ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ರೊಜೊರನಹಳ್ಳಿ ಕ್ರಾಸ್ ನಲ್ಲಿ ನಿರ್ಮಾಣವಾಗಿದ್ದ ವಿಶಾಲವಾದ ವೃತ್ತದಲ್ಲಿ ಹೈ ಮ್ಯಾಸ್ಟ್ ಲೈಟ್ ಸ್ಥಾಪಿಸುವ ಸಲುವಾಗಿ ನಿರ್ಮಾಣ ಮಾಡಿದ್ದ ವೃತ್ತಾಕಾರದ ಕಲ್ಲಿನ ಕಟ್ಟೆಯಲ್ಲಿ ಈಗ್ಗೆ 5-6 ತಿಂಗಳ ಹಿಂದೆ ರಾತ್ರಿಗೆ ರಾತ್ರಿ ನಾಡ ಪ್ರಭು ಕೆಂಪೇಗೌಡ ಪುತ್ತಳಿ ಸ್ಥಾಪಿಸಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.ಕೆಲವರು ತೀವ್ರವಾಗಿ ವಿರೋಧಿಸಿದ ಹಿನ್ನಲೆಯಲ್ಲಿ ತಾಲೂಕು ಆಡಳಿತ ಪುತ್ತಳಿ ವಿಚಾರ ಬಗೆಹರಿಸಲಾಗುದೆ ಒದ್ದಾಡುತ್ತಿದ್ದಾಗ, ಸಂಸದ ಮುನಿಸ್ವಾಮಿ ಈ ವಿಚಾರವಾಗಿ ಎಂಟ್ರಿ ಕೊಟ್ಟು ಯಾರಿಗೂ ಸಮಸ್ಯೆ ಆಗದಂತೆ ಎಲ್ಲಾ ಸಮುದಾಯದ ನಾಯಕರ ಪುತ್ತಳಿಗಳನ್ನು ಸ್ಥಾಪಿಸಲು ರಸ್ತೆ ಪಕ್ಕದ ಕಲ್ಯಾಣಿಯ ಒಂದು ಭಾಗವನ್ನು ಸಮತಟ್ಟು ಮಾಡಿ ಅಲ್ಲಿ ಪುತ್ಥಳಿಗಳನ್ನು ಸ್ಥಾಪಿಸುವ ಭರವಸೆ ನೀಡಿದ್ದು ವಿಷಯ ಅಲ್ಲಿಗೆ ಸದ್ದಡಗಿತ್ತು.
ಈಗ ಪುತ್ಥಳಿ ವಿಚಾರ ಏಕಾ ಏಕಿ ಮುನ್ನಲೆಗೆ ಬಂದಿದೆ ಪುತ್ಥಳಿ ಕಟ್ಟೆ ನಿರ್ಮಾಣ ವಿವಾದಕ್ಕೆ ಕಾರಣವಾಗಿದೆ ಕಲ್ಯಾಣಿ ಬಳಿ ಸಮತಟ್ಟು ಮಾಡುತ್ತಿರುವ ಜಾಗದಲ್ಲಿ ಕೇವಲ ಕೆಂಪೇಗೌಡ ಪುತ್ತಳಿ ಮಾತ್ರ ಸ್ಥಾಪಿಸುವ ಕುರಿತಂತೆ ಒಂದು ಪುತ್ಥಳಿ ಸ್ಥಾಪಿಸಲು ಆಗುವಷ್ಟು ಸ್ಥಳ ಮಾತ್ರ ಸಮತಟ್ಟು ಮಾಡುವ ಮೂಲಕ ಒಳಗೊಳಗೆ ರಹಸ್ಯ ಕಾರ್ಯಚರಣೆ ನಡೆಯುತ್ತಿದೆ ಎಂದು ಆರೋಪಿಸಿ ತಾಲೂಕಿನ ವಿವಿಧ ದಲಿತ ಸಂಘಟನೆಗಳ ಹಾಗು ಇತರೆ ಸಂಘಟನೆಗಳ ಮುಖಂಡರು ಇಂದು ಪುತ್ಥಳಿ ವಿವಾದ ಸ್ಥಳವಾದ ರೊಜೊರನಹಳ್ಳಿ ಕ್ರಾಸ್ ಬಳಿ ಜಮಾವಣೆಗೊಂಡು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಈ ಹಿಂದೆ ಸಂಸದರು ಹೇಳಿರುವಂತೆ ಎಲ್ಲಾ ಸಮುದಾಯಗಳ ಪ್ರಮುಖರ ಹಾಗು ನಾಯಕರ ಪುತ್ತಳಿಗಳನ್ನು ಸ್ಥಾಪಿಸಬೇಕು ಸಂಸದರು ಕೆಂಪೇಗೌಡ ಪುತ್ತಳಿಗೆ ಅನುದಾನ ನೀಡಿರುವಂತೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್,ವಾಲ್ಮೀಕಿ ಮಹರ್ಷಿ ಯೋಗಿ ನಾರಾಯಣತಾತಯ್ಯನವರು ಸೇರಿದಂತೆ ಇತರೆ ಸಮುದಾಯದ ನಾಯಕರ ಪುತ್ತಳಿಗಳಿಗೆ ಅನುದಾನ ನೀಡಬೇಕು ಈ ತಕ್ಷಣ ಸಂಸದ ಮುನಿಸ್ವಾಮಿ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದ ಮುನಿಸ್ವಾಮಿ ಕೇವಲ ಕೆಂಪೇಗೌಡರ ಪುತ್ತಳಿಗೆ ಮಾತ್ರ ಅನುದಾನ ನೀಡಿ ಬೇರೆ ಸಮುದಾಯದ ನಾಯಕರ ಪುತ್ತಳಿಗಳಿಗೆ ಅನುದಾನ ನೀಡದೆ ಇರುವುದು ಸರಿಯಾದುದಲ್ಲ ಈ ಬಗ್ಗೆ ಮುಂದಿನ ದಿನಗಳಲ್ಲಿ ಸಂಸದರಿಗೆ ತಕ್ಕಪಾಠ ಕಲಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಶ್ರೀನಿವಾಸಪುರ ಪೋಲಿಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಕಾರರ ಮನವೊಲಿಸಿದ ನಂತರ ಪ್ರತಿಭಟನೆ ಕೈ ಬಿಟ್ಟರು.
ವರದಿ ನಂಬಿಹಳ್ಳಿಸುರೇಶ.