ಶ್ರೀನಿವಾಸಪುರ:ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫ್ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಸಾಮಜಿಕವಾಗಿ ಜವಬ್ದಾರಿಯುತವಾದಂತ ಹೆಜ್ಜೆ ಇಟ್ಟು ಉತ್ತಮ ಭವಿಷ್ಯತ್ತು ರೂಪಿಸಿಕೊಳ್ಳುವಂತೆ ಮಾಜಿ ಶಾಸಕ ವೆಂಕಟಶಿವಾರೆಡ್ದಿ ಹೇಳಿದರು ಅವರು ತಾಲೂಕಿನ ನೆಲವಂಕಿ ಪಂಚಾಯಿತಿಯ ಗೋರವಿಮಾಕಲಹಳ್ಳಿ ಗ್ರಾಮದಲ್ಲಿ ಬಾಲಕೀಯರ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಎನ್.ಎಸ್.ಎಸ್ ಶಿಭಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಕ ಕಲಿಕೆಗೆ ಸಮಯ ನಿಗದಿಮಾಡಿದಂತೆ ಸಾಮಾಜಿಕ ಕಳಕಳಿಯಿಂದ ತಮ್ಮ ಕೈಲಾದ ಸೇವೆಯನ್ನು ಗೌರವಿತವಾಗಿ ಸಮಾಜದಲ್ಲಿ ಸಲ್ಲಿಸುವಂತೆ ಹೇಳಿದರು.
ದುಬಾರಿಯಾಗುತ್ತಿದೆ ಶಿಕ್ಷಣ ವ್ಯವಸ್ಥೆ
ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ದುಬಾರಿಯಾಗುತ್ತಿದೆ ಎಂದು ವಿಷಾಧಿಸಿದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪೋಷಕರ ಪರಿಸ್ಥಿಯನ್ನು ಹತ್ತಿರದಿಂದ ಬಲ್ಲವನಾಗಿದ್ದು ಬೆಂಗಳೂರ0ತ ಮಹಾನಗರಗಳಲ್ಲಿ ಖಾಸಗಿ ಶಾಲಾ ಕಾಲೇಜಿಗಳಲ್ಲಿ ದುಬಾರಿ ಫೀಜು ಕಟ್ಟಿ ಜೊತೆಗೆ ಹಾಸ್ಟಲ್ ಹಾಗೆ ಪೀಜಿಗಳಿಗೂ ಹಣ ಕಟ್ಟುವುದು ಇಂದಿನ ದಿನಗಳಲ್ಲಿ ದುಬಾರಿ ಎಂದರು.ಇವೆಲ್ಲವನ್ನು ಅರಿತ ನಾನು ಎರಡು ದಶಕಗಳ ಹಿಂದೆಯೇ ನಾನು ಅಧಿಕಾರದಲ್ಲಿದ್ದಾಗ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಶ್ರೀನಿವಾಸಪುರ ಪಟ್ಟಣದಲ್ಲಿ ಬಹುತೇಕ ಸರ್ಕಾರದ ಪದವಿ,ಪದವಿ ಪೂರ್ವ ಕಾಲೇಜೂಗಳು ಗ್ರಾಮೀಣ ಹೈಸ್ಕೂಲ್ ಗಳ ಸ್ಥಾಪನೆ ಹಾಗೆ ಹಳೇಯ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾಗಿ ಹೇಳಿದರು ಈಗ ಸರ್ಕಾರಗಳು ಹೆಚ್ಚಿನ ಶೈಕ್ಷಣಿಕ ಅನಕೂಲಗಳನ್ನು ಒದಗಿಸುತ್ತಿದೆ ಸರ್ಕಾರಿ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಶೈಕ್ಷಣಿಕವಾಗಿ ಅಭಿವೃದ್ದಿಯಾಗುವಂತೆ ತಿಳಿಸಿದ ಅವರು ಗ್ರಾಮೀಣ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸದಾ ಕಾಲ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಜೆ.ಡಿ.ಎಸ್ ರಾಜ್ಯ ಕಾರ್ಯದರ್ಶಿ ಭಿಮಗುಂಟಪಲ್ಲಿ ಶಿವಾರೆಡ್ಡಿ ಉಪನ್ಯಾಸಕ ಮಂಜುನಾಥರೆಡ್ದಿ,ನೆಲವ0ಕಿ ಪಂಚಾಯಿತಿ ಸದಸ್ಯ ತೂಪಲ್ಲಿ ಮಧು, ಶ್ರೀನಿವಾಸರೆಡ್ದಿ, ಗೋರವಿಮಾಕಲಹಳ್ಳಿ ಶ್ರೀನಿವಾಸ್, ಎ.ಪಿ.ಎಂ.ಸಿ ಮಾಜಿ ಛೇರ್ಮನ್ ಜಯರಾಮರೆಡ್ದಿ,ಉದ್ಯಮಿ ನಾರಯಣಸ್ವಾಮಿ,ಕಾಳಾಚಾರಿ,ತಮ್ಮರೆಡ್ದಿ ಮುಂತಾದವರು ಇದ್ದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Friday, November 22