ಶ್ರೀನಿವಾಸಪುರ:ತಾಲೂಕಿನ ಯದರೂರು ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಸುಮಾರು 1200 ಕ್ಕೂ ಹೆಚ್ಚು ಎಕರೆ ಪ್ರದೇಶ ಭೂ ಸ್ವಾಧೀನಕ್ಕೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಒಂದೆಡೆ ರೈತರು ಜೀವನಕ್ಕಾಗಿ ನಮಗೆ ಕೃಷಿ ಭೂಮಿ ಬೇಕು ಎಂದು ಪಟ್ಟುಹಿಡಿದಿದ್ದಾರೆ. ಆದರೆ ಸರಕಾರ ಭೂಮಿಯ ಜಾತಕ ಹಿಡಿದು ಕೈಗಾರಿಕೆಗಳನ್ನು ಮಾಡಿಯೇ ಸಿದ್ಧ ಎಂದು ಕೂತಂತಿದೆ.
ಸದ್ಯದ ಅಂಕಿ-ಅಂಶಗಳ ಪ್ರಕಾರ 1200 ಎಕರೆ ಪ್ರದೇಶದಲ್ಲಿ ಫಲವತ್ತಾದ ಜಮೀನು, ಇದ್ದು ಪುಷ್ಪಕೃಷಿ ರೇಷ್ಮೆ, ಮಾವು, ಕೋಳಿ ಫಾರಂ ಇದೆ. ಆದರೆ ಇಲ್ಲಿ ಕೃಷಿಗಿಂತ ಕೈಗಾರಿಕೆ ಪ್ರದೇಶವಾದರೆ ಮಾತ್ರ ಈ ಭಾಗದ ಅಭಿವೃದ್ಧಿ ಸಾಧ್ಯ ಎನ್ನುವುದು ಸರಕಾರದ ವಾದ.
ಶೇಷಾಪುರಗೋಪಾಲ್ ಮತ್ತು ಬೇಟಪ್ಪ ನಡುವೆ ಮಾತಿನ ಜಟಾಪಟಿ
ಈ ಎಲ್ಲಾ ಬೆಳವಣಿಗೆಗಳ ನಡುವೆ ತಾಲೂಕಿನ ಪ್ರಮುಖ ಇಬ್ಬರು ಕಾಂಗ್ರೆಸ್ ಮುಖಂಡರ ನಡುವೆ ಯದರೂರಿನಲ್ಲಿ ಕೈಗಾರಿಕೆ ಸ್ಥಾಪನೆ ಕುರಿತಾಗಿ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ ಆರಂಬದಲ್ಲಿ ಇಬ್ಬರ ನಡುವಿನ ಮಾತಿನ ಸಮರ ಸಭ್ಯತೆಯಿಂದ ಕೂಡಿತ್ತು ಇತ್ತಿಚಿಗೆ ಇಬ್ಬರು ಮುಖಂಡರು ನಡುವೆ ವೈಯುಕ್ತಿಕ ಪ್ರತಿಷ್ಠೆಯಾಗಿ ತಗೆದುಕೊಂಡ ಪರಿಣಾಮ ಮಾತಿನ ಯುದ್ದವೆ ಶುರುವಾದಂತಿದೆ ತಮ್ಮ ಹಳೆಯ ಗೆಳೆತನದ ನಡುವಿನ ಸಮಯದ ರಾಜಕೀಯ ಸಂಭಂದಗಳಲ್ಲಿ ನಡೆದಂತ ಮಾತುಗಳೆ ಈಗ ಅಸ್ತ್ರಗಳನ್ನಾಗಿಸಿಕೊಳ್ಳಲಾಗಿದೆ. ಒಬ್ಬರು ಶೇಷಾಪುರ ಗೋಪಾಲ್ ಮತ್ತೊಬ್ಬರು ಬೇಟಪ್ಪ ಇಬ್ಬರು ಯಾರಿಗೆ ಯಾರು ಕಡಿಮೆ ಇಲ್ಲದಂತ ಕುಳಗಳು.
ಯಲ್ದೂರು ಹೋಬಳಿಯ ಪ್ರಮುಖ ಕಾಂಗ್ರೆಸ್ ಮುಖಂಡ ಹಾಗು ಶಾಸಕ ವೆಂಕಟಶಿವಾರೆಡ್ದಿ ಪರಮಾಪ್ತ ಶೇಷಾಪುರಗೋಪಾಲ್ ಹೇಳುವಂತೆ ನಮ್ಮ ಭಾಗದಲ್ಲಿ ರೈತರು ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕೆಂದರೆ ಕೃಷಿಯಿಂದ ಸಾಧ್ಯ ಆಗುವುದಿಲ್ಲ ಇದು ಜಗಕ್ಕೆ ಗೊತ್ತಿರುವ ಸತ್ಯ ಕೃಷಿಯೇತರ ಚಟುವಟಿಕೆಗಳಿಗೆ ಒತ್ತು ಕೊಡುವ ಮೂಲಕ ಈ ಭಾಗವಾಗಿ ಕೈಗಾರಿಕ ವಲಯ ಸ್ಥಾಪನೆ ಆಗಬೇಕು ಮಾಲೂರು,ನರಸಾಪುರ ಮತ್ತು ವೇಮಗಲ್ ಭಾಗಗಳಲ್ಲಿ ಕೈಗಾರಿಕೆಗಳು ಆಗಿ ರೈತರ ಬದುಕು ಬಹಳಷ್ಟು ಮಟ್ಟಿಗೆ ಸುಧಾರಿಸಿದೆ ಅಲ್ಲೂ ಸಹ ಆರಂಭದಲ್ಲಿ ಅಡ್ಡಿ-ಅತಂಕ ಇತ್ತು ನಂತರದಲ್ಲಿ ರೈತರು ಅರ್ಥಮಾಡಿಕೊಂಡು ಸಹಕಾರ ನೀಡಿದರು ಎಲ್ಲಾ ಕಡೆ ಸರ್ಕಾರಿ ವಲಯದ ಕೈಗಾರಿಕೆಗಳು ಬರಲು ಸಾಧ್ಯವಿಲ್ಲ. ಖಾಸಗಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಒಳ್ಳೆಯದು ಖಾಸಗಿ ಉದ್ಯಮದಾರರನ್ನು ಸ್ಥಳೀಯ ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ನಿಯಂತ್ರಿಸುವ ರೀತಿ ನೀತಿಗಳನ್ನು ರೂಪಿಸುವ ಜವಾಬ್ದಾರಿ ಚುನಾಯಿತರಾದ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಮಾಡುತ್ತಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಶ್ರೀನಿವಾಸಪುರದ ಎದುರೂರಿನಲ್ಲಿ ಮಾತ್ರ ಭೂಮಿ ಸ್ವಾಧಿನ ಪಡಿಸಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಸಾವಿರಾರು ಎಕರೆ ಜಾಗಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಬ್ಯಾಟಪ್ಪನಂತವರ ನಿರ್ದೇಶನದಂತೆ ಕಾರ್ಯಕ್ರಮ ರೀತಿ ನೀತಿಗಳನ್ನು ರೂಪಿಸುವುದಿಲ್ಲ.ನಾವು ಯಾರೆಂದು ಗೊತ್ತಿರುವುದಿಲ್ಲ. ಭೂ ಮಾಫಿಯಾಗಳ ಮಾತು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳು ಕೇಳುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ನಾವು ಇನ್ನೊಬ್ಬರನ್ನು ದೂರುವುದು ಸರಿಯಲ್ಲ ತಾಲೂಕಿನ ಯುವ ಸಮುದಾಯ ಇಲ್ಲಿಂದ ವಲಸೆ ಹೋಗದೆ ಇಲ್ಲೆ ಇರಲಿ ಎಂಬ ಪ್ರಯತ್ನ ನಮ್ಮದು ಎನ್ನುತ್ತಾರೆ.
ಇದಕ್ಕೆ ಕೋಲಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹಿರಿಯ ಕಾಂಗ್ರೆಸ್ ಮುಖಂಡ ಬೇಟಪ್ಪ ಹೇಳುವುದೇನೆಂದರೆ ಯದರೂರು ಭಾಗದಲ್ಲಿ ಕಣ್ಣಿಗೆ ಕಾಣಿಸುವಂತೆ ರೈತರು ಕೃಷಿ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಜಗಜಾಹಿರ ತೋಟಗಾರಿಗೆ ಕೃಷಿಯಲ್ಲಿ ಲಾಭ ಕೊಡುತ್ತಿರುವ ಮಾವು ಟಮ್ಯಾಟೊ ಬೆಳೆ ಸೇರಿದಂತೆ ನಾನಾ ಬಗೆಯ ತರಕಾರಿ ಬೆಳೆಗಳನ್ನು ಬೆಳೆಯುತ್ತ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದೀವಿ ಕೇವಲ ದಾಖಲೆಗಳನ್ನು ಇಟ್ಟುಕೊಂಡು ರೈತರನ್ನು ಒಕ್ಕಲೆಬ್ಬಿಸಲು ಬಂದರೆ ಅವರ ಗತಿಯೇನು? ಕೆಲವರು ತಮ್ಮ ವೈಯುಕ್ತಿಕ ಸ್ವಾರ್ಥಕ್ಕಾಗಿ ನಾವು ಜಮೀನು ಕೊಡಲ್ಲ.ಸರ್ಕಾರಕ್ಕೆ ಹಾಗು ಶಾಸಕರಿಗೆ ನಮ್ಮ ರೈತರ ಜಮೀನಿನ ಮೇಲೆ ಕಣ್ಣು ಬಿದ್ದಿದೆ ಇದು ಕೆಲ ಪಟ್ಟಭದ್ರರು ಶಾಸಕರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿರುವುದು ಅನ್ಯಾಯ ದಯವಿಟ್ಟು ರೈತರ ಸಾಗುವಳಿ ಜಮೀನು ಬಿಟ್ಟು ಸರ್ಕಾರಿ ಜಮೀನು ಬಳಸಿಕೊಂಡು ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದರೆ ಒಳ್ಳೆಯದು ಇತ್ತ ರೈತರಿಗೆ ಅನುಕೂಲವಾಗಲಿದೆ ಎಂಬ ವಾದವನ್ನು ಮಂಡಿಸುತ್ತಾರೆ.
Breaking News
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
- ಕೆಟ್ಟು ನಿಂತ ಬೆಂಗಳೂರು-ಕೋಲಾರ ಮೆಮೊ ರೈಲು ,ರಾತ್ರಿವೇಳೆ ಪರದಾಡಿದ ಪ್ರಯಾಣಿಕರು!
Friday, April 4