರುವಂತ ಅಸ್ವಚ್ಚತೆಯ ಹೋಟೆಲ್ ಗಳಲ್ಲಿ ಟ್ಯಾಂಕರ್ ನೀರು ಬಳಸುತ್ತಾರೆ ಪಾತ್ರೆ ತೊಳೆಯಲು ಅದೆ ನೀರು, ಅಡುಗೆ ಮಾಡಲು ಅದೆ ನೀರು, ಗ್ರಾಹಕ ಕುಡಿಯಲು ಅದೆ ನೀರು ಯಾವ ಸ್ಥಿತಿ ಇದೆ ಎಂದರೆ ನೋಡಿದವರಿಗಷ್ಟೆ ಅರ್ಥ ಆಗುತ್ತದೆ.ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೋಟೆಲ್ ಗಳಿಗೆ ಪರವಾನಗಿ ನೀಡುವಂತ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಆರೋಗ್ಯ ದೃಷ್ಟಿ ಮಾನದಂಡಗಲನ್ನು ಇಟ್ಟುಕೊಂಡು ಪರವಾನಗಿ ನೀಡಬೇಕು ಎನ್ನುವ ಆಲೋಚನೆ ಇರುವುದಿಲ್ವಾ ಅಮದಾಮು ವಲಸ ವಸ್ತೆ ಸಾಲು ಎಂದು ದುರಾಸೆಗೆ ಬಿದ್ದು ಪರವಾಗಿ ನೀಡುತ್ತಾರೆ ಎಂಬ ಆರೋಪ ಇದೆ.
ಎಲ್ಲೆಲ್ಲೂ ಅನೈರ್ಮಲ್ಯ
ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳ ಮಾರಾಟದ ಸಲುವಾಗಿ ರೈತರು, ಕೊಳ್ಳುವ ಸಲುವಾಗಿ ವ್ಯಾಪಾರಸ್ಥರು ವಹಿವಾಟು ನಡೆಸಲು ಬರುತ್ತಾರೆ. ಮಾವಿನ ಸುಗ್ಗಿಯಲ್ಲಿ ಸಾವಿರಾರು ಸಂಖ್ಯೆ ಜನರು ನಿತ್ಯ ಬಂದು ಹೋಗುವ ಸ್ಥಳ ಇದಾಗಿದೆ. ಕೃಷಿ ಉತ್ಪನಗಳನ್ನು ದಲ್ಲಾಳರು ಗ್ರೇಡ್ ಮಾಡುವ ಕಾರಣ ಮತ್ತು ಮಾರಾಟದ ಸಂದರ್ಭದಲ್ಲಿ ಗುಣಮಟ್ಟವಲ್ಲದ ಮಾವಿನ ಕಾಯಿಯನ್ನು ಬಿಸಾಡುವ ಕಾರಣ ನಿತ್ಯ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ.
ದಲ್ಲಾಳರ ಪರವಾನಗಿ ನವೀಕರಣಕ್ಕೆ ಅದ್ಯತೆ
ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ದಲ್ಲಾಳರ ಪರವಾನಗಿ ನವೀಕರಣಕ್ಕೆ ಅದ್ಯತೆ ನಿಡುವಷ್ಟು ಆಸಕ್ತಿ ಮಾರುಕಟ್ಟೆ ಆವರಣದಲ್ಲಿ ಸ್ಚಚ್ಚತೆ ಮಾಡಲು ಮತ್ತು ಮೂಲಭೂತ ಸೌಕರ್ಯ ಒದಗಿಸಲು ವಹಿಸುತ್ತಿಲ್ಲ ಎನ್ನುತ್ತಾರೆ ರೈತಾಪಿ ಜನರು.
ಕೂಲಿಕಾರ್ಮಿಕರ ಪರಿಸ್ಥಿತಿ ಶೊಚನೀಯ!
ಮಾವಿನ ಕಾಯಿ ಲೊಡ್-ಅನಲೋಡ್ ಮಾಡಲು ಆಂಧ್ರದಿಂದ ಬಂದಿರುವ ಪುರುಷ ಮತ್ತು ಮಹಿಳಾ ಕೂಲಿ ಆಳುಗಳು ಬಹುತೇಕರು ಮಾವಿನ ಮಂಡಿಯಲ್ಲೆ ಮಲಗುತ್ತಾರೆ,ಅಲ್ಲೆ ಅಡುಗೆ ಮಾಡಿ ತಿನ್ನಬೇಕು ಅಲ್ಲೆ ಮುಂಜಾನೆ ಕರ್ಮಗಳನ್ನು ಮುಗಿಸಬೇಕು ಬಟ್ಟೆ ಒಗೆಯುವುದು ಸ್ನಾನ ಮಾಡುವುದು ನೀರು ಹಿಡಿಯುವುದು ಎಂತಹ ಹೀನಾಯ ಪರಿಸ್ಥಿತಿ ಎಂದರೆ ಕೊಳತ ಮಾವಿನ ತ್ಯಾಜ್ಯದ ನಡುವೆ ಬದಕು ಸಾಗಿಸುತ್ತಿದ್ದಾರೆ ಅದನ್ನು ಹೇಳಲು ಸಾದ್ಯವಾಗದು ಕಾರ್ಮಿಕರ ವಿಚಾರವಾಗಿ ಧ್ವನಿ ಎನ್ನುವ ಕಾರ್ಮಿಕ ಅಧಿಕಾರಿಗಳು ಇತ್ತ ಸುಳಿಯುವುದೆ ಇಲ್ಲ ಮಾನವೀಯತೆ ರಕ್ಷಣೆ ಇಲ್ಲದಂತ ದನನೀಯ ಪರಿಸ್ಥಿತಿಯಲ್ಲಿ ಕೂಲಿ ಕಾರ್ಮಿಕರ ಬದುಕು ಇದೆ.
ಅವೈಜ್ಞಾನಿಕ ನಿರ್ಮಾಣ: ಪ್ರಾಂಗಣದಲ್ಲಿ ಬೇಡವಾದ ಕಡೆಗಳಲ್ಲೂ ಚರಂಡಿಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಸಂಪರ್ಕದ ವ್ಯವಸ್ಥೆಯಿಲ್ಲ. ಹೂಳನ್ನು ತೆಗೆಸಿಲ್ಲ. ಈಗಾಗಿ ಚರಂಡಿಗಳು ಇದ್ದು ಇಲ್ಲದಂತಿವೆ. ರಸ್ತೆಗಳು ಹಳ್ಳ ಬಿದ್ದಿವೆ. ಕೆಲವು ಕಡೆ ಮೆಟ್ಲಿಂಗ್ ಸಹ ಮಾಡಿಲ್ಲ. ಇದರಿಂದ ಮಳೆಯಾದರೆ ಪ್ರಾಂಗಣ ಕೆಸರುಮಯವಾಗುತ್ತದೆ.ಬಿಸಿಲು ಬಂದರೆ ಧೂಳು ಮಯವಾಗುತ್ತದೆ,ಮಾರುಕಟ್ಟೆಯಲ್ಲಿ ರೈತರು, ಸಾರ್ವಜನಿಕರು, ಕಾರ್ಮಿಕರು, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಮಾರುಕಟ್ಟೆ ಅವರಣದ ರಸ್ತೆಗಳಲ್ಲಿ ನೂರಾರು ಟ್ಯಾಕ್ಟರ್, ಲಾರಿ, ಬೃಹತ್ ವಾಹನಗಳು ಸಂಚಾರ ಮಾಡುವ ಕಾರಣ ದೂಳು ಹೆಚ್ಚಾಗಿ ಬರುತ್ತಿದ್ದು, ಕನಿಷ್ಟ ಪಕ್ಷ ಎಪಿಎಂಸಿ ಅಧಿಕಾರಿಗಳು ಗಮನಹರಿಸಿ ನೀರನ್ನು ಹಾಕದೆ ಇದಕ್ಕೂ ನಮಗೂ ಸಂಬಂದವಿಲ್ಲದಂತೆ ಕಛೇರಿಯಲ್ಲಿ ಕುಳಿತಿರುತ್ತರೆ ಒಮ್ಮೆ ಇಲ್ಲಿ ಓಡಾಡಿದರೆ ನರಕ ಯಾತನೆಯ ಅನುಭವವಾಗುತ್ತದೆ ಎಂದು ರೈತರು ಹೇಳುತ್ತಾರೆ.
ಕೆಲ ರಸ್ತೆಗಳಲ್ಲಿ ಸಮರ್ಪಕವಾದ ವಿದ್ಯತ್ ಬೀದಿ ದೀಪಗಳು ಇಲ್ಲದ ಕಾರಣ ರಾತ್ರಿ ವೇಳೆ ರಸ್ತೆಗಳು ಭಯಾನಕ ಕತ್ತಲು ಅವರಿಸ್ಕೊಳ್ಳುವ ಕಾರಣ ಓಡಾಡಲು ಭಯವಾಗುತ್ತದೆ ಎನ್ನುತ್ತಾರೆ. ಈಗೆ ಹೇಳುತ್ತಾ ಹೋದರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಸಮಸ್ಯೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇನ್ನಾದರೂ ಆಳುವ ಸರ್ಕಾರದವರು ಜನಪ್ರತಿನಿಧಿಗಳು ಸಂಬಂಧಪಟ್ಟವರು ಅವ್ಯವಸ್ಥೆ ಸರಿಪಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಸಿಬ್ಬಂದಿ ಇಲ್ಲ ಎಂಬ ನೆಪ
ಎಲ್ಲದಕ್ಕೂ ಇಲ್ಲಿನ ಮಾರುಕಟ್ಟೆ ಅಧಿಕಾರಿಗಳ ಒಂದೇ ಉತ್ತರ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಎಲ್ಲವನ್ನು ನೋಡುವುದಕ್ಕೆ ಆಗುತ್ತಿಲ್ಲ. ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆಂದರು. ಸಿಬ್ಬಂದಿ ಬಂದರೆ ಎಲ್ಲವನ್ನು ಸರಿಮಾಡುತ್ತೇವೆ ಎಂಬ ಸಿದ್ಧ ಉತ್ತರ ಬರುತ್ತದೆ.