ನ್ಯೂಜ್ ಡೆಸ್ಕ್:- ನಿಮ್ಮ ಬಳಿ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಇದ್ದರೆ ತಕ್ಷಣ ಎರಡನ್ನೂ ಲಿಂಕ್ ಮಾಡಿ ಇಲ್ಲದಿದ್ದರೆ … ನಿಮ್ಮ ಹಣಕಾಸು ವ್ಯವಹಾರ ಬ್ಯಾಂಕು ಖಾತೆಗಳಿಗೆ ತೊಂದರೆಗಳು ಉಂಟಾಗಬಹುದು. ಸಂಬಂಧಿತ ವ್ಯವಸ್ಥೆ ಹಲವಾರು ದಿನಗಳಿಂದ ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ ಎಂದು ಎಚ್ಚರಿಕೆ ನೀಡುತ್ತಿದ್ದರೂ … ಇಲ್ಲಿಯವರೆಗೆ ಪ್ರಕ್ರಿಯೆಯ ಅರ್ಧದಷ್ಟು ಸಹ ಆಗಿಲ್ಲ.
ಕೇಂದ್ರೀಯ ಆದಾಯ ತೆರಿಗೆ ಮಂಡಳಿ (ಸಿಬಿಡಿಟಿ) ಪ್ಯಾನ್, ಆಧಾರ್ ಲಿಂಕ್ ಮಾಡಲು ಗಡುವನ್ನು ವಿಸ್ತರಿಸಿದ್ದು . ಈಗ ಬಹುಶಃ ಇದು ಅಂತಿಮ ದಿನಾಂಕವಾಗಿ ಜೂನ್ 30 ವರಿಗೂ ಅವಕಾಶ ನೀಡಿರುತ್ತಾರೆ.
ಭವಿಷ್ಯದಲ್ಲಿ ಪ್ಯಾನ್ ಮತ್ತು ಆಧಾರ್ ಎರಡನ್ನು ಲಿಂಕ್ ಮಾಡಲು ವಿಫಲವಾದರೆ ದಂಡಕ್ಕೆ ಕಾರಣವಾಗಬಹುದು.ಅಥಾವ
ಪ್ಯಾನ್ ಕಾರ್ಡ್ ಅಮಾನ್ಯವಾಗಬಹುದು! ಎನ್ನಲಾಗುತ್ತಿದೆ.ಆಧಾರ್ ಅನ್ನು ಪ್ಯಾನ್ ಕಾರ್ಡ್ನೊಂದಿಗೆ ಜೋಡಿಸಲು(LINK) ಮಾಡದೆ ಹೋದರೆ ಅಂತವರಿಗೆ ದಂಡ ವಿಧಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಬಹುದಾಗಿದೆ ದಂಡದ ಪ್ರಮಾಣ ಒಂದು ಸಾವಿರ ಮೀರಬಾರದು ಎನ್ನಲಾಗುತ್ತಿದೆ. ಆದಾಯ ತೆರಿಗೆ ಕಾಯ್ದೆ 1961 ಅನ್ನು ಈಗಾಗಲೇ ಈ ಮಟ್ಟಿಗೆ ತಿದ್ದುಪಡಿ ಮಾಡಲಾಗಿದ್ದು ಅದಕ್ಕೆ ಸೆಕ್ಷನ್ 234 ಹೆಚ್ ಅನ್ನು ಸೇರಿಸಲಾಗಿದಿಯಂತೆ.
ಎಲ್ಲವೂ ಸರಿಯಾಗಿದಿದ್ದರೆ ಈ ನಿಬಂಧನೆಯು 2021 ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ ಈ ಕ್ರಮದಲ್ಲಿ ಎಲ್ಲರೂ ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಿಸುವುದು ಅವಶ್ಯಕ.