ಕೋಲಾರ: ಗ್ರಾಮಗಳಲ್ಲಿ ದೇವಾಲಯ ನಿರ್ಮಾಣ ಮಾಡುವುದರಿಂದ ಗ್ರಾಮಗಳಲ್ಲಿ ಸೌಹಾರ್ದತೆ ಮತ್ತು ಧಾರ್ಮಿಕತೆ ಅರಿವು ಮೂಡುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಕರ್ ತಿಳಿಸಿದರು. ಅವರು ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಿರುವಾರ ಗ್ರಾಮದ ಶ್ರೀರಾಮ ದೇವಾಲಯದ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಿಡುಗಡೆಯಾಗಿರುವ 1.5 ಲಕ್ಷದ ಚೆಕ್ ವಿತರಿಸಿ ಮಾತನಾಡಿದರು, ದೇವಾಲಯ ನಿರ್ಮಾಣ ಮಾಡುವುದು ಪುಣ್ಯ ಕಾರ್ಯಗಳಲ್ಲಿ ಒಂದಾಗಿದ್ದು ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಕಾರ್ಯಗಳನ್ನು ಮಾಡುವದರಿಂದ ಭಗವಂತನ ಅನುಗ್ರಹ ಪಡೆದು ಆರೋಗ್ಯ, ಐಶ್ವರ್ಯ ಮತ್ತು ಮನಃ ಶಾಂತಿಯಯನ್ನು ಕರಿಣಿಸುತ್ತಾನೆ ಎಂದರು.
ಧಾರ್ಮಿಕ ಕೇಂದ್ರಗಳಾಗಿರುವ ದೇವಾಲಯಗಳು ಗ್ರಾಮೀಣ ಜನರ ಮನಸ್ಸಿಗೆ ನೆಮ್ಮದಿ ತರುವಂತಾಗಿದೆ. ಹಿರಿಯರು ದೇವಾಲಯಗಳಿಗೆ ಆದ್ಯತೆ ನಿಡಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಶ್ರದ್ಧೆ ಜೀವಂತವಾಗಿದೆ ಅವುಗಳನ್ನು ಉಳಸಿಕೊಂಡು ಹೊಗುವಂತ ಜವಾಬ್ದಾರಿ ಈಗಿನ ಪಿಳಿಗೆಯ ಮೇಲಿದೆ ಎಂದು ಹೇಳಿದರು.
ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವಸ್ಥ ಸಮಾಜ ನಿರ್ಮಾಣ,ಸಮುದಾಯ ಆಭಿವೃದ್ಧಿ ಸಮುದಾಯ ಭವನ ಹಾಲು ಉತ್ಪಾದಕರ ಕಟ್ಟಡ, ನಿರ್ಗತಿಕರ ಮಾಶಾಸನ, ಸುಜ್ಞಾನ ನಿಧಿ, ಗೊಶಾಲೆ, ಸಾರ್ವಜನಿಕ ಶೌಚಾಲಯ, ಶುದ್ಧ ಗಂಗಾ ಕುಡಿಯುವ ನೀರಿನ ಘಟಕ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಕುಟುಂಬಗಳ ಜನರನ್ನು ಸಂಘಟಿಸಿ ಅವರಲ್ಲಿ ಅಭಿವೃದ್ಧಿ ಎಂಬ ಕನಸುಗಳನ್ನು ಬಿತ್ತಿ ಅವುಗಳನ್ನು ನನಸು ಮಾಡುವ ಕೆಲಸ ಯೋಜನೆ ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ನಿರ್ದೇಶಕ ಸುರೇಶ್, ಶ್ರೀರಾಮ ಸೇವಾ ಟ್ರಸ್ಟ್ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಜಯರಾಮರೆಡ್ಡಿ, ಖಜಾಂಚಿ ರಘುನಾಥ ರೆಡ್ಡಿ, ನಿರ್ದೇಶಕರಾದ ಕೆ.ಸಿ.ಶ್ರೀನಿವಾರೆಡ್ಡಿ, ಪಿ.ನಾರಾಯಣಸ್ವಾಮಿ, ವಿ.ಎನ್.ನಾರಾಯಣಸ್ವಾಮಿ ಹಾಜರಿದ್ದರು.