ನ್ಯೂಜ್ ಡೆಸ್ಕ್: ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಮದ್ಯಂತರ ಬಜೆಟ್ ನಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ವರ್ಗವಾರು ವಿಂಗಡನೆ ಮಾಡಲಾಗಿದೆ. ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ಮೋದಿ ಸರ್ಕಾರದ 2ನೇ ಅವಧಿಯ ಹಾಗೂ ನೂತನ ಸಂಸತ್ನ ಭವನದದಲ್ಲಿ ಮೊದಲ ಬಾರಿಗೆ ಮಂಡಿಸಿರುವ ಬಜೆಟ್ ನಲ್ಲಿ ಟಾರ್ಗೆಟ್ 2047 ಎಂಬ ಪರಿಕಲ್ಪನೆ ಸ್ಪಷ್ಟವಾಗಿದೆ.
ದೇಶದ ಆರ್ಥಿಕತೆಯಲ್ಲಿ ಅಗಾಧ ಬೆಳವಣಿಗೆಯಾಗಿದ್ದು ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂಕಷ್ಟ ಇದೆಯಾದರು ಭಾರತ ದೇಶ ಆರ್ಥಿಕತೆಯಲ್ಲಿ ಸ್ಥಿರವಾಗಿದೆ,ಮೋದಿ ಸಾರಥ್ಯದ ಆಡಳಿತದಲ್ಲಿ ಭಾರತ ಆರ್ಥಿಕಾಭಿವೃದ್ದಿ ಕಂಡಿದೆ ಎಂದು ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್ ಬಜೆಟ್ ವೇಳೆ ಪ್ರಸ್ತಾಪಿಸಿದ್ದಾರೆ.
ರೈತಾಪಿವರ್ಗ,ಬಡವರು,ಯುವಕರು ಹಾಗು ಮಹಿಳೆಯರು ಎಂದು ವರ್ಗವಾರು ವಿಂಗಡನೆ ಮಾಡುವುದರೊಂದಿಗೆ ಜಾತಿ, ಧರ್ಮ, ಆರ್ಥಿಕ ಭೇದವಿಲ್ಲದೆ ಎಲ್ಲ ಸಮುದಾಯದವರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ 2047 ಹೊತ್ತಿಗೆ ದೇಶವನ್ನು ಬಡತನ ಮುಕ್ತ ಮಾಡುವ ಗುರಿ ಹೊಂದಲಾಗಿದ್ದು,ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ನಾನ್ನೂಡಿಯಂತೆ ‘ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಹಾಗೂ ಜೈ ಅನುಸಂಧಾನ್’ ಮೋದಿ ಸರ್ಕಾರದ ಮಂತ್ರ ಘೋಷದಂತೆ ಬಡ್ಜೆಟ್ ಮಂಡಿಸಲಾಗಿದೆ.ಜೊತೆಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವುದಾಗಿ ನಿರ್ಮಲಸೀತಾರಾಮನ್ ಹೇಳಿದ್ದಾರೆ.
ರಕ್ಷಣಾ ಇಲಾಖೆಗೆ ಬರೋಬ್ಬರಿ 11 ಲಕ್ಷ ಕೋಟಿ ರೂ.ರಿಜರ್ವ್ ಮಾಡಿದ್ದು, 80 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಣೆ ಮಾಡಲಾಗಿದೆ,
ಕೃಷಿ, ರೈತ ಕಲ್ಯಾಣ ಸಚಿವಾಲಯಕ್ಕೆ 1.27 ಲಕ್ಷ ಕೋಟಿ ಅನುದಾನ ಒದಗಿಸಿದ್ದು,ಒಂದು ಕೋಟಿ ಮಹಿಳೆಯರು ‘ಲಕ್ಷಾಧಿಪತಿ ದೀದಿ’ ಆಗಲು ಹಣ ಮೀಸಲು,ಆಶಾ, ಅಂಗನವಾಡಿ ಕಾರ್ಯಕರ್ತರಿಗೂ ಆಯುಷ್ಮಾನ್ ಭಾರತ ಯೋಜನೆ ವ್ಯಾಪ್ತಿಗೆ ತರಲಾಗಿದ್ದು,
ಕುಶಲ ಕರ್ಮಿಗಳಿಗಾಗಿ ವಿಶೇಷ ಯೋಜನೆ ಜಾರಿ,ದೇಶದ ಒಂದು ಕೋಟಿ ಮನೆಗಳಿಗೆ ಸೌರ ವಿದ್ಯುತ್ ಯೋಜನೆ ಕಲ್ಪಿಸುವ ಯೋಜನೆ ಜಾರಿಯಾಗಲಿದೆ,ಮುಂದಿನ 5 ವರ್ಷಗಳಲ್ಲಿ 3 ಕೋಟಿ ಹೊಸ ಮನೆ ನಿರ್ಮಾಣ,ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಚಾರ್ಜಿಂಗ್ ಸ್ಟೇಷನ್ ಹೆಚ್ಚಳಕ್ಕೆ ಆದ್ಯತೆ ಎಂದು ಬಜೆಟ್ ಭಾಷಣದಲ್ಲಿ ಆರ್ಥಿಕ ಮಂತ್ರಿಗಳು ಹೇಳಿದ್ದಾರೆ.
ಆದಾಯ ತೆರಿಗೆ ಮಿತಿಯಲ್ಲಿ ಈ ವರ್ಷ ಯಾವುದೇ ಬದಲಾವಣೆ ಇಲ್ಲ,ಆದಾಯ ಸ್ಲ್ಯಾಬ್ಗಳನ್ನು ಅದೇ ರೀತಿ ಮುಂದುವರಿಸಲಾಗಿದೆ. 2023ರವರೆಗೆ ಒಟ್ಟು 5 ಲಕ್ಷ ರೂ. ತನಕದ ಆದಾಯಕ್ಕೆ ವಿನಾಯಿತು ಲಭಿಸುತ್ತಿತ್ತು. ಹೊಸ ಮಾದರಿಯಲ್ಲಿ (new regime) 7 ಲಕ್ಷ ರೂ.ಗೆ ವಿಸ್ತರಿಸಲಾಗಿತ್ತು. 5 ಲಕ್ಷ ರೂ. ತನಕದ ಆದಾಯಕ್ಕೆ 12,500 ರೂ. ತನಕ ತೆರಿಗೆ ರಿಬೇಟ್ ಸಿಗುತ್ತಿತ್ತು. ಹೀಗಾಗಿ ವೈಯಕ್ತಿಕ ತೆರಿಗೆದಾರರು 7 ಲಕ್ಷ ರೂ. ತನಕದ ಆದಾಯಕ್ಕೆ ತೆರಿಗೆ ನೀಡದೆ ಇರಬಹುದು.
ಪ್ರವಾಸೋದ್ಯಮಕ್ಕೆ ಅದ್ಯೆತೆ
ಲಕ್ಷ ದ್ವೀಪ ಸೇರಿದಂತೆ ಹಲವೆಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ,40 ಸಾವಿರ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತನೆ, ದೇಶದ ಹಲವು ನಗರಗಳಲ್ಲಿ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಅನುದಾನ
ಸಣ್ಣ ನಗರಗಳಿಗೂ ಉಡಾನ್ ಯೋಜನೆಡಿಯಲ್ಲಿ ವಿಮಾನಯಾನ ಸೌಲಭ್ಯ ಒದಗಿಸುವ ಗುರಿ ಎಂದು ಹೇಳಿದ್ದಾರೆ.
ಟಸ್ಸಾರ್ ಸೀರೆಯಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್
ಮಾಜಿ ಪ್ರಧಾನಿ ಇಂದಿರಾಗಾಂಧಿ ನಂತರ ದೇಶದ ಬಜೆಟ್ ಮಂಡಿಸಿದ ಎರಡನೇ ಮಹಿಳೆ ಎನ್ನುವ ಹೆಗ್ಗಳಿಕೆ ಪಾತ್ರರಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತದಲ್ಲಿ ಪ್ರಥಮ ಮಧ್ಯಂತರ ಬಜೆಟ್ ಮಂಡಿಸಿದ ಮೊದಲ ಮಹಿಳಾ ಸಚಿವೆಯಾಗಿದ್ದಾರೆ ಐದು ಬಾರಿ ಪೂರ್ಣ ಪ್ರಮಾಣದ ಬಜೆಟ್ ಹಾಗು ಒಮ್ಮೆ ಮಧ್ಯಂತರ ಮಂಡಿಸಿದ ದಾಖಲೆ ಬರೆದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ವಿಶೇಷ ದಾಖಲೆಗಳಿಗೆ ಸಾಕ್ಷಿಯಾಗಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿ ಬಾರಿ ಬಜೆಟ್ ಮಂಡಿಸುವಾಗಲೂ ಉಡುವ ಸೀರೆ ಎಲ್ಲರ ಗಮನ ಸೆಳೆಯುತ್ತದೆ. ಸತತ 6 ಬಾರಿ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವಾಲಯದ ಕಚೇರಿಗೆ ಆಗಮಿಸಿದ ಅವರು ಸಾಂಪ್ರದಾಯಿಕ ನೀಲಿ ಹಾಗೂ ಕ್ರೀಮ್ ಮಿಶ್ರಿತ ಬಣ್ಣದ ರೇಷ್ಮೆ ವಿಶಿಷ್ಟ ವಿನ್ಯಾಸ ಮತ್ತು ಗೋಲ್ಡನ್ ಶೀನ್ ಹೊಲಿಗೆಗಳ ಮೂಲಕ ರಚಿಸಲಾದ ಕೈಮಗ್ಗದ ಟಸ್ಸಾರ್ ರೇಷ್ಮೆ ಸೀರೆಯನ್ನು ಧರಿಸಿದ್ದರು. ಆಫ್-ವೈಟ್ ಅಥವಾ ಕೆನೆ ಬಣ್ಣವು ಹಣಕಾಸು ಸಚಿವರಿಗೆ ಅಚ್ಚುಮೆಚ್ಚಿನದ್ದಾಗಿದೆ. ಏಕೆಂದರೆ ಅವರು ಆಗಾಗ ಈ ಬಣ್ಣದ ಸೀರೆ ಧರಿಸುವುದು ಸಾಮನ್ಯವಂತೆ ಅವರ ಭಾರತೀಯ ಜವಳಿ ಮೇಲಿನ ಪ್ರೀತಿ ಎಲ್ಲರಿಗೂ ಗೊತ್ತಿರುವಂಥದ್ದೇ,ಪ್ರತಿ ಬಾರಿಯೂ ಗ್ರಾಮೀಣ ಕೈ ಕುಸುರಿಯ ಸೀರೆಯುಟ್ಟು ಎಲ್ಲರ ಗಮನ ಸೆಳೆಯುತ್ತಾರೆ. ಅವರು ಸ್ಥಳೀಯ ಕೈಮಗ್ಗಗಳಲ್ಲಿ ನೇಯ್ದಿರುವ ಬಟ್ಟೆಗಳನ್ನು ಬಳಸುವಂತೆ ಹೇಳುತ್ತಾರೆ.