ನ್ಯೂಜ್ ಡೆಸ್ಕ್: ಹುತ್ತದ ಮಣ್ಣು ಪ್ರಕೃತಿಯಲ್ಲಿನ ಸೃಷ್ಟಿ ಈ ಮಣ್ಣನ್ನು ರೋಗಗಳಿಗೆ ಮದ್ದಾಗಿ ಬಳಸಬಹುದು ಎಂದು ನಾಟಿ ವೈದ್ಯರುಗಳು ಸಾಬಿತುಪಡಿಸಿರುತ್ತಾರೆ.ಹುತ್ತದ ಮಣ್ಣಿನ ವೈದ್ಯವನ್ನು ಸರಳವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ.
ಹುತ್ತದ ಮಣ್ಣು ಕೀಲು ನೋವಿನ ಪರಿಹಾರಕ್ಕೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದಿಯಂತೆ ಹುತ್ತದ ಮಣ್ಣಿಗೆ ಪುಡಿ ಮಾಡಿದ ಬೆಲ್ಲ(ಹಳೆ ಕಾಲದ ಮುದ್ದೆ ಬೆಲ್ಲ ಉತ್ತಮ) ಹುಣಸೆ ಹಣ್ಣಿನ ನೀರು ಜೇನು ತುಪ್ಪ ಒಂದೇರಡು ಕಾಳು ಮೆಣಸಿನ ಪುಡಿ ಮತ್ತು ಅರಿಶಿಣ ಸೇರಿಸಿ ನೀರು ಹಾಕಿ ಲೇಪನ ಮಾಡುವಷ್ಟರ ಮಟ್ಟಿಗೆ ಬಿಸಿಮಾಡಿದ ನಂತರ ನೋವು ಇರುವ ಜಾಗಕ್ಕೆ ಬೆಚ್ಚಗಿರುವಂತೆ/ಸ್ವಲ್ಪ ಬಿಸಿ ಇರುವಂತೆ ದಿನಕ್ಕೆ ಒಂದೆರಡು ಬಾರಿ ಲೇಪನ ಮಾಡಿದರೆ ನೋವಿಗೆ ಪರಿಹಾರ ಕಾಣಬಹುದು ಎಂದು ನಾಟಿ ವೈದ್ಯರ ಅಭಿಪ್ರಾಯ.
ಚರ್ಮರೋಗಗಳಿಗೂ ಸಹಕಾರಿ
ಚರ್ಮರೋಗಕ್ಕೂ ಹುತ್ತದ ಮಣ್ಣನ್ನು ಬಳಸಬಹುದು. ಸೋರಿಯಾಸಿಸ್ ಗೂ ಕೂಡ ಪರಿಹಾರ ನೀಡುತ್ತದೆ ಹುತ್ತದ ಮಣ್ಣು, ಹುತ್ತದ ಮಣ್ಣನ್ನು ನುಣುಪಾಗಿ ಪುಡಿಮಾಡಿ ಇದನ್ನು ಗೋಮೂತ್ರದಲ್ಲಿ(ವಿಶೇಷವಾಗಿ ನಾಟಿ ಹಸುವಿನ ಗಂಜಲ)ಕಲಸಿ ಸೋರಿಯಾಸಿಸ್ ಇಲ್ಲವೇ ಇತರೆ ಚರ್ಮರೋಗ ಹರಡಿರುವ ಜಾಗಕ್ಕೆ ಲೇಪಿಸಿದರೆ ರೋಗ ಗುಣವಾಗುತ್ತದೆ ಎನ್ನುತ್ತಾರೆ.
ಸೌಂದರ್ಯವರ್ದಕವಾಗಿ ಹುತ್ತದ ಮಣ್ಣು ಉಪಯೋಗ
ಕಣ್ಣಿನ ಮೇಲ್ಭಾಗದಲ್ಲಿ ಮಣ್ಣಿನ ಪ್ಯಾಕ್ ಹಾಕಿಸಿಕೊಳ್ಳುವುದರಿಂದ ಕಣ್ಣುರಿ, ತುರಿಕೆ ಗ್ಲುಕೋಮಾ ಇರುವವರಿಗೂ ಒಳ್ಳೆಯ ಸಹಕಾರಿ. ಸೋಸಿ ಸಂಗ್ರಹಿಸಿಟ್ಟ ಹುತ್ತದ ಮಣ್ಣಿಗೆ ನೀರು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ ಬರುವುದಿಲ್ಲ ಇದ್ದ ಮೊಡವೆ ಕಲೆ ನಿವಾರಣೆಯಾಗುತ್ತದೆ ಚರ್ಮ ನುಣಪಾಗುತ್ತದೆ, ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಸಹ ನೀವಾರಿಸುತ್ತದೆ ಮತ್ತು ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ.
ಮೃತ್ತಿಕಾ (ಹುತ್ತದ ಮಣ್ಣು) ಸ್ನಾನದಿಂದ ದೇಹ ಅಹ್ಲಾದಕರವಾಗಿರುತ್ತದೆ ಮಣ್ಣಿನ ಪ್ಯಾಕ್ ಹಾಕಿಸಿಕೊಂಡರೆ ತಣ್ಣೀರಿನ ಪ್ಯಾಕ್ ಹಾಕಿಸಿಕೊಳ್ಳುವದಕ್ಕಿಂತಲೂ ಹೆಚ್ಚಾಗಿ, ದೇಹದಲ್ಲಿ ನೀರಿನಂಶ ಹೆಚ್ಚು ಕಾಲ ಉಳಿಯಲಿದಿಯಂತೆ ಜೊತೆಗೆ ಚರ್ಮದ ಮೌಲ್ಯವನ್ನು ಸರಿಯಾಗಿರಿಸುತ್ತದೆ ದೇಹದಲ್ಲಿ ಸುಗಮ ರಕ್ತ ಸಂಚಾರಕ್ಕೆ ಅನವು ಮಾಡಿಕೊಡುತ್ತದೆ.
ಮೃತ್ತಿಕಾ ಮಣ್ಣು ಹಾಕಿಸಿಕೊಳ್ಳುವುದರಲ್ಲಿ ಕೂಡ ಎರಡು ವಿಧಗಳಿದ್ದು ಮೊದಲನೆಯದು ನೇರವಾಗಿ ಮಣ್ಣನ್ನು ಲೇಪಿಸಿಕೊಳ್ಳುವುದು ಎರಡನೆಯದು ಮಣ್ಣನ್ನು ಬಟ್ಟೆಯಲ್ಲಿ ಕಟ್ಟಿ ದೇಹದ ನಿರ್ದಿಷ್ಟ ಭಾಗದ ಮೇಲೆ ಕಟ್ಟುವುದು.
ಧೀರ್ಘವಾದ ವ್ಯಾದಿಗಳು ಇರುವರು ಆಯುರ್ವೇದ ತಙ್ಞ ವೈದ್ಯರ ಸಲಹೆ ಸೂಚನೆ ಪಡೆದು ಮುಂದುವರಿಯುವುದು ಉತ್ತಮ
ನಾಟಿ ವೈದ್ಯರ ಸಲಹೆ ಪಡೆದ ಲೇಖನ:ವಿನಿತಾ ಶ್ರೀನಿವಾಸ್.