- ಭಾರತದ ಪ್ರಾಚೀನ ನಗರ ಅಯೋಧ್ಯೆಯ ಮೇಲೆ
- ಮುಸ್ಲಿಂ ಆಕ್ರಮಣಕಾರರಿಂದ ಸತತವಾಗಿ 76 ಬಾರಿ ದಾಳಿ
- ಹಿಂದುಗಳ ಭಾವನೆಗಳನ್ನು ಗುರಿಯಾಗಿಸಿಕೊಂಡು ದಾಳಿ.
ನ್ಯೂಜ್ ಡೆಸ್ಕ್:ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲೊಂದು,ಶ್ರೀ ರಾಮಚಂದ್ರನ ಜನ್ಮಸ್ಥಳವಾದ ಅಯೋಧ್ಯೆಯನ್ನು ರಾಮ ಜನ್ಮಭೂಮಿ ಎನ್ನುತ್ತಾರೆ ಇದು ಉತ್ತರ ಪ್ರದೇಶದಲ್ಲಿದ್ದು ಸರಯೂ ನದಿ ತೀರದಲ್ಲಿದೆ.ಅಯೋಧ್ಯೆಯು ಭಾರತೀಯರ ಆರು ಪವಿತ್ರ ಸ್ಥಳಗಳಲ್ಲಿ ಒಂದೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ದಾಳಿಕೊರರಿಂದ ನಲುಗಿದ ರಾಮಜನ್ಮಭೂಮಿ
ರಾಮ ಈ ನೆಲದ ಆದರ್ಶ ಕೇವಲ ಭಾರತೀಯರಿಗೆ ಮಾತ್ರವಲ್ಲ ವಿಶ್ವದಲ್ಲಿನ ಜನಿಸಿದ ಯಾವುದೇ ವ್ಯಕ್ತಿಗೆ ರಾಮನೇ ಆದರ್ಶ. ಅದಕ್ಕಾಗಿಯೇ ಮರ್ಯಾದಾ ಪುರುಷೋತ್ತಮ ಎಂದು ಕರೆಯುವುದು. ಪುರುಷ ಎನ್ನುವುದು ಲಿಂಗಸೂಚಕವಲ್ಲ.ರಾಮನ ಗುಣಗಳೇ ಮಹಿಳೆಯಲ್ಲೂ ಇರಬೇಕು ಎನ್ನುವುದು ಅಪೇಕ್ಷೆ. ಸಹನೆ, ಚಾರಿತ್ರ್ಯ, ಭ್ರಾತೃತ್ವ ಭಾವ, ಗುರುಹಿರಿಯರಲ್ಲಿ ಗೌರವ, ಪತ್ನಿಯಲ್ಲಿ (ಅಥವಾ ಪತಿಯಲ್ಲಿ) ನಿಷ್ಠೆ, ಯಾವುದೇ ಸಂದರ್ಭದಲ್ಲೂ ತನ್ನ ಗಡಿಯನ್ನು ಮೀರದ ಕಾರಣಕ್ಕೆ ರಾಮನನ್ನು ಶ್ರೇಷ್ಠ ಎನ್ನಲಾಗುತ್ತದೆ. ಇಂತಹ ವ್ಯಕ್ತಿ ಜನಿಸಿದ ರಾಮಜನ್ಮಭೂಮಿಯ ಮೇಲೆ ಹಿಂದೂಗಳಿಗೆ ವಿಶೇಷ ಅಂದರೆ ಭಾವನಾತ್ಮಕವಾದ ವಿಶೇಷ ಭಕ್ತಿ ಈ ಪುಣ್ಯಭೂಮಿಯಲ್ಲಿನ ಅಯೋಧ್ಯೆಯ ರಾಮಮಂದಿರದ ಮೇಲೆ ಮುಸ್ಲಿಂ ಆಕ್ರಮಣಕಾರರಿಂದ ಸತತವಾಗಿ 76 ಬಾರಿ ದಾಳಿಗಳಾಗುತ್ತದೆ ಅಲ್ಲಿರುವ ಶ್ರೀರಾಮ ಜನ್ಮಸ್ಥಾನ ಮಾತ್ರವಲ್ಲದೆ ಕನಕ ಭವನ, ಹನುಮಾನ್ ಗಢಿ, ತ್ರೇತಾನಾಥ್ ಮಂದಿರ, ಮಣಿ ಪರ್ವತ ಮತ್ತು ಸ್ವರ್ಗ ದ್ವಾರಗಳೂ ಆಕ್ರಮಕ್ಕೆ ಒಳಗಾಗಿವೆ. ಗುಲಾಮ್ ಅಬ್ದಗೀನ್ ಕಾಲದಲ್ಲಿ ಒಮ್ಮೆ ದಾಳಿಯಾದರೆ, ಶಾ ಫಿರೋಜ್ (10), ಮಹಮ್ಮದ್ ತುಘಲಕ್(2), ಬಾಬರ್(4), ಹುಮಾಯೂನ್(10), ಅಕ್ಬರ್(16), ಔರಂಗಜೇಬ್(21), ಸಯ್ಯದ್ ಸಲಾ ರಮಾಸಾವೂದ್(2), ನವಾಬ್ ಶಾದ್ ಅಲಿ(4), ಸಿಖಂದರ್ ಲೋದಿ(1), ನಾಸಿರುದ್ದೀನ್ ಹೈದರ್(3), ಬ್ರಿಟಿಷ್(2) ಅವಧಿಯಲ್ಲಿ ಸೇರಿ 76 ಬಾರಿ ದಾಳಿಗಳಾಗಿವೆ.
ಯುದ್ಧನೀತಿ ಏನು ಆಯೋಧ್ಯೆಯಲ್ಲಿ ಆದದ್ದೇನು?
ಒಬ್ಬ ರಾಜ ಇನ್ನೊಬ್ಬ ರಾಜನ ಮೇಲೆ ರಾಜ ಯುದ್ದ ಮಾಡಿದರೆ ಯುದ್ಧನೀತಿಯಂತೆ ಸೋತ ರಾಜನನ್ನು ಗೆದ್ದ ರಾಜ ಬಂಧಿಸುವುದು ರಾಜಧಾನಿಯನ್ನು ವಶಪಡಿಸಿಕೊಳ್ಳುವುದು ಸಾಮನ್ಯ ಆದರೆ ಆಯೋಧ್ಯೆ ಮೇಲೆ ದಾಳಿ ಮಾಡಿದ ಅಕ್ರಮಣಕಾರಿ ಕ್ರೂರಿಗಳಿಗೆ ಚಿನ್ನ, ವಜ್ರ, ವೈಢೂರ್ಯ ಸಿಗಲಿಲ್ಲ. ಹಾಗಾದರೆ ಆರ್ಥಿಕವಾಗಿ ಖಾಲಿಯಾದಂತ ಅಯೋಧ್ಯೆಯ ಮೇಲೆ ದಾಳಿ ಮಾಡಲು ದಾಳಿಕೋರರ ಉದ್ದೇಶ ಏನು ಎಂಬ ಪ್ರಶ್ನೆ ಮೂಡುವುದು ಸಹಜ, ಆಯೋಧ್ಯೆ ಹಿಂದೂಗಳ ಶ್ರದ್ಧಾ ಕೇಂದ್ರ ಇದರ ಮೇಲೆ ದಾಳಿ ಮಾಡುವ ಮೂಲಕ ಹಿಂದೂಗಳನ್ನು ಭಾವನೆಗಳನ್ನು ಕೆಣಕುವುದು ಅವರನ್ನು ತುಳಿಯುವುದು ಬೆದರಿಸುವ ತಂತ್ರದ ಭಾಗವಾಗಿ ದಾಳಿಕೋರರೆಲ್ಲ ಅಯೋಧ್ಯೆ ಮೇಲೆ ಕ್ರೂರತ್ವದಿಂದ ಸತತವಾಗಿ ದಾಳಿ ಮಾಡಿ ಈ ನೆಲದ ಶ್ರದ್ಧಾ ಕೇಂದ್ರವನ್ನು ಧ್ವಂಸ ಗೊಳಿಸಿದಲ್ಲದೆ ಎದುರಿಸಿದವರನ್ನು ನಾಶಮಾಡುತ್ತ ಉಳಿದವರು ಇದನ್ನು ನೋಡಿ ಭಯದಿಂದ ಶರಣಗತರಾಗಿ ದಾಳಿಕೊರರ ಆಡಳಿತವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ಉದ್ದೇಶದಿಂದ ದಾಳಿ ಅಗಿದೆ ಎನ್ನುತ್ತಾರೆ ಇತಿಹಾಸಕಾರರು.
ಭಾರತದಲ್ಲಿ ಸರ್ವಾಧಿಕಾರಿ ಧೋರಣೆ ಇರಲಿಲ್ಲ
ಭಾರತ ಯಾವುದೇ ಚರ್ಕವರ್ತಿಯ ಧೀರ್ಘಕಾಲದ ಆಡಳಿತಕ್ಕೆ ಒಳಪಟ್ಟಿಲ್ಲ,ಛತ್ರಪತಿ, ಚಕ್ರವರ್ತಿ, ಮಹಾರಾಜ, ರಾಜರಿಂದ ಸಾಮಂತರವರೆಗೆ ವಿಭಿನ್ನ ಪ್ರದೇಶಗಳು, ಪ್ರಾಂತ್ಯಗಳು ಹಾಗು ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದ ಭಾರತದಲ್ಲಿ ಯಾವ ಹಂತದಲ್ಲೂ ಸರ್ವಾಧಿಕಾರಿ ಧೋರಣೆ ಇರಲಿಲ್ಲ ಹೀಗಾಗಿ ವಿಭಿನ್ನ ಆಡಳಿತ ಕೇಂದ್ರಗಳಿದ್ದಾಗಿದ್ದ ಭಾರತದಲ್ಲಿನ ಶಕ್ತಿ ಪೀಠಗಳು, ಜ್ಯೋತಿರ್ಲಿಂಗಗಳು, ಶಂಕರಾಚಾರ್ಯರು ಸ್ಥಾಪಿಸಿದ ಚತುರಾಮ್ನಾಯ ಪೀಠಗಳ ಜತೆಗೆ ರಾಮ ಜನ್ಮಭೂಮಿ, ಕೃಷ್ಣ ಜನ್ಮಭೂಮಿ, ದ್ವಾರಕ,ಕಾಶಿಯಂತಹ ನೂರಾರು ತೀರ್ಥಕ್ಷೇತ್ರಗಳು ಭಾರತವನ್ನು ಸಾಂಸ್ಕೃತಿಕವಾಗಿ ಜೋಡಿಸಲಾಗಿತ್ತು,ವಿಶೇಷವಾಗಿ ಆತಿಥ್ಯಕ್ಕೆ ಮತ್ತೊಂದು ಹೆಸರು ಅಯೋಧ್ಯೆಯಲ್ಲಿ ಕುಟುಂಬಕರಿಂದ ಸದಾ ಸಮೃದ್ಧಗೊಂಡ ನಗರ ಎಂದು ಅಯೋಧ್ಯೆಯ ಜನ ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಗಳಿಲ್ಲದೇ ಊಟಮಾಡಕೂಡದು ಎಂಬ ಭಾವನಾತ್ಮಕವಾಗಿದ್ದರು ಎಂದು ಮಹರ್ಷಿ ವಾಲ್ಮೀಕಿ ಉಲ್ಲೇಖಿಸುತ್ತಾರೆ.
ಅಯೋಧ್ಯೆಯ ಚರಿತ್ರೆ
ರಾಮಾಯಣ ಕಾಲದಲ್ಲಿ ಕೋಸಲ ದೇಶದ ರಾಜಧಾನಿಯಾಗಿತ್ತು ಎಂದು ಪ್ರತೀತಿ ಅಯೋಧ್ಯೆಯ ನಗರವನ್ನು ಕಟ್ಟಿದ ವಾಸ್ತು ತಜ್ಞನ ಪ್ರಕಾರ ನಗರವನ್ನು ಹೇಗೆ ನಿರ್ಮಿಸಿದ ಎನ್ನುವುದು ಮಹತ್ವದ್ದು. ಹನ್ನೆರಡು ಯೋಜನ ಉದ್ದ ಮತ್ತು ಮೂರು ಯೋಜನ ಅಗಲವಾಗಿತ್ತು ಎಂಬ ಉಲ್ಲೇಖವಿದೆ.ನಗರದ ವಾಸ್ತು ಸೌಂದರ್ಯವು ಇಂದ್ರನ ಅಮರಾವತಿಯಂತೆ ಶೋಭಿಸುತ್ತಿತ್ತು. ಏಳು ಅಂತಸ್ತಿನ ಉಪ್ಪರಿಗೆಗಳಿಂದ ಶೋಭಿಸುತ್ತಿದ್ದ ಅಯೋಧ್ದೆಯ ಕಟ್ಟಡಗಳು ಪದ್ಮರಾಗ ಗೋಮೇಧಿಕ ಇಂದ್ರನೀಲಾದಿ ರತ್ನಗಳಿಂದಲೂ ಶೋಭಿಸುತ್ತಿತ್ತು. ಹೀಗೆ ಈ ಎಲ್ಲಾ ಎಂಟು ಮೂಲೆಗಳಲ್ಲಿ ಸುಗಂಧ ಪೂಸಿಕೊಂಡ ಪುರುಷರು ಮತ್ತು ಲೋಕಸುಂದರಿಯಾದ ಸ್ತ್ರೀಯರು ಆಭರಣಗಳನ್ನು ಧರಿಸಿ ಸಡಗರದಿಂದ ತಿರುಗಾಡುತ್ತಿದ್ದು,ಬೆಳಕಿನ ಕಿರಣಗಳು ಅಭರಣಗಳಿಂದ ಪ್ರತಿಫಲಿಸಿ ನಕ್ಷತ್ರಲೋಕವೇ ಧರೆಗೆ ಇಳಿದು ಬಂದಂತೆ ಪ್ರಜ್ವಲಿಸುತಿತ್ತು. ಮನೆಗಳೆಲ್ಲ ಸಮತಟ್ಟಾದ ನೆಲದಲ್ಲಿ ಸುಂದರವಾಗಿ ನಿರ್ಮಿಸಿದ್ದು ಕೆಲವು ಕಟ್ಟಡಗಳು ನೂರು ಮಹಡಿಗಳಷ್ಟು ಎತ್ತರ ಹೊಂದಿದ್ದವು. ಬಹುಮಹಡಿ ಕಟ್ಟಡಗಳು ಮತ್ತು ಅವುಗಳ ಮೇಲೆ ಹಾರಾಡುತ್ತಿದ್ದ ಧ್ವಜ-ಪತಾಕೆಗಳು ಸಾಕೇತದ ಕೀರ್ತಿಯನ್ನು ಬಾನೆತ್ತರೆಕ್ಕೆ ಹಾರಿಸುತ್ತಿರುವಂತೆ ತೋರುತ್ತಿತ್ತು.ಮುಂದೆ ನಗರವನ್ನು ಸೂರ್ಯವಂಶದ ರಾಜರು ಹಲವಾರು ಶತಮಾನಗಳಿಂದ ಆಳಿದರು. ಅವರ ಸಂತತಿ ಮುಂದೆ ಚೆಲ್ಲಾಪಿಲ್ಲಿಯಾಗಿ ಹಲವಾರು ಪ್ರದೇಶಗಳಲ್ಲಿ ಹರಡಿಕೊಂಡ ನಂತರ ಮಗಧದ ಮೌರ್ಯರು, ಗುಪ್ತರು ಮತ್ತು ಕನೌಜ್ನ ಆಡಳಿತಗಾರರ ಆಳ್ವಿಕೆಯಲ್ಲಿ ಒಳಪಟ್ಟಿತ್ತು. ರಾಜರುಗಳಲ್ಲಿ ವಿಶೇಷವಾದ ಭಕ್ತಿ ಗೌರವವುಳ್ಳವರಾಗಿದ್ದರು. ಸತ್ಯ-ಧರ್ಮಗಳನ್ನು ಚಾಚೂ ತಪ್ಪದೇ ಅನುಸರಿಸುತ್ತಿದ್ದರು. ಅನಂತರ ನಗರದ ವೈಭವದ ಮೇಲೆ ಅನೇಕ ದಾಳಿಗಳು ನಡೆದ ನಂತರ ಅಯೋಧ್ಯಾ ನಗರ ವೈಭವ ಕಳೆದುಕೊಂಡು ಮಸುಕಾಯಿತು.ಈಗ ಇದರ ಯಾವುದೇ ಕುರುಹುಗಳಿಲ್ಲವಾದರೂ ಈಗಿನ ಪಟ್ಟಣದ ಸುತ್ತಲೂ ಇರುವ ಎತ್ತರದ ದಿಬ್ಬದ ಅಂದಾಜಿನಲ್ಲಿ ಈ ನಗರವನ್ನು ಗುರುತಿಸಲಾಗುತ್ತದೆ.
ಮಹತ್ವ ಕಳೆದುಕೊಂಡ ಅಯೋಧ್ಯೆಯಲ್ಲಿ ಆದದ್ದೇನು?
ಕ್ರಿ.ಶ 1526 ರಲ್ಲಿ, ಬಾಬರ್ ಅಯೋಧ್ಯೆಯ ಮೇಲೆ ದಾಳಿ ಮಾಡಿ 1528 ರಲ್ಲಿ ಅಕ್ರಮವಾಗಿ ಇಲ್ಲಿ ಮಸೀದಿಯನ್ನು ನಿರ್ಮಿಸಿದ್ದು, ದೆಹಲಿಯ ಸುಲ್ತಾನನ ಕಾಲದಲ್ಲಿ ಇದು ಅವಧ್ ಪ್ರದೇಶದ ಆಡಳಿತ ಕೇಂದ್ರವಾಗಿ,18 ನೆಯ ಶತಮಾನದಲ್ಲಿ ಅವಧ್ ನ ನವಾಬರ ರಾಜಧಾನಿಯಾಗಿತ್ತು.1765 ರಲ್ಲಿ ಶುಜಾ-ಉದ್-ದೌಲನು ಫೈಜಾಬಾದನ್ನು ತನ್ನ ಆಡಳಿತ ಕೇಂದ್ರವನ್ನಾಗಿಸಿಕೊಂಡ ನಂತರ ಅಯೋಧ್ಯೆ ತನ್ನ ಎಲ್ಲಾ ಪ್ರಾಮುಖ್ಯತೆಯನ್ನು ಕಳಕೊಂಡು ಕೇವಲ ಧಾರ್ಮಿಕ ಕ್ಷೇತ್ರವಾಯಿತು.ಸುಮಾರು ವರ್ಷಗಳ ನಂತರ 1992 ರಲ್ಲಿ ರಾಮ ಜನ್ಮಭೂಮಿ ಚಳವಳಿಯ ಆಂದೋಲನದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮಸೀದಿಯನ್ನು ಕೆಡವಲಾಯಿತು.
ಗತ ವೈಭವದತ್ತ ಅಯೋಧ್ಯೆ
ಸರ್ವೋಚ್ಛ ನ್ಯಾಯಲದ ತೀರ್ಪು ಬಂದ ನಂತರ ಕೋಟ್ಯಂತರ ಹಿಂದೂಗಳ ಶತಶತಮಾನಗಳ ಕನಸು ಸಾಕಾರಗೊಂಡು ಸುಮಾರು 1500 ಕೋಟಿ ಚೆಚ್ಚದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದೆ, ಜನವರಿ 22 ರಂದು ರಾಮಲಲ್ಲಾನ ವಿಗ್ರಹ ಪ್ರಾಣಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಅಯೋಧ್ಯೆ ನಗರ ಅಯೋಧ್ಯೆ ಪುನರ್ಜಿವ ಪಡೆದು ಪುನರ್ ವೈಭವ ಮರುಗಳಿಸುತ್ತಿದೆ ಅಯೋಧ್ಯೆ ನಗರದಲ್ಲಿ ನಾಗರಿಕ ಸೌಲಭ್ಯಗಳ ನವೀಕರಣಗೊಂಡಿದೆ ವಿಶ್ವದರ್ಜೆಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು 11,100 ಕೋಟಿ ರೂ. ಗಿಂತ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಶ್ರೀರಾಮ ಮಂದಿರ ದೇವಾಲಯದ ವಾಸ್ತುಶಿಲ್ಪ ಚಿತ್ರಿಸಿರುವ ಟರ್ಮಿನಲ್ ಕಟ್ಟಡದ ಮುಂಭಾಗ, ಅಯೋಧ್ಯೆಯ ಶ್ರೀ ವಾಲ್ಮಿಕೀ ಮಹರ್ಷಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಾಗಿದೆ.ಅಯೋಧೆ ಧಾಮ ರೈಲ್ವೇ ಜಂಕ್ಷನ್ ನಿಲ್ದಾಣ ಲೋಕಾರ್ಪಣೆಯಾಗಿದೆ.
ಶ್ರೀರಾಮನ ಭವ್ಯ ಮಂದಿರದ ಲೋಕಾರ್ಪಣೆಯೊಂದಿಗೆ ಇಡೀ ಜಗತ್ತಿನ ಗಮನವನ್ನು ಮತ್ತೊಮ್ಮೆ ಅಯೋಧ್ಯೆ ಸೆಳೆಯುತ್ತದೆ. ಹಾಗು ಭಾರತದ ನವಮನ್ವಂತರದ ತೀರ್ಥಕ್ಷೇತ್ರಾಧರಿತ ಪ್ರಮುಖ ಪ್ರವಾಸೀ ಧಾಮವಾಗಿ ಅಯೋಧ್ಯೆ ಗುರುತಿಸಲ್ಪಡುತ್ತಿದೆ ಎನ್ನುವ ನಂಬಿಕೆ.