ಬೆಂಗಳೂರು : ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಯೊಬ್ಬ ತಾನು ವಾಸವಿದ್ದ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಹನುಮಂತ ನಗರದಲ್ಲಿ ನಡೆದಿರುತ್ತದೆ.
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ಬಿಎಂಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಇಂಜಿನಿಯರಿಂಗ್ ಮೊದಲ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ ಆದಿತ್ಯಾಸಿಂಗ್ (19) ಎಂದು ತಿಳಿದುಬಂದಿದೆ. ಆದಿತ್ಯ ಸಿಂಗ್ ಮೂಲತಃ ಉತ್ತರಪ್ರದೇಶ ರಾಜ್ಯದವನಾಗಿದ್ದು, ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದ ಈತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಹನುಮಂತನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಿದ್ಯಾರ್ಥಿಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮೃತದೇಹದ ಪೋಸ್ಟ್ ಮಾರ್ಟಂ ಬಳಿಕ ಪೋಷಕರಿಗೆ ಶವ ಹಸ್ತಾಂತರಿಸಿರುತ್ತಾರೆ.
ಜನವರಿಯಲ್ಲೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ!
ಕಳೆದ ಜನವರಿ 18ರಂದು ಬಿಎಂಎಸ್ ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ರೆಡ್ಡಿ ಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ನಾಲ್ಕನೇ ವರ್ಷದ ಏರೋಸ್ಪೇಸ್ ವಿದ್ಯಾರ್ಥಿಯಾಗಿದ್ದ ಅಕ್ಷಯ್ ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ತಿಳಿದು ಬಂದಿರಲಿಲ್ಲ. ಕಾಲೇಜು ಆಡಳಿತ ಮಂಡಳಿಯ ಟಾರ್ಚರ್ನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಒಂದೇ ತಿಂಗಳ ಅಂತರದಲ್ಲಿ ಎರಡನೇ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ಈತನ ಸಾವಿಗು ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
Breaking News
- ಛತ್ರಪತಿ ಶಿವಾಜಿ ಮಹಾರಾಜ್ ಮಗ ಶಂಭಾಜಿಯ ಶೌರ್ಯದ chaava ಸಿನಿಮಾ
- ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು!
- ತಿರುಮಲ ಕಾಲು ಮಾರ್ಗದಲ್ಲಿ ಅಕ್ಕನವರುಗಳ ದೇವಾಲಯ
- ಕುರುಡುಮಲೆ ಗಣೇಶ ದೇಗುಲದಲ್ಲಿ ಸಂಕಷ್ಟ ಚತುರ್ಥಿ ವಿಶೇಷ ಪೂಜೆ
- ಶ್ರೀನಿವಾಸಪುರ-ಕೋಲಾರ ರಸ್ತೆಯಲ್ಲಿ ವಾಹನ ಬಡಿದು ಜಿಂಕೆ ಸಾವು
- ಸಿರಿವಂತ ಉದ್ಯಮಿ ಎಲೋನ್ ಮಸ್ಕ್ ಮಕ್ಕಳಿಗೆ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ!
- Tragedy:ಪ್ರೇಮಿಗಳ ದಿನದಂದೆ ಯುವತಿ ಮೇಲೆ ಆಸಿಡ್ ದಾಳಿ!
- ಸೇಡು ತಿರಿಸಿಕೊಳ್ಳಲು ಮದ್ಯಸೇವಿಸಿ ಬಸ್ ಅಪಹರಿಸಿದ ಭೂಪ!
- Srinivaspur:ಫಾರ್ಮಾಸುಟಿಕಲ್ಸ್ ಪಾರ್ಕ್ ಸಚಿವ ಎಂ.ಬಿ.ಪಾಟಿಲ್!
- visa ಬಾಲಾಜಿ ದೇವಾಲಯದ ಅರ್ಚಕ ಹಾಗು ಕುಟುಂಬದ ಮೇಲೆ ದಾಳಿ!
Thursday, February 20