ನ್ಯೂಜ್ ಡೆಸ್ಕ್:– ಪುನೀತ್ ರಾಜ್ಕುಮಾರ್ ಮಾಡುತ್ತಿದ್ದ ಸಮಾಜಮುಖಿ ಕಾರ್ಯಕ್ಕೆ ಸಹಕಾರ ನೀಡುತ್ತೇನೆ ಎಂದು ತಮಿಳು ನಟ ವಿಶಾಲ್ ಹೇಳಿದ್ದಾರೆ ಅವರು ಭಾನುವಾರ ರಾತ್ರಿ ತೆಲಗು ಚಿತ್ರರಂಗ ಪುನೀತ್ ಗೆ ಶ್ರದ್ಧಾಂಜಲಿ ಅರ್ಪಿಸಲು ನಡೆಸಿದ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡುತ್ತಾ ಪುನೀತ್ ಓದಿಸುತ್ತಿದ್ದ 1800 ಮಕ್ಕಳ ಜವಾಬ್ದಾರಿ ಮುಂದಿನ ವರ್ಷದಿಂದ ನನ್ನದು ಎಂದು ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ ಎಂದು ವಿಶಾಲ್ ಘೋಷಣೆ ಮಾಡಿರುತ್ತಾರೆ, ಪುನೀತ್ ಕೇವಲ ಸ್ನೇಹಿತ ಅಲ್ಲ ಬಹುದೊಡ್ಡ ಮಾನವತಾವಾದಿ ಎಂದು ಬಣ್ಣಿಸಿದ್ದಾರೆ, ಪುನೀತ್ ರಾಜ್ಕುಮಾರ್ ನಿಧನ ಕೇವಲ ಸಿನಿಮಾ ರಂಗಕ್ಕೆ ಅಲ್ಲ ಇಡಿ ದಕ್ಷಿಣಭಾರತಕ್ಕೆ ಅಗಿರುವ ನೋವು ಎಂದು ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಕೇವಲ ಮಕ್ಕಳನ್ನು ಓದಿಸುತ್ತಿರಲಿಲ್ಲ, ಸದ್ದಿಲ್ಲದೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿದ್ದರು ಎಂದರು.
ತಮಿಳುನಟನಾಗಿ ಖ್ಯಾತರಾಗಿರುವ ವಿಶಾಲ್@ವಿಶಾಲರೆಡ್ಡಿ ಮೂಲತಃ ಬೆಂಗಳೂರಿನವರು ಅಪ್ಪು ಮೇಲಿನ ಅಭಿಮಾನದೊಂದಿಗೆ ತಾವು ತೆಗೆದುಕೊಂಡಿರುವ ನಿರ್ಣಯವನ್ನು ಅತ್ಯಂತ ವಿನಮ್ರವಾಗಿ ಪ್ರಕಟಿಸಿದ್ದಾರೆ. ವಿಶಾಲ್ ಅವರ ಈ ಸಹೃದಯೀ ನಿರ್ಧಾರದ ಬಗ್ಗೆ ಕನ್ನಡಿಗರು ಅಭಿಮಾನದ ಹೊಳೆ ಹರಿಸಿದ್ದಾರೆ. ಹೃದಯತುಂಬಿ ಶಹಬ್ಬಾಸ್ ವಿಶಾಲ್ ಎಂದು ಕನ್ನಡಿಗರು ಹರಿಸಿದ್ದಾರೆ.ಸ್ಥಳದಲ್ಲಿಯೇ ವಿಶಾಲ ಹೃದಯದಿಂದ ನಿರ್ಣಯ ತಗೆದುಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿಶಾಲ್ ರನ್ನು ಕನ್ನಡಿಗರು ಕೊಂಡಾಡಿದ್ದಾರೆ.ನಿಮ್ಮ ಸ್ಪಂದನೆ ಅದ್ಭುತ ಎಂದಿರುವ ಕನ್ನಡಿಗರು, ಇದೇ ವೇಳೆ ಬೇರೆ ಯಾವೊಬ್ಬ ನಟ, ರಾಜಕಾರಣಿಗೂ ಇಂತಹ ಸದಾಲೋಚನೆ ಬರಲಿಲ್ಲವಲ್ಲಾ ಎಂದೂ ವಿಷಾದ ವ್ಯಕ್ತಪಡಿಸಿದ್ದಾರೆ. ಇದರಿಂದ ವಿಶಾಲ್ ಮೇಲೆ ಕನ್ನಡಿಗರಿಗೆ ಅಭಿಮಾನ ಹೆಚ್ಚಿದಿಯಂತೆ.
ಪುನೀತ್ ರಾಜ್ಕುಮಾರ್ ನಿಧನಕ್ಕೆ ಕಣ್ಣೀರಿಟ್ಟ ರೈತಾಪಿ ಮಹಿಳೆ
ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ಶ್ರೀರಂಗಪಟ್ಟಣ ತಾಲ್ಲೂಕು ಸಬ್ಬನಕುಪ್ಪೆ ಗ್ರಾಮದ ರೈತ ಮಹಿಳೆ ಭಾರತಿ ಕಣ್ಣೀರಿಟ್ಟರು. ಭಾರತಿ ಕುಟುಂಬಕ್ಕೆ ಪುನೀತ್ ಆರ್ಥಿಕ ನೆರವು ನೀಡಿದ್ದರು. ಭಾರತಿ ಅವರ ಪತಿ, ಕುಮಾರ್ 2015ರ ಜು.22ರಂದು ಆತ್ಮಹತ್ಯೆಗೆ ಶರಣಾಗಿದ್ದರು.
2015ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಶೂಟಿಂಗ್ ನಂತರ ಪುನೀತ್ ರಾಜ್ಕುಮಾರ್ ಜನರ ಕಷ್ಟಸುಖ ಕೇಳುತ್ತಿದ್ದರು. ‘ದೊಡ್ಮನೆ ಹುಡುಗ’ ಶೂಟಿಂಗ್ ವೇಳೆ ಆತ್ಮಹತ್ಯೆಗೆ ಶರಣಾಗಿದ್ದ ರೈತರ ಕುಟುಂಬಗಳಿಗೆ ಪುನೀತ್ ಆರ್ಥಿಕ ನೆರವು ನೀಡಿದ್ದರು. ಈ ವೇಳೆ ಭಾರತಿ ಅವರೂ ಪುನೀತ್ ರಿಂದ ನೆರವು ಪಡೆದಿದ್ದರು. ಅಪ್ಪು ಬದಿಕಿದ್ರೆ ನಮ್ಮಂತಹ ಬಡ ಕುಟುಂಬಗಳಿಗೆ ಇನ್ನಷ್ಟು ನೆರವು ಸಿಗ್ತಿತ್ತು. ದೇವರು ಇಷ್ಟು ಬೇಗ ಅವರನ್ನು ಕರೆಸಿಕೊಂಡದ್ದಾನೆ ಎಂದು ಭಾರತಿ ಕಣ್ಣೀರುಹಾಕಿದ್ದಾರೆ.
ಬಾಲಕಿ ಶಸ್ತ್ರ ಚಿಕಿತ್ಸೆಗೆ ಸಹಾಯ
ಪುನೀತರ ಸಾಮಾಜ ಸೇವೆಯಲ್ಲಿ ಚನ್ನಗಿರಿ ತಾಲ್ಲೂಕಿನ ಕಣಸಾಲು ಬಡಾವಣೆಯ ಬಾಲಕಿ ಪ್ರೀತಿ ಸಹ ಸಹಾಯ ಪಡೆದಿರುತ್ತಾಳೆ, ಕುಮಾರ್ ಹಾಗೂ ಮಂಜುಳಾ ದಂಪತಿಯ ಪುತ್ರಿ ಪ್ರೀತಿ 2017ರಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಳು.ಆರ್ಥಿಕ ಸಮಸ್ಯೆ ಹೊಂದಿದ್ದ ದಂಪತಿ ಮಾಧ್ಯಮಗಳ ಮೂಲಕ ಸಹಾಯ ಯಾಚಿಸಿದ್ದರು. ವಿಷಯ ತಿಳಿದುಕೊಂಡ ಪುನೀತ್ ಅವರಿಗೆ ಆಸ್ಪತ್ರೆಯ ಶಸ್ತ್ರಚಿಕಿತ್ಸೆಯ ಪೂರ್ತಿ ಬಿಲ್ 12.50 ಲಕ್ಷವನ್ನು ಭರಿಸಿದ್ದರು ಎಂದು ಪ್ರೀತಿ ಅವರ ಮಾವ ಹನುಮಂತಪ್ಪ ಹೇಳಿದ್ದಾರೆ.