ಶ್ರೀನಿವಾಸಪುರ:ಕೋವಿಡ್ ಲಾಕ್ಡೌನ್ ಬಳಿಕ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ರೈಲು ಸೇವೆಯು ಜನವರಿ 4 ಸೋಮವಾರ ದಿಂದ ಆರಂಭವಾಗಿದೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಾದು ಹೋಗುವ ರೈಲು ವಿಭಜಿತ ಕೋಲಾರ ಜಿಲ್ಲೆಗೆ ಕೊಂಡಿಯಾಗಿದೆ ಎನ್ನಬಹುದು ಹಾಗು ಜಿಲ್ಲೆಯ ಜನತೆಗೆ ಕಡಿಮೆ ದರದಲ್ಲಿ ಸಾರಿಗೆ ಪ್ರಯಾಣ ಪಡೆಯಬಹುದಾಗಿದೆ.
ಕೋವಿಡ್ ಮುಂಜಾಗ್ರತೆ ದೃಷ್ಟಿಯಿಂದ ಕಳೆದ ಮಾರ್ಚ್ನಲ್ಲಿ ದೇಶದ್ಯಾಂತ ರೈಲು ಸೇವೆ ಸ್ಥಗಿತ ಗೋಳಿಸಲಾಗಿತ್ತು ಅದರಲ್ಲೂ ಪ್ಯಾಸಿಂಜರ್ ರೈಲುಗಳ ಸಂಚಾರ ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು.ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಸಂಚಾರ ಮಾಡುವ ರೈಲು ಬಂಗಾರಪೇಟೆ,ಕೋಲಾರ,ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ದೇವನಹಳ್ಳಿ, ನಂತರ ನೂತನವಾಗಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ರೈಲ್ವೇ ಸ್ಟೇಷನ್, ಯಲಹಂಕ ಮೂಲಕ ಯಶವಂತಪುರ ರೈಲ್ವೇ ಸ್ಟೇಷನ್ ತಲುಪಲಿದೆ ಮೊದಲು ಇದೇ ರೈಲು ಬೆಂಗಳೂರು ಮೆಜಸ್ಟಿಕ್ ರೈಲ್ವೆ ನಿಲ್ದಾಣ ನಂತರ ರಾಮನಗರ, ಚನ್ನಪಟ್ಟಣದವರಿಗೂ ಹೋಗುತ್ತಿದ್ದಾರು ಈಗ ಯಶವಂತಪುರ ವರಿಗೂ ಮಾತ್ರ ಹೋಗಲಿದೆ ಮುಂದಿನ ದಿನಗಳಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ(ಮೆಜಸ್ಟಿಕ್) ಸಂಚಾರ ಮಾಡುತ್ತದೆ ಎಂದು ರೈಲ್ವೆ ಇಲಾಖೆ ಸಿಬ್ಬಂದಿ ಹೇಳುವ ಮಾತು.
ದಿನಕ್ಕೆ ನಾಲ್ಕು ರೈಲುಗಳು ಸಂಚರಿಸಲಿದೆ.
1 ನೇ ರೈಲು (ರೈಲು ಸಂಖ್ಯೆ 062970) ಬೆಳ್ಳಿಗ್ಗೆ 5.30 ಬಂಗಾರಪೇಟೆ ಯಿಂದ ಹೊರಡುವ ರೈಲು 9.25 ಕ್ಕೆ ಯಶವಂತಪುರ ತಲುಪಲಿದೆ
2 ನೇ ರೈಲು(ಬೆಳಿಗ್ಗೆ 8.30 ಯಶವಂತಪುರ ನಿಲ್ದಾಣ ದಿಂದ ಹೋರಡುವ ರೈಲು ಮಧ್ಯಾನಃ 12.30 ಬಂಗಾರಪೇಟೆ ತಲುಪಲಿದೆ.
3 ನೇ ರೈಲು(ರೈಲು ಸಂಖ್ಯೆ 06279) ಮಧ್ಯಾನಃ 4.00 ಬಂಗಾರಪೇಟೆಯಿಂದ ಹೋರಡುವ ರೈಲು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ(ಮೆಜಸ್ಟಿಕ್) 8.20 ತಲುಪಲಿದೆ
4 ನೇ ರೈಲು( ರೈಲು ಸಂಖ್ಯೆ 06269) ಬೆಂಗಳೂರು ಶಿವಾಜಿನಗರದ ಕನಂಟೋನ್ಮೆಂಟ್ ನಿಂದ ಸಂಜೆ ಸಂಜೆ 5:55 ಕ್ಕೆ ಹೊರಡುವ ರೈಲು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನನಿಲ್ದಾಣದ ಮುಖಾಂತರ ರಾತ್ರಿ 9:45ಕ್ಕೆ ಬಂಗಾರಪೇಟೆ ತಲುಪಲಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ರೈಲ್ವೆ ಹಾಲ್ಟ್ ಸ್ಟೇಷನ್
ಕೋವಿಡ್ ಮುಂಜಾಗ್ರತೆ: ಸಾರ್ವಜನಿಕರು ರೈಲು ಪ್ರಯಾಣದ ವೇಳೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಿದ್ದು ಕಡ್ಡಾಯವಾಗಿ ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಪಾಡಿಕೊಂಡು ಸಂಚರಿಸುವಂತೆ ರೈಲ್ವೆ ಇಲಾಖೆ ಸಿಬ್ಬಂದಿ ಮನವಿ ಮಾಡಿರುತ್ತಾರೆ.
ಪ್ರಯಾಣಿಕರಿಗೆ ಸದ್ಯ ಸಂತಸವಾಗಿದೆಯಾದರು, ಕೋವಿಡ್ ಪಿಡಿಗಿನಿಂದ ನೀರಿಕ್ಷಿತ ರೈಲುಗಳು ಈ ಮಾರ್ಗದಲ್ಲಿ ಸಂಚಾರ ಪ್ರಾರಂಭವಾಗದಿರುವ ಬಗ್ಗೆ ಸಾರ್ವಜನಿಕರಲ್ಲಿ ಬೇಸರವಿದೆ.ಈ ಭಾಗದ ಇಬ್ಬರು ಸಂಸತ್ ಸದಸ್ಯರು ಹೆಚ್ಚಿನ ಆಸಕ್ತಿ ವಹಿಸಿ ರೈಲ್ವೇ ಇಲಾಖೆ ಮೇಲೆ ಒತ್ತಡ ಹೇರಿ ಈ ಮಾರ್ಗದಲ್ಲಿ ಹೈದರಾಬಾದ್, ಚನೈ ಸಂಪರ್ಕಿಸುವ ರೈಲು ಸೇರಿದಂತೆ ಇತರೆ ನೂತನ ರೈಲುಗಳು ಸಂಚರಿಸಲು ಪ್ರಯತ್ನಿಸಬೇಕು ಇದರಿಂದ ವಿಶೇಷವಾಗಿ ಇಲ್ಲಿನ ರೈತರಿಗೂ ವ್ಯಾಪರಸ್ಥರಿಗೆ ಮತ್ತು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಹೋರ ರಾಜ್ಯಗಳಿಗೆ ಹೋಗುವಂತ ವಿದ್ಯಾರ್ಥಿಗಳಿಗೆ ಅನಕೂಲವಾಗಲಿದೆ ಎಂದು ಸಾರ್ವಜನಿಕರು ಒತ್ತಾಯಿಸಿರುತ್ತಾರೆ. ಕಳೆದ ಹತ್ತು ತಿಂಗಳಿನಿಂದ ನಿರ್ವಹಣೆಯಲ್ಲಿ ನಿರ್ಲಕ್ಷಕ್ಕೆ ಒಳಾಗಿದ್ದ ರೈಲು ನಿಲ್ದಾಣಗಳಲ್ಲಿ ತುರ್ತಾಗಿ ಸ್ವಚ್ಚತೆ ಹಾಗು ಪ್ರಯಾಣಿಕರಿಗೆ ಬದ್ರತೆ ಒದಗಿಸುವ ಕಾರ್ಯ ಆಗಬೇಕಿದೆ.
ಪ್ರಯಾಣ ಧರ
ಶ್ರೀನಿವಾಸಪುರ ದಿಂದ ಯಲಹಂಕ 25/-
ಶ್ರೀನಿವಾಸಪುರ ದಿಂದ ಯಶವಂತಪುರ 30/-
ಚ.ಶ್ರೀನಿವಾಸಮೂರ್ತಿ