ನ್ಯೂಸ್ ಡೆಸ್ಕ್: ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭಗೊಂಡಿದೆ ಮುಖ್ಯಮಂತ್ರಿ ಯಡಿಯೂರಪ್ಪ ಫೋನ್ ಮಾಡಿ ಅಧಿಕೃತ ಆಹ್ವಾನ ನೀಡಿದ್ದಾರೆ ಎನ್ನುವ ಲಿಸ್ಟ್ ನಲ್ಲಿ ಸುಳ್ಯದ ಶಾಸಕ ಎಸ್.ಅಂಗಾರ, ಉಮೇಶ್ ಕತ್ತಿ, ಎಂಟಿಬಿ ನಾಗರಾಜ್ ಹಾಗೂ ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಫಿಕ್ಸ್ ಆಗಿದ್ದು,ಶಾಸಕ ಅಂಗಾರ ಅವರಿಗೆ ಸಿಎಂ ಬಿಎಸ್ವೈ ಮಂಗಳವಾರ ರಾತ್ರಿ ಫೋನ್ ಮಾಡಿ ದೃಢಪಡಿಸಿದ್ದಾರೆ ಎನ್ನಲಾಗಿದೆ.ಸಿ.ಪಿ ಯೋಗೇಶ್ವರ್ ಅವರಿಗೂ ಯಡಿಯೂರಪ್ಪ ಕರೆ ಮಾಡಿದ್ದಾರಂತೆ ಇದನ್ನು ಯೋಗೇಶ್ವರ್ ಅವರೆ ಮಾಧ್ಯಮಗಳಿಗೆ ದೃಡಪಡಿಸಿರುವುದಾಗಿ ಹೇಳಲಾಗಿದೆ. ಇನ್ನು ಉಮೇಶ್ ಕತ್ತಿ ಅವರಿಗೂ ಬಿಎಸ್ವೈ ಬುಧವಾರ ಸಂಜೆ ಫೋನ್ ಮಾಡಿ ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿದ್ದಾರಂತೆ.ಮತ್ತೋರ್ವ ಶಾಸಕ ಎಂಟಿಬಿ ನಾಗರಾಜ್ಗೂ ಸಚಿವ ಸ್ಥಾನ ಅಧಿಕೃತಗೊಂಡಿದೆ ಎನ್ನಲಾಗಿದೆ.
ಬುಧವಾರ ಮಧ್ಯಾಹ್ಮ 3.50 ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿರುವಂತೆ 7 ಅಥವಾ 8 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಆದರೆ ಇದುವರೆಗೆ ಕೇವಲ ನಾಲ್ಕು ಮಂದಿ ಹೆಸರು ಮಾತ್ರ ಅಧಿಕೃತಗೊಂಡಿದ್ದು, ಉಳಿದ ಮೂರು ಅಥವಾ ನಾಲ್ಕು ಮಂದಿಗೆ ಯಾರು ಎಂಬುವುದು ಇನ್ನೂ ದೃಢಪಡಿಸಿಲ್ಲ.
ಮುನಿರತ್ನ ಸಚಿವ ಸ್ಥಾನ ಲೆಕ್ಕಾಚಾರದ ನಿರ್ಣಯವಾಗಲಿದೆ!
ರಾಜಕೀಯ ಲೆಕ್ಕಾಚಾರದಲ್ಲಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಅದು ಇನ್ನೂ ಅಧಿಕೃತವಾಗಿಲ್ಲ. ಮುನಿರತ್ನ ಮಂತ್ರಿಯಾಗುವ ವಿಶ್ವಾಸದಲ್ಲಿದ್ದಾರೆ ಹೈಕಮಾಂಡ್ ಕಡೆಯಿಂದ ಹಸಿರುನಿಶಾನೆ ಸಿಕ್ಕಿಲ್ಲ. ಟಿಕೆಟ್ ಹಂಚಿಕೆಯ್ಲ್ಲೂಹೈಕಮಾಂಡ್ ಲೆಕ್ಕಾಚಾರದ ನಿರ್ಣಯ ತೆಗೆದುಕೊಂಡು ಅಳೆದು ತೂಗಿದ ಬಳಿಕ ಟಿಕೆಟ್ ನೀಡಿತ್ತು.ಸಂಪುಟ ವಿಸ್ತರಣೆಯ ಸಂದರ್ಭದಲ್ಲೂ ಮುನಿರತ್ನಗೆ ಸಚಿವ ಅಷ್ಟು ಸುಲಭವಾಗಿ ಸಿಗುವ ಸಾದ್ಯತೆ ಕಡಿಮೆ ಎನ್ನುವ ಮಾತು ಕೇಳಿ ಬರುತ್ತಿದೆ.ಎಲ್ಲವೂ ಅಂದುಕೊಂಡಂತೆ ಯಡಿಯೂರಪ್ಪ ಆಶೆಯಂತೆ ಸಚಿವರ ಪಟ್ಟಿ ಅಂತಿಮ ವಾದರೆ ಮುನಿರತ್ನ ಮಂತ್ರಿಯಾಗುತ್ತಾರೆ.
ಉಳಿದಂತೆ ಮುರುಗೇಶ್ ನಿರಾಣಿ, ಅರವಿಂದ್ ಲಿಂಬಾವಳಿ, ಪೂರ್ಣಿಮಾ ಶ್ರೀನಿವಾಸ್ ಅಥವಾ ರೂಪಾಳಿ ನಾಯ್ಕ್ ನಡುವೆ ಮೂರು ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಬಹುಷಃ ಬುಧವಾರ ಮಧ್ಯಾಹ್ಮದ ಒಳಗಾಗಿ ಹೆಸರುಗಳು ಅಂತಿಮಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಪಕ್ಷ ಸಂಘಟನೆ ಖೋಟಾದಲ್ಲಿ ಸಚಿವ ಸ್ಥಾನ ಅಂಗಾರ.
ಸುಳ್ಯದ ಶಾಸಕ, ಸಚಿವಾಕಾಂಕ್ಷಿ ಎಸ್.ಅಂಗಾರ ಹೇಳಿರುವಂತೆ ಆರು ಬಾರಿ ಕ್ಷೇತ್ರದ ಜನತೆ ಆಶಿರ್ವಾದ ಮಾಡಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘ ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದೆ. ಮುಖ್ಯಮಂತ್ರಿ ಬಿ..ಎಸ್. ಯಡಿಯೂರಪ್ಪ ಅವರೇ ಸ್ವತಃ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ ಎಂದು ಹೇಳುವ ಮೂಲಕ ಅವರು ಇಂದು ರಾಜಭವನದಲ್ಲಿ ಮೂರು ಗಂಟೆಗೆ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ.
ಕೋಲಾರದ ನಾಗೇಶ್ ಸಂಪುಟದಲ್ಲಿ ಇರುತ್ತಾರ?
ಈ ಎಲ್ಲದರ ನಡುವೆ ಕೋಲಾರದ ಉಸ್ತುವಾರಿ ಸಚಿವ, ಮುಳಬಾಗಿಲು ಶಾಸಕ ನಾಗೇಶ್ ಸ್ಥಾನಕ್ಕೆ ಕುತ್ತು ಇದಿಯಾ ಎನ್ನುವ ಮಾತು ಹೆಚ್ಚು ಕೇಳಿಬರುತ್ತಿದೆ ಸ್ಥಳೀಯವಾಗಿ ಮುಳಬಾಗಿಲು ಮಾಜಿ ಶಾಸಕ ಕೊತ್ತೂರುಮಂಜು ಮತ್ತು ಕೋಲಾರದ ಸಂಸದರ ನಡುವೆ ಉತ್ತಮ ಬಾಂಧವ್ಯ ಇಲ್ಲದಿರುವುದು ನಾಗೇಶ್ ಅವರಿಗೆ ಮುಳುವಾಗಲಿದೆ ಎನ್ನುವ ಮಾತು,
ವರದಿ:ಚ.ಶ್ರೀನಿವಾಸಮೂರ್ತಿ