ತೆಲಗು ನಟ ರವಿತೆಜ ರಾಜಮೌಳಿ ಕಾಂಬಿನೇಷನಲ್ ಬಂದಂತ ತೆಲುಗು ಸಿನಿಮಾ ವಿಕ್ರಮಾರ್ಕುಡು ಸಿನಿಮಾದಲ್ಲಿ ಖಳನಾಯಕನ ಮನೆಗೆ ಭದ್ರತೆಗೆ ಬಂದಂತ ಅಧಿಕಾರಿಯನ್ನು ತನ್ನ ಮಗನೊಂದಿಗೆ ನೃತ್ಯಮಾಡಲು ಖಳನಾಯಕ ಆದೇಶಿಸುತ್ತಾನೆ ಇದಕ್ಕೆ ಮಂತ್ರಿ ವೇಷಧಾರಿ ಜಯಪ್ರಕಾಶ್ ಸಹ ಹುಕುಮ್ ಸೂಚಿಸಿದ್ದು ಅಂತಹುದೆ ಘಟನೆ ಬಿಹಾರದ ಪಾಟ್ನಾದಲ್ಲಿ ಪ್ರತಿಷ್ಟಿತ ರಾಜಕಾರಣಿ ಮನೆಯಲ್ಲಿ ನಡೆದಿದೆ.ವಿಕ್ರಮಾರ್ಕುಡು ಸಿನಿಮಾದಲ್ಲಿ ಮಗನೊಂದಿಗೆ ಖಳನಾಯಕ ನೃತ್ಯ ಮಾಡಲು ಹೇಳಿದರೆ ಬಿಹಾರದ ರಾಜಕಾರಣಿ ತನಗೆ ಭದ್ರತೆ ಒದಗಿಸಲು ಬಂದಂತ ಪೋಲಿಸ್ ಅಧಿಕಾರಿಯನ್ನು ನೃತ್ಯಮಾಡಲು ಹೇಳಿರುವಂತ ವಿಡಿಯೋ ವೈರಲ್ ಆಗಿದೆ.
ನ್ಯೂಜ್ ಡೆಸ್ಕ್:ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರ ಮಗ ತೇಜ್ ಪ್ರತಾಪ್ ಯಾದವ್ ಶನಿವಾರ ಪಾಟ್ನಾದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಹೋಳಿ ಆಚರಿಸಿದರು. ಈ ಕಾರ್ಯಕ್ರಮದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಯಾದವ್ ಅವರು ಸಮಾರಂಭದ ಸಮಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ನೃತ್ಯ ಮಾಡಲು ಸೂಚಿಸುತ್ತಿರುವ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋ ಕ್ಲಿಪ್ನಲ್ಲಿ,ಶ್ರೀಯಾದವ್ ವೇದಿಕೆಯ ಮೇಲೆ ಕುಳಿತಿದ್ದು, ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಶ್ರೀ ಯಾದವ್ ಅವರು “ಏ ಸಿಪಾಹಿ, ಏ ದೀಪಕ್, ಏಕ್ ಗಾನಾ ಬಜಾಯೆಂಗೆ ಉಸ್ಪೆ ತುಮ್ಕೋ ತುಮ್ಕಾ ಲಗಾನಾ ಹೈ. ಬುರಾ ಮತ್ ಮನೋ ಹೋಳಿ ಹೈ. ಆಜ್ ನಹಿ ಥುಮ್ಕಾ ಲಗಾವೋಗೆ ತೋ ಸಸ್ಪೆಂಡ್ ಕರ್ ದಿಯೇ ಜಾವೋಗೆ ಹೇ, ಪೋಲಿಸ್ ದೀಪಕ್, ನಾನು ಹಾಡನ್ನು ಹೇಳುತ್ತೇನೆ ನೀನು ನೃತ್ಯ ಮಾಡಬೇಕಾಗುತ್ತದೆ. ಇದು ಹೋಳಿ ನೃತ್ಯ ಮಾಡು ನೀನು ಇಂದು ನೃತ್ಯ ಮಾಡದಿದ್ದರೆ, ನಿನ್ನನ್ನು ಅಮಾನತ್ತು ಮಾಡಿಸಲಾಗುತ್ತದೆ ಎಂದು ಹೇಳಿರುವುದನ್ನು ಕೇಳಬಹುದಾಗಿದ್ದು ಹೋಳಿ ಆಚರಣೆಯ ಸಂದರ್ಭದಲ್ಲಿ ಆರ್ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಮಾಡಿದ ಭಾಷಣ ಈಗ ಬಿಹಾರದಲ್ಲಿ ರಾಜಕೀಯ ವಿವಾದವಾಗುತ್ತಿದೆ.ತೇಜ್ ಪ್ರತಾಪ್ ವೇದಿಕೆಯ ಮೇಲೆ ಮೈಕ್ರೊಫೋನ್ ಹಿಡಿದು ನೃತ್ಯ ಮಾಡಲು ಆದೇಶಿಸಿ ಬೆದರಿಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ತೀವ್ರ ಆಕ್ರೋಶ ವ್ಯಕ್ತ
ತೇಜಸ್ವಿ ಯಾದವ್ ಅವರ ಈ ಕ್ರಮಕ್ಕೆ ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿ ಅಂತಹ ಕ್ರಮಗಳಿಗೆ ಅವಕಾಶವಿಲ್ಲ ಎಂದು ಅವರು ಹೇಳಿರುವ ಅವರು ಲಾಲು ಅವರ ಹಿರಿಯ ಮಗನ ನಡವಳಿಕೆ ಕುರಿತಾಗಿ ಮಾತನಾಡಿ ಪೋಲೀಸ್ ಗೆ ನೃತ್ಯ ಮಾಡಲು ಆದೇಶಿಸುತ್ತಾನೆ, ಮಾಡದಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿರುವುದು ಯಾರಿಗೂ ಒಳ್ಳೆಯದಲ್ಲ ಲಾಲು ಅವರ ಕುಟುಂಬವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಜಂಗಲ್ ರಾಜ್ಯ ಮುಗಿದ ಅಧ್ಯಾಯ ಆಗಿದ್ದು ಬಿಹಾರ ಬದಲಾಗಿದೆ, ಅಂತಹ ಕೃತ್ಯಗಳಿಗೆ ಸ್ಥಾನವಿಲ್ಲ” ಎಂದು ರಂಜನ್ ಹೇಳಿದ್ದಾರೆ.
ಆರ್ಜೆಡಿ ಹೇಗೆ ಅಕ್ರಮ ಸರ್ಕಾರ ನಡೆಸುತ್ತಿದೆ ಮತ್ತು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದನ್ನು ತೋರಿಸಲು ಈ ಒಂದು ಉದಾಹರಣೆ ಸಾಕು ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ ಹೇಳಿದ್ದಾರೆ. “ತಂದೆಯಂತೆ, ಮಗ” ಇದಕ್ಕೂ ಮೊದಲು ಲಾಲು ಪ್ರಸಾದ್ ಕಾನೂನನ್ನು ತಿರುಚುವ ಮೂಲಕ ಬಿಹಾರವನ್ನು ಜಂಗಲ್ ರಾಜ್ ಆಗಿ ಪರಿವರ್ತಿಸಿದ್ದರು. “ಅವರು ಈಗ ಅಧಿಕಾರದಲ್ಲಿಲ್ಲದಿದ್ದರೂ, ಅವರ ಮಗ ಪೊಲೀಸರ ಮೇಲೆ ನೃತ್ಯ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ”
ಅಧಿಕಾರ ಇಲ್ಲದಾಗಲೆ ಆರ್ಜೆಡಿ ಯಾವರಿತಿಯಾಗಿ ದರ್ಪದಿಂದ ವರ್ತಿಸುತ್ತಾರೆ ಇನ್ನೂ ಅಧಿಕಾರಕ್ಕೆ ಬಂದರೆ ಅಧಿಕಾರಿಗಳನ್ನು ಕೈಗೊಂಬೆಗಳನ್ನಾಗಿ ಮಾಡಿಕೊಂಡು ಕಾನೂನನ್ನು ಹೇಗೆಲ್ಲಾ ದುರ್ಬಳಿಕೆ ಮಾಡಿಕೊಳ್ಳುತ್ತಾರೆ ಇದಕ್ಕಾಗಿಯೇ ಅವರನ್ನು ಅಧಿಕಾರದಿಂದ ದೂರವಿಡಬೇಕು ಎಂದಿರುತ್ತಾರೆ. ಈ ವರ್ಷದ ಅಕ್ಟೋಬರ್-ನವೆಂಬರ್ನಲ್ಲಿ ಬಿಹಾರ ವಿಧಾನಸಭಾ ಚುನಾವಣೆಗಳು ನಡೆಯಲಿವೆ.