ಶ್ರೀನಿವಾಸಪುರ:-ಶ್ರೀನಿವಾಸಪುರ-ಕೋಲಾರ ರಸ್ತೆಯಲ್ಲಿ ಹಾಡುಹಗಲೆ ದ್ವಿಚಕ್ರ ವಾಹನ ತಡೆಗಟ್ಟಿ ಹಣ ಕಿತ್ತುಕೊಂಡು ಹೋಗಿರುವ ಘಟನೆ ನವೆಂಬರ್ ಒಂದು ಸೋಮವಾರ ನಡೆದಿದೆ ಎಂದು ಹಣ ಕಳೆದುಕೊಂಡ ತಾಲೂಕಿನ ಕೊರ್ನಹಳ್ಳಿ ಗ್ರಾಮದ ಶ್ರೀರಾಮಪ್ಪ ಶ್ರೀನಿವಾಸಪುರ ಅಪರಾಧ ಠಾಣೆಯಲ್ಲಿ ದೂರುದಾಖಲಿಸಿರುತ್ತಾನೆ.
ಕೊರ್ನಹಳ್ಳಿ ಗ್ರಾಮದ ಶ್ರೀರಾಮಪ್ಪ ಎಂಬ ಯುವಕ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದು ಸಾಲು ರಜೆ ಇರುವ ಹಿನ್ನಲೆಯಲ್ಲಿ ಊರಿಗೆ ಬಂದಿರುತ್ತಾನೆ,ಈಗ್ಗೆ ಎರಡು ವರ್ಷಗಳ ಹಿಂದೆ ಅಪಘಾತವಾಗಿ ಕಾಲಿಗೆ ರಾಡ್ ಹಾಕಿದ್ದು ಅದನ್ನು ತೆಗೆಸಲು ಸೋಮವಾರ ಸಹೋದರನ ಜೊತೆ ದ್ವಿಚಕ್ರ ವಾಹನದಲ್ಲಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಹೋಗಿ ವೈದ್ಯರು ಸಿಗದೆ ಊರಿಗೆ ಹೋಗಲು ವಾಪಸ್ಸು ಬರುತ್ತಿರಬೇಕಾದರೆ ಮಧ್ಯಾನಃ ಸುಮಾರು 1 ಗಂಟೆ ಸಮಯದಲ್ಲಿ ಕೋಲಾರ-ಶ್ರೀನಿವಾಸಪುರ ನಡುವೆ ದಳಸನೂರು ಗೇಟ್ ನಂತರ ಹೊಸಹಳ್ಳಿ ಕ್ರಾಸ್ ಗೂ ಮುಂಚಿನ ಕಾಡಿನ ನಡುವೆ ನಿರ್ಜನ ಪ್ರದೇಶದಲ್ಲಿ ವೇಗವಾಗಿ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ದ್ವಿಚಕ್ರ ವಾಹನ ಅಡ್ಡಗಟ್ಟಿ ಚಾಕು,ಲಾಂಗುಗಳನ್ನು ತೊರಿಸಿ ಬೆದರಿಸಿದ್ದು ಈ ಸಂದರ್ಭದಲ್ಲಿ ಬಂದಂತ ದಾರಿ ಹೊಕರು ಯಾರು ಸಹಾಯಕ್ಕೆ ಬಾರದೆ ಹೋದರು, ಅದೇ ಮಾರ್ಗದಲ್ಲಿ ಬಂದಂತ ರಾಜ್ಯಸಾರಿಗೆ ಸಂಸ್ಥೆ ಬಸ್ಸು ಸಹ ನಿಲ್ಲಿಸದೆ ಹೋದ ಹಿನ್ನಲೆಯಲ್ಲಿ ಅಪರಿಚಿತರು ನನ್ನನ್ನು ಬೆದರಿಸಿ ,ಆಸ್ಪತ್ರೆ ಖರ್ಚಿಗೆ ತಗೆದುಕೊಂಡು ಹೋಗಿದ್ದ 50000 ಹಣ ಕಿತ್ತುಕೊಂಡು ನನ್ನ ಹಾಗು ನನ್ನ ಸಹೋದರನನ್ನು ಪಕ್ಕದ ಬೆಲಿ ಪೊದೆಯೊಳಗೆ ನೂಕಿ ಹೊರಟು ಹೋದರು ಎಂದು ದೂರು ದಾಖಲಿಸಿರುತ್ತಾನೆ.
ಮಾರ್ಗ ಕೇಳಿದ್ದ ಅಪರಿಚಿತರು
ಜಾಲಪ್ಪ ಆಸ್ಪತ್ರೆಯಿಂದ ಕೋಲಾರಮಾರ್ಗವಾಗಿ ಶ್ರೀನಿವಾಸಪುರಕ್ಕೆ ವಾಪಸ್ಸು ಬರುತ್ತಿರಬೇಕಾದರೆ ಮುದುವಾಡಿ ನಂತರ ನಿರ್ಜನ ಪ್ರದೇಶದಲ್ಲಿ ನನ್ನ ದ್ವಿಚಕ್ರ ವಾಹನ ನಿಲ್ಲಿಸಿದ ಅಪರಿಚಿತರು ಶ್ರೀನಿವಾಸಪುರಕ್ಕೆ ಮಾರ್ಗ ಯಾವುದು ಇನ್ನೂ ಎಷ್ಟು ದೂರ ಇದೆ ಎಂದೆಲ್ಲ ಮಾಹಿತಿ ಪಡೆದರು ನಂತರ ಮತ್ತೇ ಹೊಸಹಳ್ಳಿಗೂ ಮುಂಚಿತವಾಗಿ ನನ್ನ ವಾಹನ ತಡೆದು ದರೋಡೆ ಮಾಡಿದರು ಎಂದು ಶ್ರೀರಾಮಪ್ಪ ವಿವರಿಸುತ್ತಾರೆ.
ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಇನ್ಸಪೇಕ್ಟರ್ ರವಿಕುಮಾರ್ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿರುತ್ತಾರೆ.