ಕೋಲಾರ:ನಾನು ಹುಟ್ಟಿ ಆಟ ಆಡಿ ಬೆಳೆದ ನನ್ನೂರಲ್ಲಿ ನಾನು ಕಲಿತ ವಿದ್ಯೆಗೆ ಗೌರವ ಸಿಗಲಿಲ್ಲ ಎಂಬ ನೋವು ನನ್ನ ಕಾಡುತ್ತಿದೆ ಎಂದು ಖ್ಯಾತ ತಮಟೆ ಕಲಾವಿದ ಪದ್ಮಶ್ರಿ ಪ್ರಶಸ್ತಿ ಪುರಸೃತ ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ನೋವು ಹಂಚಿಕೊಂಡರು ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಅವರನ್ನು ಕೋಲಾರದ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದಾಗ ಅದನ್ನು ಸ್ವೀಕರಿಸಿ ಮಾತನಾಡಿದರು.
ತಮಟೆ ವಾದನಕ್ಕೆ ಪ್ರಶಸ್ತಿ,ಸೇರಿದಂತೆ ಅನೇಕ ಪ್ರಶಸ್ತಿಗಳು ನನಗೆ ಲಭಿಸಿದ್ದರೂ ನನ್ನ ಸ್ವಂತ ಗ್ರಾಮದಲ್ಲಿ ನನ್ನ ಕಲಾರಾಧನೆಗೆ ಗೌರವ ಇಲ್ಲದಂತೆ ಕಾಣುತ್ತಾರೆ,ನಾನು ದೇಶ ವಿದೇಶಗಳಲ್ಲಿ ನನ್ನ ತಮಟೆ ವಾದ್ಯದ ಕಲೆಯನ್ನು ಪ್ರದರ್ಶನ ನೀಡಿರುತ್ತೇನೆ ಜನತೆ ಅಪಾರವಾಗಿ ಮೆಚ್ಚಿರುತ್ತಾರೆ ಚ್ಚುಗೆ ಆದರೂ ನನ್ನ ಸ್ವಂತ ಗ್ರಾಮದಲ್ಲಿ ನನ್ನ ವಿದ್ಯಗೆ ಗೌರವ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ನನ್ನ ತಂದೆ ಪಾಪಣ್ಣ ಮೃತರಾದಾಗ ನನಗೆ 15 ವರ್ಷ ವಯಸ್ಸು, ಆಗ ತಂದೆಯ ವೃತ್ತಿಯನ್ನು ಮುಂದುವರೆಸುವಂತೆ ಗ್ರಾಮಸ್ಥರು ತಿಳಿಸಿದರು. ನಾನು ಅವಿದ್ಯಾವಂತ, ಶಾಲೆಗೆ ಹೋಗಿಲ್ಲ, ನಂತರ ಸಾಕ್ಷರತದಲ್ಲಿ ೪ನೇ ತರಗತಿಯ ಓದನ್ನು ಮುಗಿಸಿದೆ. 15 ವರ್ಷದಲ್ಲಿ ತಮಟೆಯನ್ನು ಕೈಗೆತ್ತಿಕೊಂಡವನು ಇಲ್ಲಿಯ ತನಕ ನಾನು ತಮಟೆಯನ್ನು ಬಾರಿಸುತ್ತಲೆ ತಮಟೆಯ ಮೂಲಕ ಜನರನ್ನು ಮಾತನಾಡಿಸಿದ್ದೇನೆ ಎಂದರು. ನನ್ನ ತಮಟೆ ವಾದ್ಯವನ್ನು ಗುರುತಿಸಿ ಮೈಸೂರು ದಸರಾ ಸೇರಿದಂತೆ ಅನೇಕ ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದ್ದರು, ನಂತರ ಜಪಾನ್, ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತಮಟೆ ವಾದ್ಯವನ್ನು ನುಡಿಸಿ ಬಂದಿದ್ದೇನೆ, ನನ್ನ ತಮಟೆ ವಾದ್ಯಕ್ಕೆ ಜನರು ಕುಣಿದು ಕುಪ್ಪಳಿಸಿದ್ದಾರೆ, ಹಿಂದೆ ತಮಟೆ ಬಾರಿಸಿ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಈಗ ಅದು ಬದಲಾವಣೆಯಾಗಿದೆ, ನಾನು ಅನೇಕ ಜನರಿಗೆ ತಮಟೆ ವಾದ್ಯವನ್ನು ಕಲಿಸಿಕೊಟ್ಟಿದ್ದೇನೆ, ಈಗಿನ ಕಾಲದ ತಮಟೆ ವಾದ್ಯದ ಕಲಿಕೆಯ ಬಗ್ಗೆ ಆಸಕ್ತಿ ಕಡಿಮೆ ಇದೆ. ಸರ್ಕಾರ ತಮಟೆ ವಾದ್ಯದ ಶಾಲೆಯನ್ನು ಪ್ರತಿ ಜಿಲ್ಲೆಯಲ್ಲಿ ತೆರೆಯಬೇಕು ಎಂದರು.ತಮಟೆ ವಾದ್ಯದಲ್ಲಿ 33 ವಿಧಾನಗಳಿರುತ್ತದೆ. 15 ವರ್ಷಗಳಿಂದ ತಮಟೆಯನ್ನು ಬಾರಿಸುತ್ತಾ ಬಂದಿದ್ದೇನೆ, ನನಗೆ ಇದರಿಂದ ತೃಪ್ತಿಯಿದೆ, ಇದರಿಂದ ಅಸಡ್ಡೆ ಎನಿಸಿಲ್ಲ, ಈ ಹಿಂದೆ ತಮಟೆಗೆ ಚರ್ಮ ವಾದ್ಯವಿತ್ತು, ಈಗ ಬದಲಾವಣೆಯಾಗಿ ಪ್ಲಾಸ್ಟಿಕ್ ಬಂದಿದೆ, ಆದರೆ ಚರ್ಮ ವಾದ್ಯವೇ ಶ್ರೇಷ್ಠ ಅದರಲ್ಲೂ ಮುಖ್ಯವಾಗಿ ಮೇಕೆ ಚರ್ಮದಲ್ಲಿ ತಯಾರು ಮಾಡಿರುವ ತಮಟೆಯಲ್ಲಿ ಹೆಚ್ಚು ಸ್ವರಗಳನ್ನು ನುಡಿಸಬಹುದು ಎಂದರು.
ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿಗೆ ತಮಟೆಯನ್ನು ಪ್ರಸ್ತುತಪಡಿಸಿ ಅದರ ಕಲೆಯ ಸಾಧನೆಗೆ ಮತ್ತು ಬದುಕನ್ನಾಗಿ ಪಿಂಡಿಪಾಪನಹಳ್ಳಿ ಮುಂನಿವೆಂಕಟಪ್ಪ ಜೀವನದಲ್ಲಿ ರೂಡಿಸಿಕೊಂಡಿದ್ದಾರೆ. ಅನೇಕರು ಪ್ರಶಸ್ತಿಗಳ ಹಿಂದೆ ಬೀಳುತ್ತಾರೆ. ಆದರೆ ಮುನಿವೆಂಕಟಪ್ಪನವರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಕಲೆಗಳಿಗೆ ಪ್ರಸಿದ್ದವಾದ ದೇವರಮಳ್ಳೂರಿನಲ್ಲಿ ಮುನಿವೆಂಕಟಪ್ಪನವರ ತಮಟೆ ವಾದ್ಯವನ್ನು ಜಾನಪದ ಅಕಾಡಮಿಯ ಹೆಚ್.ಎಲ್.ನಾಗೇಗೌಡ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದರು. ಸರ್ಕಾರ ಪ್ರಶಸ್ತಿಗಳನ್ನು ಒಂದು ಕಡೆ ನೀಡಿದರೆ ಮತ್ತೊಂದು ಕಡೆ ಅವರಿಗೆ ಸರ್ಕಾರ ಮಂಜೂರು ಮಾಡಿದ ಬಿಡಿಎ ನಿವೇಶನವನ್ನು ಕಿತ್ತುಕೊಳ್ಳುವ ಹಂತಕ್ಕೆ ಹೋಗಿರುವುದು ವಿಷಾಧನೀಯವಾಗಿದೆ, ಬಡ ಕಲಾವಿದನಿಗೆ ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಕಸಿದುಕೊಳ್ಳುವಂತಹ ಕೆಲಸ ಸರ್ಕಾರ ಮಾಡುತ್ತಿರುವುದು ವಿಷಾದನೀಯ ಎಂದರು. ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಮುನಿವೆಂಕಟಪ್ಪ ಅವರು ತಮಟೆ ವಾದನವನ್ನು ಕರಗತ ಮಾಡಿಕೊಂಡಿರುವುದರ ಜೊತೆಗೆ ತಮಟೆ ಮೂಲಕ ಮಾತನಾಡುತ್ತಾರೆ. ಕಲೆಗಳ ದೇವರು ಶಿವ ಮೊದಲ ಬಾರಿಗೆ ಡಮರುಗ ಮೂಲಕ ನಾದವನ್ನು ಹೊರಡಿಸಿದರು. ತಾಳ ವಾದ್ಯಗಳ ತಾಯಿ ತಮಟೆಯಾಗಿದೆ. ಈ ಕಲೆಯಲ್ಲಿ ಸಾಧನೆ ಮಾಡಿರುವ ಮುನಿವೆಂಕಟಪ್ಪ ಅವರನ್ನು ಶಿವರಾತ್ರಿಯಂದು ಸಂಘದ ವತಿಯಿಂದ ಅಭಿನಂದಿಸಿರುವುದು ಶ್ಲಾಘನೀಯ ಎಂದರು. ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರು ಪಡೆಯುವ ಮೂಲಕ ಅವಳಿ ಜಿಲ್ಲೆಗಳ ಕೀರ್ತಿಯನ್ನು ಅಂತರಾಷ್ಟ್ರೀಯಯ ಮಟ್ಟದಲ್ಲಿ ಬೆಳಗಿದ್ದಾರೆ. ಈ ನಿಟ್ಟಿನಲ್ಲಿ ಯುವ ಶಕ್ತಿ ಸಹ ಕಲೆಯನ್ನು ಮೈಗೂಡಿಸಿಕೊಂಡು ಮತ್ತಷ್ಟು ಪ್ರಶಸ್ತಿಗಳನ್ನು ಪಡೆಯುವಂತಾಗಲಿ ಎಂದು ಆಶಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎಸ್.ಚಂದ್ರಶೇಖರ್, ಎನ್.ಮುನಿವೆಂಕಟೇಗೌಡ, ಕೆ.ಆಸೀಫ್ಪಾಷ, ಎ.ಬಾಲನ್, ಎನ್.ಸತೀಶ್, ಶ್ರೀಕಾಂತ್, ಕಿರಣ್, ಗೋಪಿ, ಉಪನ್ಯಾಸಕ ಜೆ.ಜಿನಾಗರಾಜ್, ಆದಿಮ ಹಾ.ಮಾ.ರಾಮಚಂದ್ರಪ್ಪ, ವಿಜ್ಞಾನ ಲೇಖಕ ಹೆಚ್.ಎ.ಪುರುಷೋತ್ತಮರಾವ್, ರೈತ ಸಂಘದ ಅಬ್ಬಣಿ ಶಿವಪ್ಪ, ಆನಂದಕುಮಾರ್, ಮತ್ತು ತಂಡ, ಶಣೈ, ಒಬಿಸಿ ಮಂಜುನಾಥ್, ಗಾಂಧಿನಗರ ನಾರಯಣಸ್ವಾಮಿ, ಬಿ.ಬೈಚಪ್ಪ, ಗೂಳಿಗಾನಹಳ್ಳಿ ನಾಗರಾಜ್, ಪಟೇಲ್ ಪ್ರವೀಣ್, ವೇಣು, ಬಾಬು, ಸುಬ್ರಮಣಿ ಸೇರಿದಂತೆ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Saturday, November 23