ನ್ಯೂಜ್ ಡೆಸ್ಕ್:ಎಲ್ಲವೂ ಸರಿ ಹೋಗಿದ್ದರೆ ಮುಂದಿನ ತಿಂಗಳು ನಡೆಯುವ ಎಸ್ಸೆಸ್ಸೆಲ್ಸಿ ಪರಿಕ್ಷೆ ಬರೆಯಬೇಕಾಗಿತ್ತು ಆದರೆ ವಿಧಿ ಬರವೆ ಬೆರೆಯಾಗಿದ್ದು ವಿದ್ಯಾರ್ಥಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ ವಿದ್ಯಾರ್ಥಿಯನ್ನು ರಾಹುಲ್ ಬಿ.ಜೆ. (16) ಎಂದು ಗುರುತಿಸಲಾಗಿದೆ. ಈತ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಭೈರಾಪುರ ಗ್ರಾಮದ ಜಯರಾಂ ಎಂಬುವರ ಪುತ್ರನಾಗಿದ್ದು ಜಿ.ಎಚ್.ಎಸ್. ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ.
ಮೃತ ರಾಹುಲ್ ಶುಕ್ರವಾರ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದಿದ್ದು ರಾತ್ರಿ 9.30 ಸಮಯದಲ್ಲಿ ಓದುತ್ತಿರುವಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಪೋಷಕರು ಹುಳಿಯಾರಿನ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ವಿದ್ಯಾರ್ಥಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ
10ನೇ ಕ್ಲಾಸಿನ ಬಾಲಕಿ. ಎಂದಿನಂತೆ ಶಾಲೆಯ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಹೊರಟಿದ್ದಳು. ಗುರುವಾರ ಮುಂಜಾನೆ ಶಾಲಾ ಅಂಗಳದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾಳೆ ಏನಾಯ್ತು ಎಂದು ನೋಡುವಷ್ಟರಲ್ಲಿ 16ರ ಬಾಲೆಗೆ ಹೃದಯಾಘಾತವಾಗಿತ್ತು. ಕೂಡಲೇ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು ಕೂಡ ಬಾಲಕಿ ಬದುಕುಳಿಯಲಿಲ್ಲ.
ಈ ಘಟನೆ ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯಲ್ಲಿ ನಡೆದಿದ್ದು ಶ್ರೀನಿಧಿ ಎಂಬ ವಿಧಾರ್ಥಿನಿ ಗುರುವಾರ ಎಂದಿನಂತೆ ಶಾಲೆಗೆ ಬಂದ ಮಗು ಏಕಾಏಕಿ ಕುಸಿದು ಬಿದ್ದಿದ್ದಾಳೆ. ಎದೆ ನೋವು ಕಾಣಿಸಿಕೊಂಡು ಶಾಲೆಯ ಅಂಗಳದಲ್ಲಿಯೇ ಬಿದ್ದಿದ್ದಾಳೆ.ಶಾಲಾ ಶಿಕ್ಷಕರು ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಆರಂಭಿಕ ಚಿಕಿತ್ಸೆ ನೀಡಿದ್ದಾರೆ. ಸಿಪಿಆರ್ ಮಾಡಿದ್ದಾರೆ, ಆದರೆ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರು ಚೆಲ್ಲಿದ್ದಾಳೆ.ತೆಲಂಗಾಣದ ರಮಾರೆಡ್ಡಿ ಮಂಡಲ್ ಸಿಂಗಾರಪಲ್ಲಿ ಎಂಬ ಗ್ರಾಮದ ಹುಡುಗಿ. ಕಾಮಾರರೆಡ್ಡಿಯ ಖಾಸಗಿ ಶಾಲೆಯೊಂದರಲ್ಲಿ 10 ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಹೆಚ್ಚುತ್ತಿರುವ ಹೃದಯಾಘಾತ ಘಟನೆಗಳು
ಇತ್ತಿಚಿನ ವರ್ಷಗಳಲ್ಲಿ ದೇಶದಲ್ಲಿ ಹೃದಾಯಾಘಾತದಿಂದ ಮೃತರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು ಆರೋಗ್ಯವಂತ ವ್ಯಕ್ತಿ ಏಕಾಏಕಿ ಮೃತಪಟ್ಟರೆ ಅದನ್ನು ಹೃದಯಸ್ತಂಭನ ಅಥವಾ ಕಾರ್ಡಿಯಕ್ ಅರೆಸ್ಟ್ ಎನ್ನುತ್ತಾರೆ.ಇತ್ತಿಚಿಗೆ ಸಣ್ಣ ವಯಸ್ಸಿನ ಮಕ್ಕಳು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ ಇದಕ್ಕೆ ಕಾರಣ ಸಣ್ಣ ಮಕ್ಕಳೆ ಇರಬಹುದು ಯುವಕರೆ ಇರಬಹುದು ಅವರಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿತ್ತಿರುವುದು ಒತ್ತಡದ ಜೀವನ ರೇಡಿಮೆಡ್ ಅಹಾರ ಪದ್ದತಿ ಇವೆಲ್ಲವು ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಹೃದಯಾಘಾತ ಹೆಚ್ಚಾಗಲಿಕ್ಕೆ ಕಾರಣ ಎನ್ನಬಹುದು ಎಂದು ಅಹಾರ ತಜ್ಞ ವೈದ್ಯ ಡಾ.ವೆಂಕಟಾಚಲ ಅಭಿಪ್ರಾಯ ಪಡುತ್ತಾರೆ.
AlsoRead:ಪಾರಿವಾಳ ಸಂಪರ್ಕದಿಂದ ಶ್ವಾಸಕೋಶದ ಸೋಂಕು!ಮಿಸ್ ಮಾಡದೇ ಓದಿ!https://www.vcsnewz.com/aleartalert-lung-infection-due-to-contact-with-pigeons/