ಕೋಲಾರ: ದ್ವಿಚಕ್ರ ಸವಾರಿಗೆ ಹೆಲ್ಮೆಟ್ ಕಡ್ದಾಯ ಗೊಳಿಸಿ ಸರ್ವೋಚ್ಛ ನ್ಯಾಯಲಯ ಆದೇಶಿಸಿದೆ ರಾಜ್ಯ ಪೋಲಿಸ್ ಇಲಾಖೆ ಜಾರಿಮಾಡಬೇಕು ಎಂದು ಸುತ್ತೋಲೆ ಹೊರಡಿಸಿದೆ ಇದರ ಪರಿಣಾಮ ಬೆಂಗಳೂರು ನಗರ ಸೇರಿದಂತೆ ಕೆಲವೊಂದು ನಗರಗಳಲ್ಲಿ ಪೋಲಿಸರ ಒತ್ತಾಯಕ್ಕೆ ದ್ವಿಚಕ್ರ ಸವಾರು ಕಡ್ದಾಯ ಅಲ್ಲದಿದ್ದರು ಹೆಲ್ಮೆಟ್ ಧರಿಸಿ ಒಡಾಡುತ್ತಿದ್ದಾರೆ.
ದ್ವಿಚಕ್ರ ವಾಹನಗಳು ಅಪಘಾತಕ್ಕೆ ಒಳಗಾಗುವುದು ಗ್ರಾಮೀಣ ಭಾಗದಲ್ಲೆ ಹೆಚ್ಚು,ಹಳ್ಳ ದಿನ್ನೆ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಹಳ್ಳ ತಪ್ಪಿಸಲು ಹೋಗಿ ಎದರು ವಾಹನಕ್ಕೆ ಡಿಕ್ಕಿ ಹೊಡೆದು ಸಾವನಪ್ಪುತ್ತಿರುವುದು ಗ್ರಾಮೀಣ ಭಾಗದ ದ್ವಿಚಕ್ರ ವಾಹನ ಸವಾರರೆ. ಇದರಿಂದಾಗಿ ಗ್ರಾಮೀಣ ಅರೆ ಗ್ರಾಮೀಣ ಪ್ರದೇಶಗಳಲ್ಲೂ ದ್ವಿಚಕ್ರ ಸವಾರಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕಿದೆ ಎನ್ನುವುದು ಅರಿವು ಬಳಗದ ಶಿವಪ್ಪ ಅವರ ವಾದ.
ಕೋಲಾರ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ದಟ್ಟಣೆ ಹೆಚ್ಚುತ್ತಿದೆ ಅದರಲ್ಲೂ ಕರೋನಾ ನಂತರದಲ್ಲಿ ಕಚೇರಿ ಸೇರಿದಂತೆ ಫ್ಯಾಕ್ಟರಿಗಳಲ್ಲಿ ಕೆಲಸ ಕಾರ್ಯನಿರ್ವಹಿಸುವಂತ ಮಹಿಳೆಯರುವರು ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಬಳಸುತ್ತಿದ್ದಾರೆ ಇದರ ಪರಿಣಾಮ ದ್ವಿಚಕ್ರ ವಾಹನ ದಟ್ಟಣೆ ಹೆಚ್ಚಾಗಿದೆ, ಅದರೆ ಬಹುತೇಕರು ವಾಹನ ಸಂಚಾರ ಸುರಕ್ಷ ಕ್ರಮಗಳನ್ನು ಪಾಲಿಸುತ್ತಿಲ್ಲ ಅದರಲ್ಲಿ ಮೊದಲನೆಯದು ಹೆಲ್ಮೆಟ್ ಧಾರಣೆ ಹಾಗಾಗಿ ಅಪಘಾತ ಸಂದರ್ಭದಲ್ಲಿ ಮೊದಲು ಪೆಟ್ಟಾಗುವುದೇ ತಲೆಗೆ ಅದರೂ ಯಾರು ಜಾಗ್ರತೆ ವಹಿಸದೆ ಇರುವುದು ದುರಂತ! ಮಹಿಳೆಯರೆ ಅಲ್ಲ ಪುರಷರು ಸಹ ಹೆಲ್ಮೆಟ್ ಧರಿಸಲು ನಿರ್ಲಕ್ಷ್ಯ ವಹಿಸುತ್ತಾರೆ ತಲೆಗಿಂತ ತಲೆಕೂದಲಿನ ಸ್ಟೈಲ್ ಹಾಳಾಗುತ್ತದೆ ಎಂದು ಯುವಕರ ಮಾತು ಇದರ ಪರಿಣಾಮ ಬಹುತೇಕ ದ್ವಿಚಕ್ರ ವಾಹನ ಸವಾರರು ರಸ್ತೆ ಅಪಘಾತಕ್ಕೆ ಒಳಗಾದವರು ತಲೆಗೆ ಪೆಟ್ಟು ಮಾಡಿಕೊಂಡು ಸಾವನಪ್ಪುತ್ತಿರುವ ಘಟನೆಗಳು ಸಾಮಾನ್ಯವಾಗುತ್ತಿದೆ ಇದನ್ನು ತಡೆಯಲು ದ್ವಿಚಕ್ರ ಸವಾರಿ ಮಾಡುವಂತವರಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕು ಎಂಬುದು ಅರಿವು ಬಳಗದ ಮನವಿ.
ಆಂತಕ ಸೃಷ್ಠಿಸುತ್ತಿರುವ ಅಪ್ರಾಪ್ತತರ ಬೈಕ್ ಸವಾರಿ
ಕರೋನಾ ನಂತರದಲ್ಲಿ ಸಾರ್ವಜನಿಕ ಸಾರಿಕೆ ಬಳಕೆ ವಿಚಾರದಲ್ಲಿ ವಿದ್ಯಾರ್ಥಿಗಳ ಪೋಷಕರ ಉದಾರಿತನದ ಹಿನ್ನಲೆಯಲ್ಲಿ ಮನೆ ಕಡೆ ಒಂದಷ್ಟು ಅನಕೂಲ ಇದ್ದರೆ ಪೋಷಕರೆ ಮಕ್ಕಳಿಗೆ ಬೈಕ್ ಕೊಡಿಸಿ ಕಾಲೇಜಿಗೆ ಕಳಿಸುತ್ತಿದ್ದಾರೆ, ಹಿಂದೆಲ್ಲ ಬೆಂಗಳೂರು ಮಹಾನಗರದಲ್ಲಿ ಅನಕೂಲವಂತರ ಮಕ್ಕಳು ತಮ್ಮ ಐಶಾರಾಮಿ ಗತ್ತು ಗೈರತ್ತು ತೊರ್ಪಡಿಕೆಗೆ ಸ್ಟೈಲ್ ಆಗಿ ಕಾಲೇಜಿಗೆ ಬೈಕ್ ನಲ್ಲಿ ಬರುವುದು ಇತ್ತು ಬದಲಾದ ಕಾಲಘಟ್ಟದಲ್ಲಿ ಕರೋನಾ ಸಂದರ್ಬದಲ್ಲಿ ಶುರುವಾದ ಜಾಡ್ಯ ಈಗ ಅಪ್ರಾಪ್ತರ ಬೈಕ್ ಸವಾರಿಗೆ ದಾರಿ ಮಾಡಿಕೊಟ್ಟಿದೆ ಇದೊಂದು ಆತಂಕದ ವಿಚಾರವಾಗಿದ್ದು ಅಪ್ರಾಪ್ತರು ಬೈಕ್ ನಲ್ಲಿ ಒಬ್ಬರು ಇಬ್ಬರು ಹೋಗುವುದಲ್ಲ ಮೂರು-ನಾಲ್ಕು ಮಂದಿ ಸವಾರಿ ಮಾಡುತ್ತಾರೆ ಹೋಗುವ ಸ್ಫೀಡು ಹೆಚ್ಚಿರುತ್ತದೆ ಪೋಷಕರಲ್ಲೂ ಆತಂಕ ಇರುತ್ತದೆ ತೋರ್ಪಡಿಸಲು ಸಾಧ್ಯವಾಗದೆ ಅನುಭವಿಸಲು ಆಗದ ಪರಿಸ್ಥಿತಿ ಅವರದು ಇತ್ತೀಚಿಗೆ ಮುಳಬಾಗಿಲು ನಗರದಲ್ಲಿ ಇಬ್ಬರು ವಿದ್ಯಾರ್ಥಿಗಳು ಬೈಕ್ ಓಡಿಸುವಾಗ ತಲೆಗೆ ಪೆಟ್ಟು ಮಾಡಿಕೊಂಡು ಸಾವನ್ನಪ್ಪಿದ್ದು ಇಂತಹ ಅನಾಹುತಗಳನ್ನು ತಡೆಯಲು ದ್ವಿಚಕ್ರ ಸವಾರಿ ಮಾಡುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಕಟ್ಟುನಿಟ್ಟಾಗಿ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮುಳಬಾಗಿಲು ಅಮರಜ್ಯೋತಿ ಶಾಲೆಯ ವಿಧ್ಯಾರ್ಥಿನಿ ನಮನ ಮತ್ತು ತಂಡ ತಮ್ಮ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಹಿ ಮಾಡಿಸಿದ್ದ ಮನವಿಯನ್ನು ಅರಿವು ಬಳಗದ ಶಿವಪ್ಪ ಮೂಲಕ ಕೋಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ತಲುಪಿಸಿದ್ದಾರೆ.
ಮನವಿ ಸ್ವೀಕರಿಸಿದ ಕೋಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾರಾಯಣ ಅವರು ತಕ್ಷಣ ತಮ್ಮ ಅಧೀನದ ಎಲ್ಲಾ ಪೋಲಿಸ್ ಠಾಣೆಗಳಿಗೂ ಹೆಲ್ಮೆಟ್ ಧಾರಣೆ ಮಾಹಿತಿ ಕೊಡಲು ಸೂಚಿಸುವ ಮೂಲಕ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನುತ್ತಾರೆ ಶಿವಪ್ಪ. ಮನವಿ ಪತ್ರ ಸಲ್ಲಿಸಲು ರೈತ ಮುಖಂಡ ಅಬ್ಬಣಿ ಶಿವಣ್ಣ, ಪೊ. ರವೀಂದ್ರ, ಡಾ.ಸಿ.ಎ.ರಮೇಶ್ ಜೊತೆಗೂಡಿದ್ದರು.