ಶ್ರೀನಿವಾಸಪುರ:ವಿದ್ಯಾರ್ಥಿ ಜೀವನದಲ್ಲಿ ಶ್ರಮದಾನದಂತ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಸೇವಾ ಸಂಸ್ಕಾರ ಬೆಳಸಿಕೊಳ್ಳಿ ಎಂದು ತಹಶೀಲ್ದಾರ್ ಶೀರಿನ್ ತಾಜ್ ವಿದ್ಯಾರ್ಥಿಗಳಿಗೆ ಕರೆ ಇತ್ತರು.ಅವರು ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಗಾಂಧಿ ಜಯಂತಿ ಅಂಗವಾಗಿ ನಾಗರಿಕರಿಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೋಂಡು ಮಾತನಾಡಿದರು, ಪ್ರಧಾನಮಂತ್ರಿ ಮೋದಿ ವಿಶಿಷ್ಟ ಕಾರ್ಯಕ್ರಮಕ್ಕೆ ಕರೆ ನೀಡಿದ್ದು ಇದಕ್ಕೆ ಸ್ಪಂದಿಸಿರುವ ವಿದ್ಯಾರ್ಥಿನಿಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೋಂಡು ಶ್ರಮದಾನ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ದೇವಾಲಯದ ಆವರಣದಲ್ಲಿ ವರ್ಷಾನುಗಟ್ಟಲೆಯಿಂದ ಬಿದಿದ್ದ ಟ್ರಾಕ್ಟರ್ ಗಟ್ಟಲೆ ಕಸ ಕಡ್ಡಿ ಗಿಡ-ಗಂಟಿಗಳನ್ನು ತಗೆದ ವಿದ್ಯಾರ್ಥಿನಿಯರು ಸ್ವತಃ ತಾವೆ ಪುರಸಭೆ ಟ್ರಾಕ್ಟರ್ ಗೆ ತುಂಬಿದರು.ವಿದ್ಯಾರ್ಥಿನಿಯರ ಶ್ರದಾನಕ್ಕೆ ಮನಸೋತ ತಹಶೀಲ್ದಾರ್ ಶೀರಿನ್ ತಾಜ್ ಹಾಗು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ ಅವರು ಸಹ ಸಲಕರಣೆ ಹಿಡಿದು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ ಮಾತನಾಡಿ ಪ್ರಧಾನಮಂತ್ರಿ ಮೋದಿ ಕರೆಯಂತೆ ಗಾಂಧಿ ಜಯಂತಿ ಮುನ್ನಾದಿನದಂದು
ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಬೃಹತ್ ಸ್ವಚ್ಚತಾ ಅಭಿಯಾನದಲ್ಲಿ ಶ್ರೀನಿವಾಸಪುರ ಪಟ್ಟಣದ ಜನತೆ ಪಾಲ್ಗೋಂಡು ನಿಮ್ಮ ಪ್ರದೇಶ ನಿಮ್ಮದೆ ರಸ್ತೆಗಳು ಸೇರಿದಂತೆ ಇನ್ನಿತರೆ ಧಾರ್ಮಿಕ ಪ್ರದೇಶಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಶುಚಿಗೊಳಿಸುವ ಚಟುವಟಿಕೆಗಳಲ್ಲಿ ಕೈ ಜೋಡಿಸುವಂತೆ ಹೇಳಿದರು.
ನಾಗರಿಕರ ನೇತೃತ್ವದ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಎನ್ಜಿಒ,ಖಾಸಗಿ ಸಂಸ್ಥೆಗಳು ಸಂಘ ಸಂಸ್ಥೆಗಳು ಸಹಕಾರ ನೀಡಲು ಮನವಿ ಮಾಡಿದರು.
ಶ್ರಮದಾನ ಕಾರ್ಯಕ್ರಮದಲ್ಲಿ ಪುರಸಭೆ ಸ್ವಚ್ಚತ ರಾಯಭಾರಿ ಮಾಯಬಾಲಚಂದ್ರ,ಪುರಸಭೆ ಆರೋಗ್ಯ ನೀರಿಕ್ಷಕ ರಮೇಶ್,ಕಂದಾಯ ಇಲಾಖೆ ನಿರಿಕ್ಷಕ ಮುನಿರೆಡ್ಡಿ,ಪುರಸಭೆ ಆರೋಗ್ಯ ಮೆಲ್ವಿಚಾರಕ ಬಾಲಕೃಷ್ಣ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಜುಳಾ,ಉಪನ್ಯಾಸಕ ಗೋಪಾಲ್,ಶಂಕರೇಗೌಡ ಮುಂತಾದವರು ಇದ್ದರು.